ETV Bharat / sports

'ನ್ಯೂಜಿಲ್ಯಾಂಡ್​​ನಿಂದ ಪಾಕ್​ ಕ್ರಿಕೆಟ್​ ಕೊಲೆ': ದಿಢೀರ್ ಕ್ರಿಕೆಟ್ ಪ್ರವಾಸ​ ರದ್ದತಿಗೆ ಅಖ್ತರ್​​​ ಆಕ್ರೋಶ

author img

By

Published : Sep 17, 2021, 7:07 PM IST

Updated : Sep 17, 2021, 7:14 PM IST

shoaib akhtar
shoaib akhtar

ಭದ್ರತಾ ಕಾರಣ ನೀಡಿ ನ್ಯೂಜಿಲ್ಯಾಂಡ್ ತಂಡ ಪಾಕ್​ ವಿರುದ್ದದ ಕ್ರಿಕೆಟ್​ ಸರಣಿಯಿಂದ ಹಠಾತ್ತಾಗಿ ಹಿಂದೆ ಸರಿದಿದ್ದು, ಈ ನಿರ್ಧಾರಕ್ಕೆ ಅಲ್ಲಿನ ಮಾಜಿ ಕ್ರಿಕೆಟಿಗರು ಭಾರಿ​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಸ್ಲಾಮಾಬಾದ್​: ಭದ್ರತೆಯ ಕಾರಣ ನೀಡಿ ಪಾಕಿಸ್ತಾನ ವಿರುದ್ಧದ ಕ್ರಿಕೆಟ್​ ಸರಣಿ ರದ್ದುಪಡಿಸಿರುವ ನ್ಯೂಜಿಲ್ಯಾಂಡ್​ ಕ್ರಿಕೆಟ್​ ಮಂಡಳಿ ವಿರುದ್ಧ ಮಾಜಿ ಕ್ರಿಕೆಟಿಗ ಶೋಯೆಬ್​ ಅಖ್ತರ್​​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • NZ just killed Pakistan cricket 😡😡

    — Shoaib Akhtar (@shoaib100mph) September 17, 2021 " class="align-text-top noRightClick twitterSection" data=" ">

ರಾವಲ್ಪಿಂಡಿ ಮೈದಾನದಲ್ಲಿ ಮೊದಲ ಏಕದಿನ ಪಂದ್ಯ ಆರಂಭಗೊಳ್ಳಲು ಕೇವಲ 20 ನಿಮಿಷ ಬಾಕಿ ಇರುವಾಗಲೇ ನ್ಯೂಜಿಲ್ಯಾಂಡ್​ ಕ್ರಿಕೆಟ್ ಮಂಡಳಿ ಭದ್ರತೆಯ ನೆಪವೊಡ್ಡಿ ಸರಣಿ ರದ್ದುಪಡಿಸುತ್ತಿರುವುದಾಗಿ ಘೋಷಣೆ ಮಾಡಿತ್ತು. ಈ ವಿಚಾರವಾಗಿ ಟ್ವೀಟ್ ಮಾಡಿರುವ ರಾವಲ್ಪಿಂಡಿ ಎಕ್ಸ್​​ಪ್ರೆಸ್​ ಖ್ಯಾತಿಯ ಶೋಯೆಬ್​ ಅಖ್ತರ್​ ಟ್ವೀಟ್ ಮಾಡಿದ್ದು, 'ನ್ಯೂಜಿಲ್ಯಾಂಡ್​ ಪಾಕ್​ ಕ್ರಿಕೆಟ್​ ಕೊಲೆ ಮಾಡಿದೆ' ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸರಣಿ ಮುಂದೂಡಿಕೆ ತೀವ್ರ ನಿರಾಸೆ ಮೂಡಿಸಿದೆ: ಬಾಬರ್​ ಆಜಂ

ಲಕ್ಷಾಂತರ ಪಾಕಿಸ್ತಾನ ಕ್ರಿಕೆಟ್​ ಅಭಿಮಾನಿಗಳ ಮುಖದಲ್ಲಿ ನಗು ತರಿಸಬಹುದಾದ ಸರಣಿ ಹಠಾತ್​​ ಆಗಿ ಮುಂದೂಡಿಕೆಯಾಗಿದ್ದು, ತೀವ್ರ ನಿರಾಸೆಯಾಗಿದೆ. ನಮ್ಮ ಭದ್ರತಾ ಸಂಸ್ಥೆಗಳ ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆಯ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಅವರು ನಮ್ಮ ಹೆಮ್ಮೆ. ಪಾಕಿಸ್ತಾನ ಜಿಂದಾಬಾದ್​ ಎಂದು ಪಾಕ್​ ಕ್ಯಾಪ್ಟನ್​​ ಬಾಬರ್​ ಆಜಂ ಹೇಳಿದ್ದಾರೆ.

  • Extremely disappointed on the abrupt postponement of the series, which could have brought the smiles back for millions of Pakistan Cricket Fans. I've full trust in the capabilities and credibility of our security agencies. They are our pride and always will be! Pakistan Zindabad!

    — Babar Azam (@babarazam258) September 17, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ: ಭದ್ರತಾ ಕಾರಣಕ್ಕೆ ನ್ಯೂಜಿಲ್ಯಾಂಡ್‌-ಪಾಕ್‌ ಕ್ರಿಕೆಟ್‌ ಸರಣಿ ರದ್ದು

ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ​​ ಆಕ್ರೋಶ

ಉಭಯ ತಂಡಗಳ ನಡುವಿನ ಕ್ರಿಕೆಟ್​ ಸರಣಿ ಮುಂದೂಡಿಕೆಯಾಗುತ್ತಿದ್ದಂತೆ ಪಾಕ್​​​ ಕ್ರಿಕೆಟ್​ ಬೋರ್ಡ್​​ ಮುಖ್ಯಸ್ಥ ರಮೀಜ್​ ರಾಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯೂಜಿಲ್ಯಾಂಡ್​ ಕ್ರಿಕೆಟ್ ಬೋರ್ಡ್​ ಕೈಗೊಂಡಿರುವ ನಿರ್ಧಾರ ನಿಜಕ್ಕೂ ಆಶ್ಚರ್ಯ ಮೂಡಿಸಿದೆ. ಈ ಪ್ರಕರಣವನ್ನು ನಾವು ಐಸಿಸಿ ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂದಿದ್ದಾರೆ.

  • On a HOAX threat you have called-off the tour despite all assurances!! @BLACKCAPS do you understand the IMPACT of your decision?

    — Shahid Afridi (@SAfridiOfficial) September 17, 2021 " class="align-text-top noRightClick twitterSection" data=" ">

ಹುಸಿ ಬೆದರಿಕೆಗೆ ನಾವು ನೀಡಿರುವ ಎಲ್ಲ ಆಶ್ವಾಸನೆಯನ್ನು ಗಾಳಿಗೆ ತೋರಿ ಪ್ರವಾಸ ರದ್ದುಗೊಳಿಸಲು ಮುಂದಾಗಿದ್ದೀರಿ. ನ್ಯೂಜಿಲ್ಯಾಂಡ್​​ ಕ್ರಿಕೆಟ್​ ಮಂಡಳಿಗೆ ಈ ನಿರ್ಧಾರದ ಪರಿಣಾಮ ಗೊತ್ತಿದೆಯೇ? ಎಂದು ಆಫ್ರಿದಿ ಟ್ವೀಟ್ ಮಾಡಿದ್ದಾರೆ.

Last Updated :Sep 17, 2021, 7:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.