ETV Bharat / sports

90 ಮೀಟರ್​ ಜಾವಲಿನ್​ ಎಸೆದು ಅತ್ಯುತ್ತಮರ ಪಟ್ಟಿಗೆ ಸೇರಬೇಕು: ಚಿನ್ನದ ಹುಡ್ಗ ನೀರಜ್​ ಚೋಪ್ರಾ ಗುರಿ ​

author img

By

Published : Dec 30, 2021, 3:15 PM IST

Indian javelin thrower Neeraj Chopra
ನೀರಜ್ ಚೋಪ್ರಾ ಜಾವಲಿನ್ ಥ್ರೋವರ್​

Olympian Neeraj Chopra next Target: ಪದಕ ಗೆಲ್ಲುವುದು ಒಂದು ವಿಷಯ, ಹೆಚ್ಚು ದೂರ ಎಸೆದು ಮೈಲಿಗಲ್ಲು ನಿರ್ಮಿಸುವುದು ಮತ್ತೊಂದು ವಿಷಯವಾಗಿದೆ. 90 ಮೀಟರ್​ ಕ್ರಾಸ್​ ಮಾಡುವುದು ನನ್ನನ್ನು ವಿಶ್ವ ಅತ್ಯುತ್ತಮ ಎಸೆತಗಾರರ ಪಟ್ಟಿಗೆ ಸೇರಿಸಲಿದೆ ಎಂದು ನೀರಜ್​ ವರ್ಚುವಲ್​ ಮಾಧ್ಯಮ ಸಂವಾದದಲ್ಲಿ ತಿಳಿಸಿದ್ದಾರೆ.

ನವದೆಹಲಿ: ಒಲಿಂಪಿಕ್ಸ್​ನಲ್ಲಿ​ ಚಿನ್ನದ ಪದಕ ಗೆದ್ದಿರುವ ಭಾರತದ ಸ್ಟಾರ್ ಜಾವಲಿನ್ ಎಸೆತಗಾರ ನೀರಜ್​ ಚೋಪ್ರಾ, ಭವಿಷ್ಯದಲ್ಲಿ 90 ಮೀಟರ್​ ದೂರ ಎಸೆದರೆ ತಮ್ಮನ್ನು ವಿಶ್ವದ ಶ್ರೇಷ್ಠ ಎಸೆತಗಾರರ ಲಿಸ್ಟ್​​ನಲ್ಲಿ ಸೇರಿಸಲಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನೀರಜ್​ ಟೋಕಿಯೋ ಒಲಿಂಪಿಕ್ಸ್​​ನಲ್ಲಿ 87.58 ಮೀಟರ್​ ಎಸೆದು ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ತಂದುಕೊಟ್ಟಿದ್ದರು. ಇದು ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ದೊರೆತ ಮೊದಲ ಚಿನ್ನದ ಪದಕವಾಗಿತ್ತು. ಇದೀಗ ಅವರು 90 ಮೀಟರ್​ ಎಸೆದು ವಿಶ್ವ ಶ್ರೇಷ್ಠರ ಗುಂಪಿನಲ್ಲಿ ಸೇರುವ ಬಯಕೆ ವ್ಯಕ್ತಪಡಿಸಿದ್ದಾರೆ. 88.07 ಅವರ ವೈಯಕ್ತಿಕ ಅತ್ಯುತ್ತಮ ದಾಖಲೆಯಾಗಿದೆ.

ಪದಕ ಗೆಲ್ಲುವುದು ಒಂದು ವಿಷಯ, ದೂರ ಎಸೆದು ಮೈಲಿಗಲ್ಲು ನಿರ್ಮಿಸುವುದು ಮತ್ತೊಂದು ವಿಷಯವಾಗಿದೆ. 90 ಮೀಟರ್​ ಕ್ರಾಸ್​ ಮಾಡುವುದು ನನ್ನನ್ನು ವಿಶ್ವ ಅತ್ಯುತ್ತಮ ಎಸೆತಗಾರರ ಪಟ್ಟಿಗೆ ಸೇರಿಸಲಿದೆ ಎಂದು ನೀರಜ್​ ವರ್ಚುವಲ್​ ಮಾಧ್ಯಮ ಸಂವಾದದಲ್ಲಿ ತಿಳಿಸಿದ್ದಾರೆ.

ನಾನು ಈಗಾಗಲೇ 90 ಮೀಟರ್​ಗೆ ಹತ್ತಿರವಾಗಿದ್ದೇನೆ ಮತ್ತು ಶೀಘ್ರದಲ್ಲೇ ಅದಕ್ಕೆ ಗುರಿಯಿಡಲಿದ್ದೇನೆ, ಆದರೆ ಅದರ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳಲ್ಲ. ಆ ಗುರಿಯನ್ನು ತಲುಪಲಾಗದಿದ್ದರೇ ಏನೋ ಕಳೆದುಕೊಳ್ಳುತ್ತೇನೆ ಎನ್ನುವ ಒತ್ತಡವೇನೂ ನನ್ನ ಮೇಲೆ ಇಲ್ಲವೆಂದು ಚೋಪ್ರಾ ಸ್ಪಷ್ಟಪಡಿಸಿದ್ದಾರೆ.

ಗುರಿ ತಲುಪಲು ಕೇವಲ 2 ಮೀಟರ್​ ಅಂತರವಿದೆ. ಅದೇನು ಕಡಿಮೆ ಏನಲ್ಲ, ಆದರೆ ಅದು ಅಸಾಧ್ಯವಾದದ್ದೆಂದು ಕೂಡ ನಾನು ಭಾವಿಸಲ್ಲ, ಏಕೆಂದರೆ ನನಗೆ ತರಬೇತಿ ಉತ್ತಮವಾಗಿದೆ. ಅದರ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳಲ್ಲ. ಈ ವರ್ಷ ನಾನದನ್ನು ಬ್ರೇಕ್​ ಮಾಡಬೇಕಾದ ತಡೆಗೋಡೆ ಎಂದುಕೊಂಡಿದ್ದೇನೆ ಎಂದು ನೀರಜ್​ ಚೊಪ್ರಾ ಹೇಳಿದ್ದಾರೆ.

ಇದನ್ನೂ ಓದಿ:IND vs SA Test: ಟೆಸ್ಟ್ ಕ್ರಿಕೆಟ್​ನಲ್ಲಿ ಹೊಸ ಮೈಲುಗಲ್ಲು ತಲುಪಿದ ​ಜಸ್ಪ್ರೀತ್ ಬುಮ್ರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.