ETV Bharat / sports

ಹೊಸ ಉದ್ಯೋಗಕ್ಕೆ ಸಜ್ಜಾದ ಧೋನಿ... ಕೃಷಿ ಜತೆಗೆ ಈ ಕ್ಷೇತ್ರಕ್ಕೆ ಕೈ ಹಾಕಿದ ಎಂಎಸ್​!

author img

By

Published : Nov 11, 2020, 1:38 PM IST

ಮಹೇಂದ್ರ ಸಿಂಗ್​ ಧೋನಿ ಇದೀಗ ಹೊಸ ಉದ್ಯೋಗಕ್ಕಾಗಿ ಸಜ್ಜಾಗಿದ್ದು, ರಾಂಚಿಯಲ್ಲಿರುವ ಅವರ ಫಾರ್ಮ್​ಹೌಸ್​ನಲ್ಲಿ ಈ ಕೆಲಸ ಮಾಡಲಿದ್ದಾರೆ.

Mahendra Singh Dhoni
Mahendra Singh Dhoni

ರಾಂಚಿ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಕ್ಯಾಪ್ಟನ್ ಮಹೇಂದ್ರ ಸಿಂಗ್​ ಧೋನಿ ಇದೀಗ ಹೊಸ ಉದ್ಯೋಗಕ್ಕೆ ಕೈಹಾಕಿದ್ದು, ರಾಂಚಿಯಲ್ಲಿ ಈ ಕೆಲಸ ಮಾಡಲು ಈಗಾಗಲೇ ಸಜ್ಜಾಗಿದ್ದಾರೆ.

Mahendra Singh Dhoni
ಮಹೇಂದ್ರ ಸಿಂಗ್ ಧೋನಿ

ರಾಂಚಿಯ ಫಾರ್ಮ್​ ಹೌಸ್​ನಲ್ಲಿ ಇದೀಗ ಮಹೇಂದ್ರ ಸಿಂಗ್ ಧೋನಿ ಮಧ್ಯಪ್ರದೇಶದ ಕಡಕ್‍ನಾಥ್ ತಳಿಯ ಕೋಳಿ ಸಾಕಣೆ ಮಾಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಎರಡು ಸಾವಿರ ಮರಿ ಆರ್ಡರ್​ ಮಾಡಿದ್ದಾರೆ. ಕಡಕ್​ನಾಥ್​ ಕಪ್ಪು ಬಣ್ಣದ ಕೋಳಿಯಾಗಿದ್ದು, ಔಷಧೀಯ ಗುಣ ಹೊಂದಿರುವ ಈ ಕೋಳಿಯಲ್ಲಿ ಪ್ರೋಟಿನ್ ಅಂಶಗಳು ಹೆಚ್ಚಾಗಿರುತ್ತವೆ.

ಈಗಾಗಲೇ ತಮ್ಮ ಬಿಡುವಿನ ಸಮಯದಲ್ಲಿ ಕೃಷಿ ಕೆಲಸದಲ್ಲಿ ಬ್ಯುಸಿಯಾಗಿರುವ ಧೋನಿ ಸದ್ಯ ರಾಂಚಿಯಲ್ಲಿರುವ ಫಾರ್ಮ್​ ಹೌಸ್​ನಲ್ಲಿ ಕೋಳಿ ಸಾಕಾಣಿಕೆ ಮಾಡಲಿದ್ದಾರೆ. ಫಾರ್ಮ್​ ಹೌಸ್​ನಲ್ಲಿ ಕಲ್ಲಂಗಡಿ ಜತೆಗೆ ಈಗಾಗಲೇ ಅನೇಕ ಹಣ್ಣು, ತರಕಾರಿ ಬೆಳೆಯಲಾಗುತ್ತಿದ್ದು, ಅದರ ಜತೆಗೆ ಈ ಕೋಳಿ ಸಾಕಣೆ ಮಾಡಲು ಮುಂದಾಗಿದ್ದಾರೆ. ಡಿಸೆಂಬರ್ 15ರೊಳಗೆ ಕೋಳಿ ಮರಿಗಳು ಇಲ್ಲಿಗೆ ಆಗಮಿಸಲಿವೆ ಎಂದು ತಿಳಿದು ಬಂದಿದೆ. ದುಬೈನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಮುನ್ನಡೆಸಿರುವ ಧೋನಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನು ನೀಡಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.