ETV Bharat / sports

ರಣಜಿ ಟ್ರೋಫಿ ಫೈನಲ್​: ಮೊದಲ ದಿನದಾಂತ್ಯಕ್ಕೆ ಮುಂಬೈ 248/5

author img

By

Published : Jun 22, 2022, 5:11 PM IST

ಮೊದಲ ದಿನದಾಂತ್ಯಕ್ಕೆ ಮುಂಬೈ 248/5
ಮೊದಲ ದಿನದಾಂತ್ಯಕ್ಕೆ ಮುಂಬೈ 248/5

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್​ ಪಂದ್ಯದಲ್ಲಿ ಮುಂಬೈ ತಂಡ ಮೊದಲ ದಿನದಾಂತ್ಯಕ್ಕೆ 5 ವಿಕೆಟ್​ ನಷ್ಟಕ್ಕೆ 248 ರನ್​ ಗಳಿಸಿದೆ.

ಬೆಂಗಳೂರು: 23 ವರ್ಷದ ಬಳಿಕ ಫೈನಲ್​ ತಲುಪಿರುವ ಮಧ್ಯಪ್ರದೇಶ, 42ನೇ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಮುಂಬೈ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಫೈನಲ್​ ಪಂದ್ಯದಲ್ಲಿ ಮುಂಬೈ ತಂಡ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್​ ಕಳೆದುಕೊಂಡು 248 ರನ್ ಗಳಿಸಿ, ಬೃಹತ್​ ಮೊತ್ತದತ್ತ ಗುರಿ ನೆಟ್ಟಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ದುಕೊಂಡ ಪೃಥ್ವಿ ಶಾ ನೇತೃತ್ವದ ಬಲಿಷ್ಠ ಮುಂಬೈ ತಂಡ ಖ್ಯಾತಿಗೆ ತಕ್ಕಂತೆ ಆಟ ಆರಂಭಿಸಿತು. ಆರಂಭಿಕ ಆಟಗಾರ, ನಾಯಕ ಪೃಥ್ವಿ ಶಾ ಮತ್ತು ಈ ಸಾಲಿನ ರಣಜಿಯಲ್ಲಿ ಮಿಂಚುತ್ತಿರುವ ಯಶಸ್ವಿ ಜೈಸ್ವಾಲ್​ ಮೊದಲ ವಿಕೆಟ್​ಗೆ 87 ರನ್​ ಕಲೆ ಹಾಕಿದರು.

ಫೃಥ್ವಿ ಶಾ 47 ರನ್​ ಗಳಿಸಿ ಅರ್ಧಶತಕದಿಂದ ವಂಚಿತರಾದರೆ, ಜೈಸ್ವಾಲ್​ 78 ರನ್​ ಗಳಿಸಿ ಶತಕದ ಸಮೀಪದಲ್ಲಿ ವಿಕೆಟ್​ ಒಪ್ಪಿಸಿದರು. ಮಧ್ಯಮ ಕ್ರಮಾಂಕದ ಆಟಗಾರರಾದ ಅರ್ಮಾನ್​ ಜಾಫರ್​ 26, ಸುವೀದ್​ ಪಾರ್ಕರ್​ 18, ಹಾರ್ದಿಕ್​ ತಮೋರೆ 24 ರನ್​ಗಳ ಅಲ್ಪ ಮೊತ್ತಕ್ಕೆ ಔಟಾದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿರುವ ಸರ್ಫರಾಜ್​ ಖಾನ್​ 40 ರನ್​ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದರೆ, ಶಾಮ್ಸ್​ ಮುಲಾನಿ 12 ರನ್​ಗಳಿಂದ ನಾಳೆಗೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಮಧ್ಯಪ್ರದೇಶದ ಪರವಾಗಿ ಬಿರುಸಿನ ಬೌಲಿಂಗ್​ ದಾಳಿ ಮಾಡಿದ ಅನುಭವ್​ ಅಗರ್​ವಾಲ್​, ಸರನ್​ಶಾ ಜೈನ್​ ತಲಾ 2 ವಿಕೆಟ್​ ಪಡೆದರೆ, ಕುಮಾರ್​ ಕಾರ್ತಿಕೇಯ್​ 1 ವಿಕೆಟ್​ ಪಡೆದರು. ಇನ್ನೂ ಮೂರು ದಿನ ಆಟ ಬಾಕಿ ಉಳಿದಿದೆ.

ಇದನ್ನೂ ಓದಿ: ಭಾರತ ಮಹಿಳಾ ತಂಡದ ಮಾಜಿ ನಾಯಕಿ​ ರುಮೇಲಿ ಧಾರ್ ಕ್ರಿಕೆಟ್​ಗೆ ಗುಡ್​ಬೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.