ETV Bharat / sports

IPL, ಟಿ-20 ವಿಶ್ವಕಪ್​ನಿಂದ ಹೊರಬಿದ್ದ ಇಂಗ್ಲೆಂಡ್​ ಆಲ್​ರೌಂಡರ್​ ಸ್ಯಾಮ್ ಕರ್ರನ್

author img

By

Published : Oct 5, 2021, 6:19 PM IST

Sam Curran ruled out of T20 World Cup
ಟಿ20 ವಿಶ್ವಕಪ್​ನಿಂದ ಹೊರಬಿದ್ದ ಸ್ಯಾಮ್ ಕರ್ರನ್

ಕರ್ರನ್​ ಒಂದೆರಡು ದಿನಗಳ ಐಪಿಎಲ್ ಬಯೋಬಬಲ್ ತೊರೆದು ಇಂಗ್ಲೆಂಡ್​​ಗೆ ಮರಳಲಿದ್ದು, ಅಲ್ಲಿ ಇಸಿಬಿಯ ವೈದ್ಯಕೀಯ ತಂಡದಿಂದ ಪರಿಶೀಲನೆಗೆ ಒಳಗಾಗಲಿದ್ದಾರೆ.

ದುಬೈ: ಇಂಗ್ಲೆಂಡ್​ ಆಲ್​ರೌಂಡರ್​ ಸ್ಯಾಮ್ ಕರ್ರನ್​ ಬೆನ್ನು ನೋವಿಗೆ( lower - back injury) ಒಳಗಾಗಿದ್ದು, ಮುಂಬರುವ ಟಿ-20 ವಿಶ್ವಕಪ್ ಮತ್ತು 2021ರ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಹೊರಬಿದ್ದಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಮಂಗಳವಾರ ಖಚಿತಪಡಿಸಿದೆ.

ಶನಿವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ನಂತರ ಬೆನ್ನು ನೋವಿನ ಬಗ್ಗೆ ತಿಳಿಸಿದ್ದು, ತಕ್ಷಣವೇ ಅವರನ್ನು ಸ್ಕ್ಯಾನಿಂಗ್​ಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಅವರಿಗೆ ಗಾಯದ ಇರುವ ಬಗ್ಗೆ ಖಚಿತಪಡಿಸಲಾಗಿದೆ.

ಕರ್ರನ್​ ಒಂದೆರಡು ದಿನಗಳ ಐಪಿಎಲ್ ಬಯೋಬಬಲ್ ತೊರೆದು ಇಂಗ್ಲೆಂಡ್​ ಮರಳಲಿದ್ದು, ಅಲ್ಲಿ ಇಸಿಬಿಯ ವೈದ್ಯಕೀಯ ತಂಡದಿಂದ ಪರಿಶೀಲನೆಗೆ ಒಳಗಾಗಲಿದ್ದಾರೆ.

ಇನ್ನು ಟಿ-20 ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ತಂಡಕ್ಕೆ ಕರ್ರನ್​ ಜಾಗದಲ್ಲಿ ಮೀಸಲು ಆಟಗಾರನಾಗಿದ್ದ ಅವರ ಅಣ್ಣ ಟಾಮ್ ಕರ್ರನ್​ ಸೇರಿಕೊಂಡಿದ್ದಾರೆ. ಮೀಸಲು ಆಟಗಾರ ಸ್ಥಾನಕ್ಕೆ ವೇಗಿ ರೀಸ್​ ಟಾಪ್ಲೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬೋರ್ಡ್​ ಮಾಹಿತಿ ನೀಡಿದೆ.

23 ವರ್ಷದ ಕರ್ರನ್​ 2021ರ ಐಪಿಎಲ್​ನಲ್ಲಿ ಸಿಎಸ್​ಕೆ ಪರ 9 ಪಂದ್ಯಗಳನ್ನಾಡಿದ್ದು, 9 ವಿಕೆಟ್​ ಮತ್ತು 4 ಇನ್ನಿಂಗ್ಸ್​ಗಳಿಂದ 56 ರನ್​ಗಳಿಸಿದ್ದಾರೆ.

ಇಂಗ್ಲೆಂಡ್​ ಅಕ್ಟೋಬರ್​ 18ರಂದು ಭಾರತದ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ. ಇನ್ನು ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್​ ಇಂಡೀಸ್​ ತಂಡಗಳ ಜೊತೆಗೆ ಸೂಪರ್​ 12 ಹಂತದಲ್ಲಿ ಸ್ಪರ್ಧಿಸಲಿದೆ.

ಇದನ್ನು ಓದಿ:ಟಿ20 ವಿಶ್ವಕಪ್ ಆಯೋಜನೆಯಿಂದ ಬಿಸಿಸಿಐ ಪಡೆಯುವ ಲಾಭ ಎಷ್ಟು ಕೋಟಿ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.