ETV Bharat / sports

ಕೊಹ್ಲಿಗಿಂತಲೂ ಸೂರ್ಯಕುಮಾರ್​ಗೆ​ 3ನೇ ಬ್ಯಾಟಿಂಗ್ ಕ್ರಮಾಂಕ ಹೆಚ್ಚು ಸೂಕ್ತ: ಗೌತಮ್ ಗಂಭೀರ್

author img

By

Published : Nov 18, 2021, 10:15 PM IST

Suryakumar Yadav vs kohli
ಸೂರ್ಯಕುಮಾರ್ vs ಕೊಹ್ಲಿ

ಸೂರ್ಯಕುಮಾರ್ ಕ್ರಿಕೆಟ್​ನ ಎಲ್ಲಾ ಶಾಟ್​ಗಳನ್ನು ಪ್ರಯೋಗಿಸಬಲ್ಲರು. ಅವರೊಬ್ಬ 360 ಡಿಗ್ರಿ ಬ್ಯಾಟರ್​. ಇದೇ ಕಾರಣಕ್ಕೆ ಅವರಿಗೆ ಬೌಲಿಂಗ್ ಮಾಡಲು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ ವಿರಾಟ್​ ಕೊಹ್ಲಿ ಮರಳಿದರೂ ನಾನು ಈತನನ್ನೇ 3ನೇ ಕ್ರಮಾಂಕದಲ್ಲಿ ನೋಡಲು ಬಯಸುತ್ತೇನೆ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈ: ವಿರಾಟ್​ ಕೊಹ್ಲಿ ಭಾರತ ತಂಡಕ್ಕೆ ಮರಳಿದ ನಂತರವೂ ಸೂರ್ಯಕುಮಾರ್ ಯಾದವ್​ ಅವರು 3ನೇ ಕ್ರಮಾಂಕದಲ್ಲೇ ಆಡಬೇಕೆಂದು ಟೀಮ್ ಮಾಜಿ ಆರಂಭಿಕ ಬ್ಯಾಟರ್​ ಗೌತಮ್​ ಗಂಭೀರ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧ ಸೂರ್ಯಕುಮಾರ್ ಯಾದವ್​ 40 ಎಸೆತಗಳಲ್ಲಿ 62 ರನ್​ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ​ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಮುಂಬೈ ಬ್ಯಾಟರ್​ ಪರ ಗಂಭೀರ್ ಬ್ಯಾಟಿಂಗ್ ಮಾಡಿದ್ದು, ವಿರಾಟ್​ ವಿಶ್ರಾಂತಿ ಮುಗಿಸಿ ಮತ್ತೆ ಟಿ20 ತಂಡಕ್ಕೆ ಮರಳಿದ ನಂತರವೂ ಸೂರ್ಯ ಕುಮಾರ್ 3ರಲ್ಲೇ ಮುಂದುವರಿದರೆ ತಂಡಕ್ಕೆ ಅನುಕೂಲ ಎಂದಿದ್ದಾರೆ.

ಸೂರ್ಯಕುಮಾರ್ 3ನೇ ಕ್ರಮಾಂಕದಲ್ಲಿ ಆಡಬೇಕು ಎನ್ನುವುದಕ್ಕೆ ಹಲವು ಕಾರಣಗಳಿವೆ. ಅವರು ಸ್ಪಿನ್​ಗೆ ಅತ್ಯುತ್ತಮವಾಗಿ ಆಡುತ್ತಾರೆ. ಕ್ರಿಕೆಟ್​ನ ಎಲ್ಲಾ ಶಾಟ್​ಗಳನ್ನು ಪ್ರಯೋಗಿಸಬಲ್ಲರು. ಅವರೊಬ್ಬರು 360 ಡಿಗ್ರಿ ಬ್ಯಾಟರ್​ ಕೂಡ. ಇದೇ ಕಾರಣಕ್ಕೆ ಅವರಿಗೆ ಬೌಲಿಂಗ್ ಮಾಡಲು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ ವಿರಾಟ್​ ಕೊಹ್ಲಿ ಮರಳಿದರೂ, ನಾನು ಈತನನ್ನೇ 3ನೇ ಕ್ರಮಾಂಕದಲ್ಲಿ ನೋಡಲು ಬಯಸುತ್ತೇನೆ. ವಿರಾಟ್​ 4ರಲ್ಲಿ ಆಡಲಿ ಎಂದು ಸ್ಟಾರ್​ ಸ್ಪೋರ್ಟ್ಸ್​ ಕಾರ್ಯಕ್ರಮದಲ್ಲಿ ಗಂಭೀರ್ ಹೇಳಿದ್ದಾರೆ.

ಆರಂಭಿಕರಾದ ರೋಹಿತ್ ಮತ್ತು ಕೆ.ಎಲ್.ರಾಹುಲ್ ಸ್ಪೋಟಕ ಬ್ಯಾಟಿಂಗ್ ಮಾಡಬಲ್ಲರು. ​ ಅವರಿಬ್ಬರು ನೀಡುವ ವೇಗವನ್ನು ಮುಂದುವರಿಸಿಕೊಂಡು ಹೋಗಲು ಸೂರ್ಯಕುಮಾರ್​ 3ನೇ ಕ್ರಮಾಂಕಕ್ಕೆ ಸೂಕ್ತವಾದ ಬ್ಯಾಟರ್​. ಆಸ್ಟ್ರೇಲಿಯಾ ತಂಡದಲ್ಲಿ ಸ್ಮಿತ್​ ನಿರ್ವಹಿಸುವ ಆ್ಯಂಕರ್​ ಜವಾಬ್ದಾರಿಯನ್ನು ಕೊಹ್ಲಿ 4ರಲ್ಲಿ ನಿರ್ವಹಿಸಲಿ. ಇದರಿಂದ ಪಂತ್​, ವೆಂಕಟೇಶ್ ಅಯ್ಯರ್​ ಅಂತಹ ಅನನುಭವಿಗಳಿಂದ ಕೂಡಿರುವ ಮಧ್ಯಮ ಕ್ರಮಾಂಕ ಕೂಡ ಬಲಿಷ್ಠವಾಗಲಿದೆ ಎಂದು ಮಾಜಿ ಆರಂಭಿಕ ಬ್ಯಾಟರ್ ಹೇಳುತ್ತಾರೆ.

ಇದನ್ನೂ ಓದಿ:IND vs NZ 2nd T20I: ರಾಂಚಿಯಲ್ಲಿ ಕಿವೀಸ್ ಮಣಿಸಿ ಸರಣಿ ಗೆಲ್ಲುವ ವಿಶ್ವಾಸದಲ್ಲಿ ರೋಹಿತ್ ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.