ETV Bharat / sports

ದ್ರಾವಿಡ್​ ಮಾರ್ಗದರ್ಶನ, ರೋಹಿತ್​ ಚಾಣಾಕ್ಷ ನಡೆ ಭಾರತದ ಗೆಲುವಿನ ಸೂತ್ರ: ರಾಜೇಶ್ ಚೌಹಾಣ್

author img

By ETV Bharat Karnataka Team

Published : Nov 8, 2023, 4:06 PM IST

Former Indian Cricketer Rajesh Chauhan
Former Indian Cricketer Rajesh Chauhan

2023 ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಪ್ರದರ್ಶನವು ಪ್ರಸ್ತುತ ಎಲ್ಲ ನಿರೀಕ್ಷೆಗಳನ್ನು ಮೀರಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಘಟಕಗಳು ತಮ್ಮ ಉತ್ತುಂಗದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಅಸಾಧಾರಣ ಫಾರ್ಮ್ ಅನ್ನು ಪ್ರದರ್ಶಿಸುತ್ತಿದೆ. ಭಾರತದ ಮಾಜಿ ಕ್ರಿಕೆಟಿಗ ರಾಜೇಶ್ ಚೌಹಾಣ್ ಈಟಿವಿ ಭಾರತ್‌ನ ಪ್ರತೀಕ್ ಪಾರ್ಥಸಾರಥಿ ಅವರೊಂದಿಗೆ ವಿಶ್ವಕಪ್‌ನಲ್ಲಿ ಭಾರತದ ದಿಟ್ಟ ನಿರ್ಧಾರಗಳ ಕುರಿತು ಚರ್ಚಿಸಿದ್ದಾರೆ.

ಹೈದರಾಬಾದ್: ಮೂರು ಮಾದರಿಯ ಕ್ರಿಕೆಟ್​ನಲ್ಲಿ ನಂ.1 ಪಟ್ಟವನ್ನು ಟೀಮ್​ ಇಂಡಿಯಾ ಅಲಂಕರಿಸಿದೆ. ಅಲ್ಲದೇ ಅಗ್ರಸ್ಥಾನದ ಅರ್ಹತೆಯನ್ನು ನಡೆಯುತ್ತಿರುವ ವಿಶ್ವಕಪ್​ನಲ್ಲಿ ತೋರ್ಪಡಿಸಿದೆ. ಈ ತಂಡದ ಆಟವನ್ನು ಕಂಡ ಭಾರತದ ಮಾಜಿ ಸ್ಪಿನ್ನರ್ ರಾಜೇಶ್ ಚೌಹಾಣ್ "ಭಾರತೀಯ ಕ್ರಿಕೆಟ್‌ನ ಸುವರ್ಣ ಯುಗ" ಎಂದೇ ಶ್ಲಾಘಿಸಿದ್ದಾರೆ. ಈಗಿನ ಭಾರತ ಕ್ರಿಕೆಟ್ ತಂಡವು ತಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್ ಘಟಕದಲ್ಲಿ ಲಯದಲ್ಲಿ ಕಾಣಿಸಿಕೊಳ್ಳುತ್ತಿದೆ. ರೋಹಿತ್ ಶರ್ಮಾ ಅವರ ನಾಯಕತ್ವ ಮತ್ತು ರಾಹುಲ್ ದ್ರಾವಿಡ್ ಅವರ ಕೋಚಿಂಗ್ ತಂಡವನ್ನು ಚಾಂಪಿಯನ್​ ಅತ್ತ ಮುನ್ನಡೆಸುತ್ತಿದೆ.

  • " class="align-text-top noRightClick twitterSection" data="">

ಅಸಾಧಾರಣ ಬೌಲಿಂಗ್: ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಗಮನಾರ್ಹ ಅಂಶ ಬೌಲಿಂಗ್​ ಎಂದು ರಾಜೇಶ್ ಚೌಹಾಣ್ ಒತ್ತಿ ಹೇಳಿದ್ದಾರೆ. ಐದು ಬೌಲರ್‌ಗಳೊಂದಿಗೆ ಆಡುತ್ತಿರುವುದು ತಂಡ ದಿಟ್ಟ ನಿರ್ಧಾರ. ಬೌಲರ್‌ಗಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದ್ದು, ಮಾತ್ರವಲ್ಲದೇ ತಂಡದ ಆಡಳಿತವು ಅವರ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಸ್ಪಿನ್ನರ್‌ಗಳು ಮತ್ತು ವೇಗಿಗಳನ್ನು ಒಳಗೊಂಡ ಭಾರತದ ಅಸಾಧಾರಣ ಬೌಲಿಂಗ್ ದಾಳಿ ಎದುರಾಳಿಯನ್ನು ಸುಲಭವಾಗಿ ಕಟ್ಟಿಹಾಕುತ್ತಿದೆ.

ಶರ್ಮಾ ಅನುಭವದ ನಾಯಕತ್ವ: ರೋಹಿತ್​ ಶರ್ಮಾ ತಮ್ಮ ನಾಯಕತ್ವದಲ್ಲಿ ಅನುಭವವನ್ನು ತೋರುತ್ತಿದ್ದಾರೆ. ಪಿಚ್​ನ ನಡವಳಿಕೆಯನ್ನೂ ಮೀರಿ ಅವರು ತೆಗೆದುಕೊಳ್ಳುವ ನಿರ್ಣಯಗಳು ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ. ಬೌಲಿಂಗ್​ ಬದಲಾವಣೆಯನ್ನು ಯಶಸ್ವಿ ಆಗಿ ಮಾಡುತ್ತಿದ್ದಾರೆ. ರೋಹಿತ್ ಶರ್ಮಾ ಆರಂಭಿಕರಾಗಿ ತ್ವರಿತ ರನ್ ಗಳಿಸಿ ತಂಡದ ಒತ್ತಡವನ್ನು ಕಡಿಮೆ ಮಾಡುತ್ತಿದ್ದಾರೆ. ಸ್ವಾರ್ಥದಿಂದ ರೋಹಿತ್​ ದಾಖಲೆಗಳಿಗಾಗಿ ಬ್ಯಾಟ್​ ಬೀಸದೇ ಕೇಲವ ತಂಡಕ್ಕಾಗಿ ಆಡುತ್ತಿದ್ದಾರೆ ಎಂದಿದ್ದಾರೆ.

ಆಟಗಾರರ ನಡುವೆ ಅವಿನಾಭಾವ ಸಂಬಂಧ: ಆಟಗಾರರ ನಡುವಿನ ಒಡನಾಟವನ್ನು ನೋಡಲು ಸಂತೋಷವಾಗುತ್ತದೆ. ತಂಡವು ಒಂದು ಕುಟುಂಬದಂತೆ ಕಾರ್ಯನಿರ್ವಹಿಸುತ್ತಿದೆ, ಪರಸ್ಪರರು ಬೆಂಬಲಿಸುತ್ತಾ ಸಾಗುತ್ತಿದ್ದಾರೆ. ಆಟಗಾರರ ನಡುವಿನ ಬಾಂಧವ್ಯವು ನಿಸ್ಸಂದೇಹವಾಗಿ ಭಾರತದ ಯಶಸ್ಸಿನ ಹಿಂದಿನ ಪ್ರೇರಕ ಶಕ್ತಿಯಾಗಿದೆ ಎಂದು ಚೌಹಾನ್ ನಂಬಿದ್ದಾರೆ.

ಗಂಗೂಲಿ ಮತ್ತು ಧೋನಿ ಹಾಕಿದ ತಳಪಾಯ: ರಾಜೇಶ್ ಚೌಹಾಣ್ ಅವರು ಸೌರವ್ ಗಂಗೂಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಯಂತಹ ಮಾರ್ಗದರ್ಶಕರಿಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು, ಅವರು ತಮ್ಮ ಅಧಿಕಾರಾವಧಿಯಲ್ಲಿ ಬೆಳೆಸಿದ ವಾತಾವರಣದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಇದು ಪ್ರಸ್ತುತ ಭಾರತೀಯ ತಂಡದ ಯಶಸ್ಸಿಗೆ ಅಡಿಪಾಯ ಹಾಕಿತು. ಈ ಇಬ್ಬರು ಕ್ರಿಕೆಟ್ ದಂತಕಥೆಗಳು ಭಾರತವನ್ನು ಕೀರ್ತಿಗೆ ಕೊಂಡೊಯ್ದಿದ್ದಾರೆ ಮತ್ತು ರಾಷ್ಟ್ರದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕ್ರಿಕೆಟ್ ಸಂಸ್ಕೃತಿಯನ್ನು ಬೆಳೆಸಿದ್ದಾರೆ ಎಂದರು.

ಕುಲದೀಪ್-ಜಡೇಜಾ ಸ್ಪಿನ್ ಜೋಡಿ: ಅನುಭವಿ ರವಿಚಂದ್ರನ್ ಅಶ್ವಿನ್ ಅವರ ಮೇಲೆ ಕುಲದೀಪ್ ಯಾದವ್ ಅವರ ಆಯ್ಕೆಯ ಸುತ್ತಲಿನ ಆರಂಭಿಕ ಸಂದೇಹವನ್ನು ಚೌಹಾಣ್ ಪರಿಹರಿಸಿದರು. ತಮ್ಮ ಅಮೋಘ ಪ್ರದರ್ಶನದ ಮೂಲಕ ತಂಡದ ಮ್ಯಾನೇಜ್‌ಮೆಂಟ್‌ನ ನಿರ್ಧಾರವನ್ನು ಸರಿ ಎಂದು ಕುಲ್ದೀಪ್ ಸಾಬೀತುಪಡಿಸಿದ್ದಾರೆ. ಅದೇ ರೀತಿ ಜಡೇಜಾ ಬೌಲಿಂಗ್​ ಮತ್ತು ಬ್ಯಾಟಿಂಗ್​ನಲ್ಲಿ ತಂಡಕ್ಕೆ ಸಹಕಾರ ನೀಡುತ್ತಿದ್ದಾರೆ.

ರಾಹುಲ್ ದ್ರಾವಿಡ್ ಬಲಿಷ್ಠ ಆಡಳಿತ: ರಾಹುಲ್ ದ್ರಾವಿಡ್ ಅವರೊಂದಿಗೆ ನಿಕಟ ಒಡನಾಟವನ್ನು ಹೊಂದಿರುವ ರಾಜೇಶ್ ಚೌಹಾಣ್, ದ್ರಾವಿಡ್ ಅಸಾಧಾರಣ ಕೋಚ್ ಮಾತ್ರವಲ್ಲದೇ ತಂಡವನ್ನು ಕೀರ್ತಿ ಪಥದತ್ತ ಕೊಂಡೊಯ್ಯುವ ಸಮರ್ಥ ಆಡಳಿತಗಾರ ಎಂದು ದೃಢಪಡಿಸಿದ್ದಾರೆ. ಪ್ರಸ್ತುತ ತಂಡದ ಗೆಲುವಿನ ನಾಗಾಲೋಟದೊಂದಿಗೆ, ಇಡೀ ಭಾರತವು ಈಗ ಟ್ರೋಫಿಯ ಮೇಲೆ ಕಣ್ಣಿಟ್ಟಿದೆ. ಶಿಬಿರದಲ್ಲಿ ದ್ರಾವಿಡ್ ಅವರ ಉಪಸ್ಥಿತಿಯು ಆಟಗಾರರು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ತಲುಪಲು ಸಹಾಯಮಾಡುತ್ತದೆ.

ತಂಡದಲ್ಲಿ ಕಂಡು ಬರುತ್ತಿರುವ ಈ ಎಲ್ಲ ಧನಾತ್ಮಕ ಅಂಶಗಳು ಪಂದ್ಯಗಳ ಗೆಲುವಿಗೆ ಪ್ರಮುಖ ಕಾರಣ ಆಗುತ್ತಿದೆ. ಬ್ಯಾಟಿಂಗ್​ ತಕ್ಕಂತೆ ತಂಡ ಬೌಲಿಂಗ್​ ಸಹ ಮಾಡುತ್ತಿದೆ. ಪವರ್​ ಪ್ಲೇ ವೇಳೆ ವಿಕೆಟ್​ ತೆಗೆಯುವುದು, ಮಧ್ಯಮ ಓವರ್​ಗಳಲ್ಲಿ ಸ್ಪಿನ್​ ಮುಖಾಂತರ ನಿಯಂತ್ರಣ ಹೇರುವುದು, ಡೆತ್​ ಓವರ್​ ಕಂಟ್ರೋಲ್​ ಬೌಲಿಂಗ್​ ಕಂಡು ಬರುತ್ತಿದೆ. 10 ವರ್ಷಗಳ ಐಸಿಸಿ ಟ್ರೋಫಿಯ ಬರಗಾರ ಈ ಬಾರಿ ನೀಗುವ ನಿರೀಕ್ಷೆ ಎಲ್ಲರಲ್ಲಿದೆ.

ಇದನ್ನೂ ಓದಿ: ಐಸಿಸಿ ಏಕದಿನ ರ್‍ಯಾಂಕಿಂಗ್​: ಅಗ್ರ ಸ್ಥಾನಕ್ಕೇರಿದ ಶುಭಮನ್​ ಗಿಲ್,​ ಮೊಹಮ್ಮದ್ ಸಿರಾಜ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.