ETV Bharat / sports

ಹರ್ನಿಯಾ ಚಿಕಿತ್ಸೆಗೆ ಒಳಗಾದ ಮೆಡ್ವಡೇವ್​... ಫ್ರೆಂಚ್​ ಓಪನ್​ ಮಿಸ್​ ಸಾಧ್ಯತೆ

author img

By

Published : Apr 2, 2022, 11:02 PM IST

Daniil Medvedev
ಡೇನಿಯಲ್​ ಮೆಡ್ವದೇವ್

ಅಮೆರಿಕಾ ಓಪನ್​ ಚಾಂಪಿಯನ್​ ಆಗಿರುವ ಮಾಜಿ ವಿಶ್ವ ನಂ.1 ಆಟಗಾರ ಮೆಡ್ವಡೇವ್​ ತಾವು ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಮೊನಾಕೊ: ವಿಶ್ವ ನಂ.2 ಟೆನಿಸ್​ ಆಟಗಾರ ರಷ್ಯಾದ ಡೇನಿಯಲ್​ ಮೆಡ್ವಡೇವ್​ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. 2 ತಿಂಗಳು ವಿಶ್ರಾಂತಿ ಪಡೆಯಬೇಕಿರುವ ಕಾರಣ ಅವರು ಮುಂಬರುವ ಫ್ರೆಂಚ್​ ಓಪನ್​ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ.

ಅಮೆರಿಕಾ ಓಪನ್​ ಚಾಂಪಿಯನ್​ ಆಗಿರುವ ಮಾಜಿ ವಿಶ್ವ ನಂ.1 ಆಟಗಾರ ಮೆಡ್ವದೇವ್​ ತಾವು ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ನಾನು ಕೆಲ ದಿನಗಳಿಂದ ಹರ್ನಿಯಾದಿಂದ ಬಳಲುತ್ತಿದ್ದೇನೆ. ಇದರಿಂದಾಗಿ ಮುಂದಿನ 2 ತಿಂಗಳು ಅಂಕಣದಿಂದ ದೂರ ಉಳಿಯಬೇಕಾಗಿದೆ. ಚೇತರಿಸಿಕೊಂಡ ಬಳಿಕ ಮತ್ತೆ ಅಂಕಣಕ್ಕೆ ಇಳಿಯಲಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಫೋಟೋವನ್ನೂ ಟ್ವಿಟರ್​ನಲ್ಲಿ ಬಿಟ್ಟಿರುವ ಮೆಡ್ವಡೇವ್​, ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಕ್ಯಾಪ್ಷನ್​ ನೀಡಿದ್ದಾರೆ.

  • Hi everyone. The last months I have been playing with a small hernia. Together with my team I have decided to have a small procedure done to fix the problem. I will likely be out for the next 1 - 2 months and will work hard to be back on court soon. Thanks for all the support.

    — Daniil Medvedev (@DaniilMedwed) April 2, 2022 " class="align-text-top noRightClick twitterSection" data=" ">

ಅಲ್ಲದೇ ಮೇ 22 ರಿಂದ ಪ್ರಾರಂಭವಾಗುವ ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಯಾದ ಫ್ರೆಂಚ್ ಓಪನ್ ಪಂದ್ಯಾವಳಿಯನ್ನು ಮೆಡ್ವೆಡೇವ್ ಕಳೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಅವರು ಕಳೆದ ವರ್ಷ ಈ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದರು.

ಈ ವರ್ಷದ ಆರಂಭದಲ್ಲಿ ವಿಶ್ವ ನಂ.1 ಸ್ಥಾನದಲ್ಲಿದ್ದ ನೊವಾಕ್​ ಜೊಕೊವಿಕ್​ ಸ್ಥಾನವನ್ನು ಕೆಳಗಿಳಿಸಿದ್ದ ಮೆಡ್ವಡೇವ್​, ಕ್ಯಾಲಿಫೋರ್ನಿಯಾದಲ್ಲಿ ನಡೆದಿದ್ದ ಇಂಡಿಯನ್​ ವೇಲ್ಸ್​ ಟೂರ್ನಿಯಲ್ಲಿ ಸೋತ ಬಳಿಕ ನಂ.1 ಸ್ಥಾನ ಕಳೆದುಕೊಂಡಿದ್ದರು.

ಇದನ್ನೂ ಓದಿ: ಶುಭ್​ಮನ್​ ಗಿಲ್​ ಅರ್ಧಶತಕ... ಡೆಲ್ಲಿ ಕ್ಯಾಪಿಟಲ್ಸ್​ಗೆ 172 ರನ್​ ಗುರಿ ನೀಡಿದ ಗುಜರಾತ್​ ಟೈಟಾನ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.