ETV Bharat / sports

ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​: ಧೋನಿ ದಾಖಲೆ ಮುರಿಯಲಿರುವ ವಿರಾಟ್​ ಮತ್ತು ರೋಹಿತ್..

author img

By

Published : Jun 4, 2023, 8:51 PM IST

Virat Kohli and Rohit sharma played most Icc Tournament Finals after yuvraj singh
ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​: ಧೋನಿ ದಾಖಲೆ ಮುರಿಯಲಿರುವ ವಿರಾಟ್​ ಮತ್ತು ರೋಹಿತ್..

ಜೂನ್​ 7 ರಿಂದ 11 ವರೆಗೆ ಇಂಗ್ಲೆಂಡ್​ನ ಓವೆಲ್​ನಲ್ಲಿ ನಡೆಯುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ವಿರಾಟ್​ ಮತ್ತು ರೋಹಿತ್​ ಶರ್ಮಾ ಮತ್ತೊಂದು ದಾಖಲೆ ಬರೆಯಲಿದ್ದಾರೆ.

ಮಹೇಂದ್ರ ಸಿಂಗ್​ ಧೋನಿ ಭಾರತ ತಂಡ ಸರ್ವಶ್ರೇಷ್ಠ ಆಟಗಾರ ಎಂದು ಬಣ್ಣಿಸಿದರೆ ತಪ್ಪಾಗದು. ಮಾಹಿಯನ್ನು ಮಾಜಿ ಆಟಗಾರರು ಸಹ ಇದೇ ಮನ್ನಣೆಯಿಂದ ಗುರುತಿಸುತ್ತಾರೆ. ಭಾರತಕ್ಕೆ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದು ಕೊಟ್ಟಿದ್ದು ಮಾಸ್ಟರ್​ ಪ್ಲಾನರ್​ ಧೋನಿಯ ನಾಯಕತ್ವಕ್ಕೆ ಹಿಡಿದ ಕೈಗನ್ನಡಿ. ಅಲ್ಲದೇ ಭಾರತದ ಚುಟುಕು ಸಮರ ಐಪಿಎಲ್​ನ ಯಶಸ್ವಿ ನಾಯಕ. ಈ ಬಾರಿ ಮತ್ತೆ ಅದನ್ನು ಪ್ರೂವ್​ ಮಾಡಿದ್ದಾರೆ. ಐದನೇ ಬಾರಿಗೆ ಚೆನ್ನೈ ಸೂಪರ್​ ಕಿಂಗ್ಸ್​ಗೆ ಟ್ರೋಫಿ ಗೆದ್ದುಕೊಟ್ಟಿದ್ದಾರೆ.

ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಆಡುವ ಮೂಲಕ ಧೋನಿಯ ರೆಕಾರ್ಡ್​ನ್ನು ಹಿಂದಿಕ್ಕಲಿದ್ದಾರೆ. ಈವರೆಗೆ ಮೂವರು ಆಟಗಾರರು ಜಂಟಿಯಾಗಿ ಎರಡನೇ ಸ್ಥಾನವನ್ನು ಅಲಂಕರಿಸಿದ್ದರು. ಆದರೆ ಡಬ್ಲ್ಯೂಟಿಸಿ ಫೈನಲ್​ ನಂತರ ವಿರಾಟ್​ ಮತ್ತು ಭಾರತ ತಂಡದ ನಾಯಕ ರೋಹಿತ್​ ಶರ್ಮಾ ಮಾಹಿಯನ್ನು ಮೂರನೇ ಸ್ಥಾನಕ್ಕೆ ತಳ್ಳಲಿದ್ದಾರೆ.

ಕಿಂಗ್ ಕೊಹ್ಲಿ ಮತ್ತು ಹಿಟ್​ ಮ್ಯಾನ್​ ರೋಹಿತ್ ಜೂನ್​ 7ರಿಂದ 11ರ ವರೆಗೆ ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಂತಿಮ ಪಂದ್ಯ ಆಡುವ ಮೂಲಕ 6 ನೇ ಐಸಿಸಿ ಟ್ರೋಫಿಯ ಫೈನಲ್ ಆಡಿದ ಖ್ಯಾತಿಗೆ ಒಳಗಾಗುತ್ತಾರೆ. ಪ್ರಸ್ತುತ ಧೋನಿ, ವಿರಾಟ್​, ರೋಹಿತ್​ ಸದ್ಯ ತಲಾ ಐದು ಬಾರಿ ಐಸಿಸಿ ಫೈನಲ್​​ ಆಡಿದ್ದಾರೆ. ಡಬ್ಲ್ಯೂಟಿಸಿ ಫೈನಲ್​ನಿಂದ ಧೋನಿ ಮೂರನೇ ಸ್ಥಾನವನ್ನು ಪಡೆಯುತ್ತಾರೆ. ಇನ್ನು ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ನಲ್ಲಿ ಭಾರತ ಫೈನಲ್ ಪ್ರವೇಶಿಸಿದಲ್ಲಿ ಇಬ್ಬರು ಅಗ್ರಸ್ಥಾನಕ್ಕೆ ಏರಲಿದ್ದಾರೆ.

5 ಐಸಿಸಿ ಫೈನಲ್​ ಆಡಿರುವ ಧೋನಿ: ಮಹೇಂದ್ರ ಸಿಂಗ್​ ಧೋನಿ ಎರಡು ವಿಶ್ವ ಕಪ್​ ಮತ್ತು ಒಂದು ಚಾಂಪಿಯನ್ಸ್​ ಟ್ರೋಫಿ ಸೇರಿ 3 ಐಸಿಸಿ ಟ್ರೋಫಿಗಳನ್ನು ನಾಯಕರಾಗಿ ಭಾರತಕ್ಕೆ ತಂಡಿದ್ದಾರೆ. 2007ರ ಟಿ20 ವಿಶ್ವಕಪ್​, 2011 ಏಕದಿನ ವಿಶ್ವಕಪ್​ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದರು. 2014ರ ಟಿ20 ವಿಶ್ವಕಪ್ ಫೈನಲ್, 2017 ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗಳಲ್ಲೂ ಆಡಿದ್ದರು.

ವಿರಾಟ್ ಈವರೆಗೆ 5 ಫೈನಲ್​ ಆಡಿದ್ದಾರೆ: ವಿರಾಟ್​ ಕೊಹ್ಲಿ 2011ರಲ್ಲಿ ಮೊದಲ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್​ ಆಡಿದ್ದರು. ನಂತರ 2013ರ ಚಾಂಪಿಯನ್ಸ್ ಫೈನಲ್​​​, 2014ರ ಟಿ20 ವಿಶ್ವಕಪ್​​ ಫೈನಲ್​, 2017ರಲ್ಲಿ ಚಾಂಪಿಯನ್ಸ್​ ಟ್ರೋಫಿ, 2021ರಲ್ಲಿ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ನಲ್ಲಿ ಕಣಕ್ಕಿಳಿದ್ದರು. ಅಂಡರ್-19 ವಿಶ್ವಕಪ್​ನ್ನು ನಾಯಕರಾಗಿ ಮುನ್ನಡೆಸಿ ಗೆದ್ದಿದ್ದರು. ಆದರೆ ಇದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ.

ಹಿಟ್​ ಮ್ಯಾನ್​ ಫೈನಲ್​ ಆಡಿದ ವರ್ಷಗಳು: ರೋಹಿತ್ ಶರ್ಮಾ 2007ರಲ್ಲಿ ಐಸಿಸಿ ಟಿ20 ವಿಶ್ವಕಪ್‌ ಫೈನಲ್​ನಲ್ಲಿ ಆಡಿದ್ದು ಅವರ ಮೊದಲ ಫೈನಲ್​ ಮ್ಯಾಚ್​ ಆಗಿದೆ. ನಂತರ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್​​, 2014ರಲ್ಲಿ ಟಿ20 ವಿಶ್ವಕಪ್ ಫೈನಲ್​, 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್​​​ ಮತ್ತು 2021ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​ಗಳನ್ನು ಆಡಿದ್ದಾರೆ.

ಅತಿ ಹೆಚ್ಚು ಫೈನ್​ ಆಡಿದ್ದು ಯುವರಾಜ್​ ಸಿಂಗ್​: ಭಾರತ ತಂಡದಲ್ಲಿ ಐಸಿಸಿ ನಡೆಸುವ ಅತಿ ಹೆಚ್ಚು ಕಪ್​ಗಳ ಫೈನಲ್​ನಲ್ಲಿ ಯುವರಾಜ್​ ಸಿಂಗ್​ ಆಡಿದ್ದಾರೆ. 2000ರಲ್ಲಿ ಮೊದಲ ಐಸಿಸಿ ಫೈನಲ್‌ ಆಡಿದ್ದ ಯುವಿ, ನಂತರ 2002ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್​, 2003ರ ಏಕದಿನ ವಿಶ್ವಕಪ್ ಫೈನಲ್​, 2007ರ ಟಿ20 ವಿಶ್ವಕಪ್ ಫೈನಲ್, 2011ರ ವಿಶ್ವಕಪ್, 2014ರ ಟಿ20 ವಿಶ್ವಕಪ್ ಫೈನಲ್​, 2017 ಚಾಂಪಿಯನ್ಸ್ ಟ್ರೋಫಿ ಸೇರಿ 7 ಐಸಿಸಿ ಟೂರ್ನಿಗನ್ನು ಆಡಿದ್ದಾರೆ.

ದಿಗ್ಗಜ ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ಜಹೀರ್ ಖಾನ್, ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಲಾ 5 ಐಸಿಸಿ ಟೂರ್ನಿಗಳ ಫೈನಲ್‌ಗಳಲ್ಲಿ ಕಣಕ್ಕಿಳಿದಿದ್ದಾರೆ. ಜಡೇಜ ಮತ್ತು ಅಶ್ವಿನ್​ ಸಹ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಆಡುವ ಮೂಲಕ 6ನೇ ಅಂತಿಮ ಪಂದ್ಯದಲ್ಲಿ ಭಾಗವಹಿಸಿದಂತಾಗುತ್ತದೆ.

ಇದನ್ನೂ ಓದಿ: 'ಶ್ರೇಷ್ಠರಲ್ಲಿ ಒಬ್ಬರು..': ವಿರಾಟ್​ ಕೊಹ್ಲಿ ಬಗ್ಗೆ ಆಸಿಸ್​ ಆಟಗಾರರ ಏಕೈಕ ಅಭಿಪ್ರಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.