ETV Bharat / sports

Jasprit Bumrah: ನಾನೀಗ ಸಂಪೂರ್ಣ ಫಿಟ್​ ಆಗಿದ್ದೇನೆ- ಜಸ್ಪ್ರೀತ್​ ಬುಮ್ರಾ

author img

By

Published : Aug 18, 2023, 2:53 PM IST

Ireland vs India 1st T20I: ಐರ್ಲೆಂಡ್​ ವಿರುದ್ಧದ ಮೊದಲ ಟಿ20 ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಸ್ಪ್ರೀತ್​ ಬುಮ್ರಾ ಮಾತನಾಡಿದರು.

Jasprit Bumrah
Jasprit Bumrah

ಡಬ್ಲಿನ್ (ಐರ್ಲೆಂಡ್): ಹನ್ನೊಂದು ತಿಂಗಳ ಬಿಡುವಿನ ನಂತರ ಐರ್ಲೆಂಡ್​ ವಿರುದ್ಧದ ಪ್ರವಾಸಕ್ಕೆ ಭಾರತದ ವೇಗಿ ಜಸ್ಪ್ರೀತ್​ ಬುಮ್ರಾ ಫಿಟ್​ ಆಗಿ ತಂಡಕ್ಕೆ ಮರಳಿದ್ದಾರೆ. "ಪಂದ್ಯದಲ್ಲಿ ಶೇ 100ರಷ್ಟು ಪ್ರದರ್ಶನ ನೀಡಲು ನನ್ನ ದೇಹ ಸಿದ್ಧವಾಗಿದೆ" ಎಂದು ಅವರು ಹೇಳಿದ್ದಾರೆ. ಹೀಗೆ ಹೇಳುವ ಮೂಲಕ ಭಾರತದ ಮುಂದಿನ ಮಹತ್ವದ ಸರಣಿಗೆ ತಯಾರಾಗಿದ್ದೇನೆ ಎಂಬ ಸಂದೇಶ ನೀಡಿದರು.

ಗಾಯದ ಕಾರಣ ಬುಮ್ರಾ ಐಸಿಸಿ ಟಿ20 ವಿಶ್ವಕಪ್​ 2022, ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಮತ್ತು 16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ ಕಳೆದುಕೊಂಡಿದ್ದರು. ಆದರೆ ಈಗ ಚೇತರಿಕೆಯ ನಂತರ ಸಂಪೂರ್ಣ ಫಿಟ್​ ಆಗಿ ತಂಡಕ್ಕೆ ನಾಯಕನಾಗಿ ಕಮ್​ಬ್ಯಾಕ್​ ಮಾಡಿದ್ದಾರೆ.

ಐರ್ಲೆಂಡ್​ ವಿರುದ್ಧದ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೂ ಮುನ್ನ ಮಾತನಾಡಿದ ಅವರು, "ನಮ್ಮ ದೇಹಕ್ಕೆ ಪೆಟ್ಟಾದಾಗ ಚೇತರಿಕೆಗೆ ಎಷ್ಟು ಬೇಕೋ ಅಷ್ಟು ಸಮಯ ಕೊಡಲೇಬೇಕು. ಇದರ ಮಧ್ಯೆ ನಮ್ಮ ಆಟದ ಹಸಿವು ಕಡಿಮೆಯಾಗಬಾರದು. ಗಾಯದ ಸಂದರ್ಭದಲ್ಲಿ ನಮ್ಮ ದೇಹದ ಮಾತನ್ನು ಕೇಳುವುದು ಉಚಿತ. ಸಂಪೂರ್ಣ ಚೇತರಿಕೆಯ ನಂತರ ಸ್ಥಾನ ಮತ್ತು ಅವಕಾಶಗಳು ಖಂಡಿತವಾಗಿಯೂ ಸಿಗಲಿವೆ. ಒಂದು ಆಘಾತದಿಂದ ಎಲ್ಲವೂ ಮುಗಿತು ಎಂದು ಭಾವಿಸಬಾರದು. ಮೊದಲು ನಾವು ಚೇತರಿಕೆಯ ಬಗ್ಗೆ ಗಮನಹರಿಸಬೇಕು. ನಂತರ ಅವಕಾಶದ ಬಗ್ಗೆ ಚಿಂತಿಸಬೇಕು" ಎಂದು ತಿಳಿಸಿದರು.

"ನನ್ನ ದೇಹ ಚೇತರಿಸಿಕೊಂಡ ಕ್ಷಣದಲ್ಲಿ ನಾನು ಆ ಬಗ್ಗೆ ಅರ್ಥಮಾಡಿಕೊಂಡೆ. ನಾನು ಅನೇಕ ನೆಟ್ ಸೆಷನ್‌ಗಳನ್ನು ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ (ಎನ್​ಸಿಎ) ಮಾಡಿದ್ದೇನೆ. ಎನ್​ಸಿಎ ಮಾತ್ರವಲ್ಲದೇ ಗುಜರಾತ್ ತಂಡದೊಂದಿಗೂ ಪಂದ್ಯಗಳನ್ನು ಆಡಿದ್ದೇನೆ. ನನಗೆ ಈಗ ಯಾವುದೇ ನಿರ್ಬಂಧಗಳಿಲ್ಲ. ನನ್ನ ದೇಹ ಉತ್ತಮವಾಗಿ ಸಹಕರಿಸುತ್ತಿದೆ" ಎಂದು ಸಂತಸ ವ್ಯಕ್ತಪಡಿಸಿದರು.

"ಗಾಯಕ್ಕೆ ತುತ್ತಾದಾಗ ಕೆಲವೊಮ್ಮೆ ನಾವು ನಿರಾಶರಾಗುತ್ತೇವೆ. ಇಂಥ ಸಮಯದಲ್ಲಿ ಅನುಮಾನ ಹೊಂದುವ ಬದಲು, ನಾನು ಹಿಂತಿರುಗಲು ಸಾಧ್ಯವಿಲ್ಲ ಎಂದು ಯೋಚಿಸುವ ಬದಲು, ಮೊದಲು ಚೇತರಿಕೆಗೆ ಅವಕಾಶ ಮಾಡಿಕೊಂಡೆ. ನನ್ನ ಕರಾಳ ದಿನಗಳೀಗ ಮುಗಿದಿವೆ. ನಾನು ಪರಿಹಾರಗಳನ್ನು ಹುಡುಕುತ್ತಿದ್ದೆ. ಒಮ್ಮೆ ಪರಿಹಾರ ಸಿಕ್ಕರೆ ನಾನು ಹಿಂತಿರುಗುತ್ತೇನೆ. ನನ್ನ ದಾರಿಯಲ್ಲಿ ಕೆಲಸ ಮಾಡುತ್ತೇನೆ ಎಂದು ನಾನು ತುಂಬಾ ಚೆನ್ನಾಗಿ ತಿಳಿದಿದ್ದೆ" ಎಂದು ಬುಮ್ರಾ ಹೇಳಿದರು.

ಒತ್ತಡ ಮತ್ತು ನಿರೀಕ್ಷೆಗಳ ಬಗ್ಗೆ ಕೇಳಿದಾಗ, "ನಾನು ಒತ್ತಡಕ್ಕೊಳಗಾಗಲು ಬಯಸುವುದಿಲ್ಲ. ನನ್ನ ಮೇಲೆ ಅನಗತ್ಯ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದಿಲ್ಲ. ಬಹಳ ಸಮಯದ ನಂತರ ಹಿಂತಿರುಗುತ್ತಿದ್ದೇನೆ. ಈಗ ನಾನು ಅದನ್ನು ಆನಂದಿಸಲು ಬಯಸುವೆ. ಬಹಳಷ್ಟು ಕೊಡುಗೆ ನೀಡಬೇಕು ಎಂದು ಯೋಚಿಸುವುದಿಲ್ಲ" ಎಂದಿದ್ದಾರೆ.

ಇದನ್ನೂ ಓದಿ: Virat Kohli: ಕಿಂಗ್​ ಕೊಹ್ಲಿ ಭಾರತ ತಂಡ ಪ್ರತಿನಿಧಿಸಿ ಇಂದಿಗೆ 15 ವರ್ಷ.. ದಿಗ್ಗಜ ಬ್ಯಾಟರ್​ನ ದಾಖಲೆಗಳು ಇಂತಿವೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.