ETV Bharat / sports

Virat Kohli: ಕಿಂಗ್​ ಕೊಹ್ಲಿ ಭಾರತ ತಂಡ ಪ್ರತಿನಿಧಿಸಿ ಇಂದಿಗೆ 15 ವರ್ಷ.. ದಿಗ್ಗಜ ಬ್ಯಾಟರ್​ನ ದಾಖಲೆಗಳು ಇಂತಿವೆ..

author img

By

Published : Aug 18, 2023, 2:10 PM IST

Updated : Aug 18, 2023, 6:24 PM IST

Virat Kohli completes 15 years in international cricket: 2008 ರ ಇದೇ ದಿನ ಏಕದಿನ ಕ್ರಿಕೆಟ್​ಗೆ ವಿರಾಟ್​ ಭಾರತದ ಬಿ ತಂಡದಲ್ಲಿ ಪದಾರ್ಪಣೆ ಮಾಡಿದ್ದರು. ಅಂದು ಫ್ಯೂಚರ್​ ಸ್ಟಾರ್​ ಎಂದು ಕರೆಸಿಕೊಂಡ ಕೊಹ್ಲಿ ಇಂದು ಕ್ರಿಕೆಟ್​ ದುನಿಯಾದಲ್ಲಿ ವಿರಾಟವಾಗಿ ಮಿನುಗುತ್ತಿದ್ದಾರೆ.

Virat Kohli
Virat Kohli

ಹೈದರಾಬಾದ್​: "ಕಿಂಗ್​ ಕೊಹ್ಲಿ, ರನ್​ ಮಷಿನ್​, ದಾಖಲೆಗಳ ವೀರ" ಎಂದೆಲ್ಲ ಕರೆಸಿಕೊಳ್ಳುವ ವಿರಾಟ್​ ಕೊಹ್ಲಿ ಇಂದಿಗೆ 15 ವರ್ಷಗಳ ಹಿಂದೆ ಭಾರತ ಬಿ ತಂಡದಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಶ್ರಿಲಂಕಾದ ವಿರುದ್ಧ ಆಡಿದ್ದರು. ಅಂದು 19ರ ಪೋರ ಬ್ಯಾಟ್​ ಹಿಡಿದು ಮೈದಾನಕ್ಕೆ ಬಂದಾಗ ಅವರ ಬ್ಯಾಟಿಂಗ್​ ಶೈಲಿ ಮತ್ತು ಅವರ 19 ವರ್ಷದೊಳಗಿನವರ ಪಂದ್ಯದ ಆಟವನ್ನು ಕಂಡವರು ಭಾರತದ ಫ್ಯೂಚರ್​ನ ಸ್ಟಾರ್​ ಆಟಗಾರ ಎಂದಿದ್ದರು. ಇಂದು ಕ್ರಿಕೆಟ್​ ಜಗತ್ತಿನ ಸ್ಟಾರ್​ ಆಗಿ ಮಿನುಗುತ್ತಿದ್ದಾರೆ.

Virat Kohli completes 15 years in international cricket
ಕಿಂಗ್​ ಕೊಹ್ಲಿ ಭಾರತ ತಂಡ ಪ್ರತಿನಿಧಿಸಿ ಇಂದಿಗೆ 15 ವರ್ಷ

19 ವರ್ಷದೊಳಗಿನವರ ವಿಶ್ವಕಪ್​ ತಂಡದ ನಾಯಕರಾಗಿ ಭಾರತವನ್ನು ಚಾಂಪಿಯನ್​ ಪಟ್ಟಕ್ಕೆ ಏರಿಸಿದ್ದ ವಿರಾಟ್​ ಕೊಹ್ಲಿ ತಮ್ಮ ಬ್ಯಾಟಿಂಗ್​ನಿಂದ 2008ರ ಇದೇ ದಿನ ಶ್ರೀಲಂಕಾ ಪ್ರವಾಸದ ಬಿ ತಂಡಕ್ಕೆ ಆಯ್ಕೆ ಆಗಿ ಮೈದಾನದಲ್ಲಿ ಬ್ಯಾಟ್​​ ಹಿಡಿದು ನಿಂತಿದ್ದರು. ವಿರಾಟ್​ ತಮ್ಮ ಸಾಮರ್ಥ್ಯವನ್ನು 19 ವರ್ಷದೊಳಗಿನವರ ವಿಶ್ವಕಪ್​ನಲ್ಲೇ ತೋರಿದ್ದರು. ಆರು ಪಂದಗಳಲ್ಲಿ 47ರ ಸರಾಸರಿಯಲ್ಲಿ 235 ರನ್​ ಗಳಿಸಿದ್ದರು. ಅಂದು ಅವರ ಆಟ ಕಂಡ ಹಿರಿಯರು, ಭಾರತಕ್ಕೆ ಒಬ್ಬ ಉತ್ತಮ ಆಟಗಾರ ಸಿಕ್ಕಿದ್ದಾನೆ ಎಂದಿದ್ದರು. ಅದನ್ನು ವಿರಾಟ್​ ಸಾಬೀತು ಮಾಡಿದ್ದಾರೆ ಸಹ.

  • Congratulations to the incredible @imVkohli on 15 years of unwavering commitment to international cricket! Your passion, perseverance, and remarkable achievements have inspired millions. Wishing you continued success and many more milestones ahead! pic.twitter.com/oUsnAVLvqu

    — Jay Shah (@JayShah) August 18, 2023 " class="align-text-top noRightClick twitterSection" data=" ">

ವಿರಾಟ್ ಮತ್ತು ಡೆಲ್ಲಿ ಸಹ ಆಟಗಾರ ಗೌತಮ್ ಗಂಭೀರ್ ಶ್ರೀಲಂಕಾ ವಿರುದ್ಧ ಬ್ಯಾಟಿಂಗ್ ತೆರೆದರು ಮತ್ತು ಕೇವಲ 12 ರನ್ ಗಳಿಸಿದರು. ಮೊದಲ ಪಂದ್ಯದಲ್ಲಿ ವೈಫಲ್ಯತೆ ಎದುರಿಸಿದರೂ ಕೊಹ್ಲಿ ಮೊದಲ ಸರಣಿಯ ಅಂತ್ಯದಲ್ಲಿ ಯೋಗ್ಯ ಪ್ರದರ್ಶನ ಬಂದಿತ್ತು. ಐದು ಪಂದ್ಯಗಳಲ್ಲಿ 31.80 ಸರಾಸರಿಯಲ್ಲಿ 159 ರನ್ ಗಳಿಸಿದನು, ಐದನೇ ಏಕದಿನದಲ್ಲಿ ಮೊದಲ ಅರ್ಧಶತಕವನ್ನು ಗಳಿಸಿದ್ದರು. ವರ್ಷದಿಂದ ವರ್ಷಕ್ಕೆ, ಕೊಹ್ಲಿ ಎಲ್ಲ ಸ್ವರೂಪಗಳಲ್ಲಿ ಸ್ಥಿರತೆ ಕಾಪಾಡಿಕೊಂಡಿದ್ದು, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ನ್ಯೂಜಿಲ್ಯಾಂಡ್​​ನ ಕೇನ್ ವಿಲಿಯಮ್ಸನ್ ಮತ್ತು ಇಂಗ್ಲೆಂಡ್‌ನ ಜೋ ರೂಟ್ ಜೊತೆಗೆ 'ಫ್ಯಾಬ್ ಫೋರ್' ಬ್ಯಾಟಿಂಗ್ ಕ್ವಾರ್ಟೆಟ್‌ನ ಭಾಗವಾಗಿದ್ದಾರೆ.

ವಿರಾಟ್​ ಟೆಸ್ಟ್​ ಕ್ರಿಕೆಟ್​: ಅಂದಿನಿಂದ ಕೊಹ್ಲಿ 111 ಟೆಸ್ಟ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತನ್ನ ಟೆಸ್ಟ್ ಚೊಚ್ಚಲ ಪಂದ್ಯ ಆಡಿದರು. ಅಲ್ಲಿ ಅಷ್ಟು ಪ್ರಭಾವ ಬೀರಲು ಎಡವಿದರೂ, 15 ವರ್ಷದ ನಂ ತರ ಇಂದು ಅವರು 187 ಇನ್ನಿಂಗ್ಸ್‌ಗಳಲ್ಲಿ 49.29 ಸರಾಸರಿಯಲ್ಲಿ 8,676 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 29 ಶತಕಗಳು ಮತ್ತು 29 ಅರ್ಧಶತಕಗಳು ಇದೆ. ಅಜೇಯ 254 ಅವರ ಅತ್ಯುತ್ತಮ ಸ್ಕೋರ್ ಆಗಿದೆ. ವಿರಾಟ್​ ಭಾರತದ ಟೆಸ್ಟ್ ಕ್ರಿಕೆಟ್‌ನಲ್ಲಿ ಐದನೇ ಅತಿ ಹೆಚ್ಚು ಸ್ಕೋರರ್ ಆಗಿದ್ದಾರೆ ಮತ್ತು ಒಟ್ಟಾರೆ 23 ನೇ ಸ್ಥಾನದಲ್ಲಿದ್ದಾರೆ. ಭಾರತೀಯರಲ್ಲಿ ಟೆಸ್ಟ್‌ನಲ್ಲಿ ನಾಲ್ಕನೇ ಅತಿ ಹೆಚ್ಚು ಶತಕಗಳನ್ನು ಹೊಂದಿದ್ದಾರೆ. ವಿರಾಟ್ ಟೆಸ್ಟ್​ನಲ್ಲಿ ಏಳು ದ್ವಿಶತಕಗಳನ್ನು ಹೊಂದಿರುವ ಮೊದಲ ಭಾರತೀಯ ಆಟಗಾರ.

  • 1⃣5⃣ years & counting 🫡

    Celebrate @imVkohli's special milestone and relive his majestic century earlier this year in Trivandrum 🎥🔽 #TeamIndia

    — BCCI (@BCCI) August 18, 2023 " class="align-text-top noRightClick twitterSection" data=" ">

ನಾಯಕನಾಗಿ, ವಿರಾಟ್ ಕೊಹ್ಲಿ ಟೆಸ್ಟ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅವರು 68 ಟೆಸ್ಟ್‌ಗಳಲ್ಲಿ ಭಾರತವನ್ನು ಮುನ್ನಡೆಸಿದ್ದು, 40 ಪಂದ್ಯಗಳನ್ನು ಗೆದ್ದಿದ್ದರೆ, 17 ರಲ್ಲಿ ಸೋಲು ಅನುಭವಿಸಿದ್ದಾರೆ. ಇನ್ನು 11 ಪಂದ್ಯಗಳು ಡ್ರಾ ಆಗಿದೆ. ಐಸಿಸಿ ನಡೆಸಿದ ಮೊದಲ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ (2017-21) ಭಾರತ ವಿರಾಟ್​ ನಾಯಕತ್ವದಲ್ಲಿ ಭಾಗವಹಿಸಿ ರನ್ನರ್​ ಅಪ್​ ಆಗಿತ್ತು.

ವಿರಾಟ್​ ಏಕದಿನ: ವಿರಾಟ್ ಅವರ ಬಲಿಷ್ಠ ಸ್ವರೂಪ ಎಂದರೆ ಏಕದಿನ ಪಂದ್ಯಗಳು. 275 ಒನ್​​ ಡೇಯಲ್ಲಿ ಅವರು 57.32 ಸರಾಸರಿಯಲ್ಲಿ 12,898 ರನ್ ಗಳಿಸಿದ್ದಾರೆ. ಅವರು 265 ಇನ್ನಿಂಗ್ಸ್‌ಗಳಲ್ಲಿ 46 ಶತಕಗಳು ಮತ್ತು 65 ಅರ್ಧ ಶತಕಗಳನ್ನು ಗಳಿಸಿದ್ದಾರೆ, 183 ಅವರ ಅತ್ಯುತ್ತಮ ಸ್ಕೋರ್‌ ಆಗಿದೆ. ಏಕದಿನದಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್​ ನಂತರದ ಎರಡನೇ ಸ್ಥಾನದಲ್ಲಿ ವಿರಾಟ್​ ಇದ್ದರೆ, ವಿಶ್ವ ಮಟ್ಟದಲ್ಲಿ ಐದನೇ ಸ್ಥಾನವನ್ನು ಹೊಂದಿದ್ದಾರೆ. ನಾಯಕರಾಗಿ 95 ಪಂದ್ಯಗಳನ್ನು ಮುನ್ನಡೆಸಿರುವ ವಿರಾಟ್​ 65ರಲ್ಲಿ ಗೆದ್ದಿದ್ದಾರೆ, 27 ರಲ್ಲಿ ಸೋತಿದ್ದಾರೆ. ಅವರು 2011 ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಮತ್ತು 2013 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ತಂಡದ ಭಾಗವಾಗಿದ್ದಾರೆ, 2015 ಮತ್ತು 2019 ರ ಕ್ರಿಕೆಟ್ ವಿಶ್ವಕಪ್‌ಗಳ ಸೆಮಿಫೈನಲ್ ಮತ್ತು 2017 ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ತಲುಪಿದ್ದಾರೆ.

ಟಿ20 ಮಾದರಿಯಲ್ಲಿ ಕೊಹ್ಲಿ: ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್, ಐವತ್ತು - ಪ್ಲಸ್ ಸ್ಕೋರ್‌ ಮತ್ತು ಸರಾಸರಿ ಹೊಂದಿರುವ ಆಟಗಾರರಾಗಿದ್ದಾರೆ. ಟಿ-20ಯಲ್ಲಿ ಅತಿ ಹೆಚ್ಚು 'ಮ್ಯಾನ್ ಆಫ್ ದಿ ಮ್ಯಾಚ್' (15) ಮತ್ತು 'ಮ್ಯಾನ್ ಆಫ್ ದಿ ಸೀರೀಸ್' (ಏಳು) ಪ್ರಶಸ್ತಿಗಳನ್ನು ವಿರಾಟ್ ಪಡೆದಿದ್ದಾರೆ. ವಿರಾಟ್ ಐಸಿಸಿ ಟಿ-20 ವಿಶ್ವಕಪ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ. ಪಂದ್ಯಾವಳಿಯಲ್ಲಿ 27 ಪಂದ್ಯಗಳಲ್ಲಿ ಮತ್ತು 25 ಇನ್ನಿಂಗ್ಸ್‌ಗಳಲ್ಲಿ 81.50 ಸರಾಸರಿಯಲ್ಲಿ 131.30 ಸ್ಟ್ರೈಕ್ ರೇಟ್‌ನೊಂದಿಗೆ 14 ಅರ್ಧಶತಕ ಸಹಿತ 1,141 ರನ್‌ ಗಳಿಸಿದ್ದಾರೆ.

ಒಟ್ಟಾರೆಯಾಗಿ 501 ಪಂದ್ಯಗಳಲ್ಲಿ 53.63ರ ಸರಾಸರಿಯಲ್ಲಿ 25,582 ರನ್ ಗಳಿಸಿದ್ದಾರೆ. 559 ಇನ್ನಿಂಗ್ಸ್‌ಗಳಲ್ಲಿ, ಅವರು 76 ಶತಕ ಮತ್ತು 131 ಅರ್ಧಶತಕಗಳನ್ನು ಗಳಿಸಿದ್ದಾರೆ. ಇದರಲ್ಲಿ ಅಜೇಯ 254 ರನ್​ ಅತ್ಯುತ್ತಮವಾದದ್ದು. ಅವರು ಭಾರತಕ್ಕೆ ಎರಡನೇ ಅತಿ ಹೆಚ್ಚು ರನ್ ಗಳಿಸಿದವರು ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐದನೇ ಅತಿ ಹೆಚ್ಚು ರನ್ ಗಳಿಸಿದವರು. ಸಚಿನ್​ ಅವರ 34,357 ಅಂತಾರಾಷ್ಟ್ರೀಯ ರನ್‌ಗಳನ್ನು ಗಳಿಸಿದ್ದಾರೆ, 664 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು 100 ಅಂತಾರಾಷ್ಟ್ರೀಯ ಶತಕಗಳ ಶತಕ ದಾಖಲಿಸಿದ್ದಾರೆ. ಆ ದಾಖಲೆಯ ಬೆನ್ನಟ್ಟಿದ್ದಾರೆ ಕೊಹ್ಲಿ. ಕ್ರಿಕೆಟ್​ ಇತಿಹಾಸದಲ್ಲಿ ಕೊಹ್ಲಿ ಅತಿ ಹೆಚ್ಚು 'ಪ್ಲೇಯರ್ ಆಫ್ ದಿ ಸೀರೀಸ್' ಪ್ರಶಸ್ತಿಗಳನ್ನು ಹೊಂದಿದ್ದಾರೆ. ಈ ಎಲ್ಲಾ ಅಂಕಿ- ಅಂಶಗಳು ಅವರಿಗೆ 2011-20ರಲ್ಲಿ ಐಸಿಸಿ 'ದಶಕದ ಆಟಗಾರ' ಪ್ರಶಸ್ತಿಯನ್ನು ತಂದುಕೊಟ್ಟಿತ್ತು.

ಇದನ್ನೂ ಓದಿ: IND vs IRE T20: ಇಂದಿನಿಂದ ಭಾರತ - ಐರ್ಲೆಂಡ್ ಟಿ-20 ಸರಣಿ ಆರಂಭ: ಐಪಿಎಲ್​ ಸ್ಟಾರ್​ಗಳ ಮೇಲೆ ಎಲ್ಲರ ಕಣ್ಣು

Last Updated : Aug 18, 2023, 6:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.