ETV Bharat / sports

ಐಪಿಎಲ್​ಗೆ ಗೇಲ್​ ಗುಡ್​ ಬೈ?: 2022 ಹರಾಜಿಗೆ ಹೆಸರು ನೀಡದ ಸ್ಟಾರ್ಕ್​, ಸ್ಟೋಕ್ಸ್, ಸ್ಯಾಮ್ ಕರ್ರನ್​!

author img

By

Published : Jan 22, 2022, 1:43 PM IST

Notable Absentees From IPL 2022 Mega Auction
ಐಪಿಎಲ್ ಮೆಗಾ ಹರಾಜಿಗೆ ಕ್ರಿಸ್ ಗೇಲ್ , ಸ್ಟೋಕ್ಸ್ ಅಲಭ್ಯ

ಸ್ಪೋಟಕ್ ಬ್ಯಾಟರ್​ ಕ್ರಿಸ್​ ಗೇಲ್ ಸೇರಿದಂತೆ ಇಂಗ್ಲೆಂಡ್ ತಂಡದ ಆಲ್​ರೌಂಡರ್​ಗಳಾದ ಬೆನ್​ ಸ್ಟೋಕ್ಸ್​ ಮತ್ತು ಸ್ಯಾಮ್​ ಕರ್ರನ್​, ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್​ 2022ರ ಹರಾಜಿನಿಂದ ಹೊರಗುಳಿದಿದ್ದಾರೆ. ಕಳೆದ ವರ್ಷ ಗಾಯದ ಕಾರಣದಿಂದ ಐಪಿಎಲ್​ನಿಂದ ಹೊರಬಿದ್ದಿದ್ದ ಜೋಫ್ರಾ ಆರ್ಚರ್​, ಕ್ರಿಸ್​ ವೋಕ್ಸ್ ಕೂಡ ಹರಾಜಿಗೆ ಅಲಭ್ಯರಾಗಲಿದ್ದಾರೆ.

ಮುಂಬೈ: ವೆಸ್ಟ್​ ಇಂಡೀಸ್​ ಸ್ಫೋಟಕ ಬ್ಯಾಟರ್​ ಕ್ರಿಸ್​ ಗೇಲ್​ ಮುಂಬರುವ ಐಪಿಎಲ್ ಮೆಗಾ ಹರಾಜಿಗೆ ತಮ್ಮ ಹೆಸರು ನೋಂದಾಯಿಸಿಕೊಂಡಿಲ್ಲದೇ ಇರುವುದರಿಂದ ನಗದು ಸಮೃದ್ಧ ಲೀಗ್​ನಲ್ಲಿ ಕೆರಿಬಿಯನ್ ದೈತ್ಯನ ಆರ್ಭಟ ಬಹುತೇಕ ಅಂತ್ಯವಾಗಿದೆ.

ಗೇಲ್ ಅಲ್ಲದೆ ಇಂಗ್ಲೆಂಡ್ ತಂಡದ ಆಲ್​ರೌಂಡರ್​ಗಳಾದ ಬೆನ್​ ಸ್ಟೋಕ್ಸ್​ ಮತ್ತು ಸ್ಯಾಮ್​ ಕರ್ರನ್​, ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್​ 2022ರ ಹರಾಜಿನಿಂದ ಹೊರಗುಳಿದಿದ್ದಾರೆ. ಕಳೆದ ವರ್ಷ ಗಾಯದ ಕಾರಣದಿಂದ ಐಪಿಎಲ್​ನಿಂದ ಹೊರಬಿದ್ದಿದ್ದ ಜೋಫ್ರಾ ಆರ್ಚರ್​, ಕ್ರಿಸ್​ ವೋಕ್ಸ್ ಮತ್ತು ಸ್ಯಾಮ್​ ಕರ್ರನ್​ ಕೂಡ ಹರಾಜಿಗೆ ಅಲಭ್ಯರಾಗಲಿದ್ದಾರೆ.

ಇನ್ನು ಟೆಸ್ಟ್​ ಕ್ರಿಕೆಟ್​ನಲ್ಲಿ ದಯನೀಯ ಪ್ರದರ್ಶನ ತೋರಿ ಸತತ 4 ಟೆಸ್ಟ್​ ಸರಣಿ ಕಳೆದುಕೊಂಡಿರುವ ಇಂಗ್ಲೆಂಡ್ ಆ್ಯಶಷ್​ನಲ್ಲಿ ಮುಖಭಂಗ ಅನುಭವಿಸಿದ ಮೇಲೆ ಕೆಲವು ಮಾಜಿ ಇಂಗ್ಲಿಷ್​​​ ಆಟಗಾರರು ಐಪಿಎಲ್​ ಕಾರಣ ಎಂದು ಟೀಕಿಸಿದ್ದರು.

ಹಾಗಾಗಿ ಕೆಲವು ಇಂಗ್ಲೆಂಡ್ ಕ್ರಿಕೆಟಿಗರು ಟೆಸ್ಟ್​ ಕ್ರಿಕೆಟ್​​ಗೆ ಹೆಚ್ಚು ಹೊತ್ತು ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಐಪಿಎಲ್ ನಡೆಯುವ ವೇಳೆ ನಡೆಯುವ ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ಆಡುವುದಕ್ಕೆ ನಿರ್ಧರಿಸಿದ್ದಾರೆ. ಸ್ಟಾರ್ಕ್​ ವಿದೇಶಿ ಟೆಸ್ಟ್​ ಸರಣಿಗಳಿಗೆ ಸಿದ್ಧರಾಗುವುದಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಸ್ಟಾರ್​ ಆಟಗಾರರ ಹೊರತಾಗಿಯೂ ಇಂಗ್ಲೆಂಡ್​ನಿಂದ ಒಟ್ಟು 30 ಆಟಗಾರರು, ಆಸ್ಟ್ರೇಲಿಯಾದಿಂದ 59 ಆಟಗಾರರು ಫೆಬ್ರವರಿಯಲ್ಲಿ ನಡೆಯಲಿರುವ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾದಿಂದ ಟಿ-20 ವಿಶ್ವಕಪ್ ಹೀರೋ ಮಿಚೆಲ್ ಮಾರ್ಷ್​, ಡೇವಿಡ್ ವಾರ್ನರ್​, ಪ್ಯಾಟ್​ ಕಮಿನ್ಸ್, ಆ್ಯರೋನ್​ ಫಿಂಚ್, ಸ್ಟೀವ್ ಸ್ಮಿತ್​ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇಂಗ್ಲೆಂಡ್ ತಂಡದ ಡೇವಿಡ್ ಮಲನ್​, ಇಯಾನ್​ ಮಾರ್ಗನ್, ನ್ಯೂಜಿಲ್ಯಾಂಡ್​ನ ಟಿಮ್ ಸೌಥಿ, ಟ್ರೆಂಟ್​ ಬೌಲ್ಟ್​, ಜೇಮ್ಸ್ ನೀಶಮ್​, ದಕ್ಷಿಣ ಆಫ್ರಿಕಾದ ಮಾರ್ಕಮ್, ರಬಾಡ, ಡಿಕಾಕ್​ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಐಪಿಎಲ್ ಮೆಗಾ ಹರಾಜು.. 19 ರಾಷ್ಟ್ರಗಳ 1,214 ಆಟಗಾರರ ನೋಂದಣಿ; ಯಾವ ರಾಷ್ಟ್ರದಿಂದ ಎಷ್ಟು ಮಂದಿ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.