ETV Bharat / sports

IPLನಲ್ಲಿ ಇಂದು: ಸೋಲಿನ ಸೇಡು ತೀರಿಸಿಕೊಳ್ಳಲು ರೆಡ್​ ಆರ್ಮಿ ರೆಡಿ

author img

By

Published : Apr 26, 2023, 3:35 PM IST

Royal Challengers Bangalore vs Kolkata Knight Riders Match preview
IPLನಲ್ಲಿ ಇಂದು: ಸೋಲಿನ ಸೇಡು ತೀರಿಸಿಕೊಳ್ಳಲು ರೆಡ್​ ಆರ್ಮಿ ರೆಡಿ

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಕೋಲ್ಕತ್ತಾ ನೈಟ್​ ರೈಡರ್ಸ್​​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮುಖಾಮುಖಿಯಾಗುತ್ತಿದೆ. ಉಭಯ ತಂಡಗಳ ಈ ಆವೃತ್ತಿಯ ಎರಡನೇ ಮುಖಾಮುಖಿಯಾಗಿದೆ.

ಬೆಂಗಳೂರು: ಇಂಡಿಯನ್ ಪ್ರೀಮಿಯರ್​ ಲೀಗ್​ನ 36ನೇ ಪಂದ್ಯದಲ್ಲಿ ಆರ್​ಸಿಬಿ ಮತ್ತು ಕೆಕೆಆರ್​ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿದೆ. ರಾಯಲ್​ ಚಾಲೆಂಜರ್ಸ್​ ಲೀಗ್​ನಲ್ಲಿ ಈ ವರೆಗೆ ಆಡಿರುವ 7 ಪಂದ್ಯದಲ್ಲಿ 4 ಗೆದ್ದು 8 ಅಂಕದಿಂದ 5ನೇ ಸ್ಥಾನದಲ್ಲಿದೆ. ಈ ಆವೃತ್ತಿಯಲ್ಲಿ ಕೆಕೆಆರ್​ ವಿರುದ್ಧ ಎರಡನೇ ಬಾರಿಗೆ ಎದುರಾಗುತ್ತಿದ್ದು, ಮೊದಲ ಬಾರಿ ಈಡನ್​ ಗಾರ್ಡನ್ಸ್​ನ ಫೈಟ್​ನಲ್ಲಿ ಬೆಂಗಳೂರು ಸೋತು ಕಳಪೆ ರನ್ ರೇಟ್​ ಪಡೆದುಕೊಂಡಿತ್ತು. ಈ ಸೋಲಿನ ಸೇಡನ್ನು ಇಂದು ತವರು ನೆಲದಲ್ಲಿ ಆರ್​ಸಿಬಿ ತೀರಿಸಿಕೊಳ್ಳಬೇಕಿದೆ.

ಕೆಕೆಆರ್​ 7 ಪಂದ್ಯದಲ್ಲಿ 2ನ್ನು ಗೆದ್ದು ಕೇವಲ ನಾಲ್ಕು ಅಂಕಗಳನ್ನು ಗಳಸಿಕೊಂಡಿದೆ. ಕೋಲ್ಕತ್ತಾ ನೈಟ್​ ರೈಡರ್ಸ್​ಗೆ ಈ ಪಂದ್ಯ ಸೇರಿದಂತೆ ಮುಂದಿನ ಎಲ್ಲ ಪಂದ್ಯಗಳ ಗೆಲುವು ಪಡೆಯಬೇಕಾದ ಸ್ಥಿತಿಯಲ್ಲಿದೆ. ಹಾಗಾಗಿ ಈ ಪಂದ್ಯಗಳು ಕ್ವಾಲಿಫೈಯರ್​ಗೆ ಏರಲು ಪ್ರಮುಖವಾಗಿದೆ. ಇದರಿಂದಾಗಿ ಹಾಣಾಹಣಿ ಜೋರಾಗಿರಲಿದೆ. ಸತತ ನಾಲ್ಕು ಸೋಲುಗಳನ್ನು ಕಂಡಿರುವ ರಾಣಾ ಪಡೆ ಐದನೇ ಸೋಲಿನಿಂದ ತಪ್ಪಿಸಿಕೊಳ್ಳಲು ಸಕಲ ಪಯತ್ನಗಳನ್ನು ಮಾಡಬೇಕಿದೆ.

ಆರ್​ಸಿಬಿಕೆ ಕೆಜಿಎಫ್​ ಬಲ: ರಾಯಲ್​ ಚಾಲೆಂಜರ್ಸ್​ ನೆಚ್ಚಿಕೊಂಡಿರುವುದು ಮೂವರು ಬ್ಯಾಟರ್​ಗಳನ್ನು. ಈ ವರೆಗಿನ ಪಂದ್ಯಗಳಲ್ಲಿ ವಿರಾಟ್​ ಕೊಹ್ಲಿ, ಫಾಫ್​ ಡು ಪ್ಲೆಸಿಸ್​ ಮತ್ತು ಗ್ಲೆನ್​ ಮಾಕ್ಸ್​ವೆಲ್​ ಮಾತ್ರ ರನ್​ ಗಳಿಸುತ್ತಾ ಬಂದಿದ್ದಾರೆ. ಆರಂಭಿಕ ಜೋಡಿ ವಿರಾಟ್​ ಮತ್ತು ಫಾಫ್ ಎರಡು ಶತಕದ ಜೊತೆಯಾಟ ಆಡಿದ್ದು, 7 ಪಂದ್ಯದಲ್ಲಿ ಸುಮಾರು 500 ರನ್​ ಕಲೆ ಹಾಕಿರುವ ಸಾಧ್ಯತೆ ಇದೆ. ಇನ್ನು ಮ್ಯಾಕ್ಸ್​ವೆಲ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ ನಾಲ್ಕು ಇನ್ನಿಂಗ್ಸ್​​ನಲ್ಲಿ ಮೂರರಲ್ಲಿ ಅರ್ಧಶತಕದ ಆಟ ಆಡಿದ್ದಾರೆ. ಈ ಕೆಜಿಎಫ್​ ಜೋಡಿ 12 ಅರ್ಧಶತಕ ಒಳಗೊಂಡಂತೆ ಈ ವರೆಗೆ 937 ರನ್​ ಕಲೆಹಾಕಿದೆ.

ಮಧ್ಯಮ ಕ್ರಮಾಂಕ ವೀಕ್​: ಆರ್​ಸಿಬಿಯ ಮಧ್ಯಮ ಕ್ರಮಾಂಕ ದುರ್ಬಲವಾಗಿದೆ. ವಿಕೆಟ್​ ಕೀಪರ್​ ದಿನೇಶ್​ ಕಾರ್ತಿಕ್​, ಮಹಿಪಾಲ್​ ಲಾಮ್ರೋರ್​, ಸುಯಶ್​ ಪ್ರಭುದೇಸಾಯಿ ಮತ್ತು ಶಾಬಾಜ್​ ಅಹಮದ್​ ಬ್ಯಾಟ್​ನಿಂದ ರನ್​ಗಳು ಬರುತ್ತಿಲ್ಲ. ಈ ಬ್ಯಾಟರ್​ಗಳು ಗೇಮ್​ ಫಿನಿಶಿಂಗ್​ ಜವಾಬ್ದಾರಿಯನ್ನೂ ನಿರ್ವಹಿಸುತ್ತಿಲ್ಲ. ಇದು ತಂಡಕ್ಕೆ ನೆಗೆಟಿವ್​ ಅಂಶವಾಗಿದ್ದು, ಎದುರಾಳಿಗಳು ಮೇಲಿನ ಕ್ರಮಾಂಕದ ಮೂವರು ಬ್ಯಾಟರ್​ಗಳನ್ನು ಕಟ್ಟಿಹಾಕಲು ತಂತ್ರರೂಪಿಸುತ್ತಿದ್ದಾರೆ.

ವಿರಾಟ್ ನಾಯಕತ್ವ ಮುಂದುವರಿಕೆ ಸಾಧ್ಯತೆ: ನಾಯಕ ಫಾಫ್​ ಡು ಪ್ಲೆಸಿಸ್​ಗೆ ಗಾಯಗೊಂಡಿರುವ ಹಿನ್ನೆಲೆ ಎರಡು ಪಂದ್ಯಗಳನ್ನು ವಿರಾಟ್​ ಮುನ್ನಡೆಸಿದ್ದಾರೆ. ಇಂದಿನ ಪಂದ್ಯಕ್ಕೂ ಕ್ಷೇತ್ರ ರಕ್ಷಣೆಗೆ ಫಾಫ್ ಬರುವುದು ಅನುಮಾನವಿದ್ದು, ವಿರಾಟ್​ ಸ್ಟ್ಯಾಂಡ್​ ಬೈ ಕ್ಯಾಪ್ಟನ್​ ಆಗಿ ಮುಂದುವರೆಯುವ ಸಾಧ್ಯತೆ ಇದೆ.

ಸಂಭಾವ್ಯ ತಂಡಗಳು..: ರಾಯಲ್​ ಚಾಲೆಂಜರ್ಸ್​ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ಫಾಫ್ ಡು ಪ್ಲೆಸಿಸ್, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್​ ಕೀಪರ್​​), ಸುಯಶ್ ಪ್ರಭುದೇಸಾಯಿ, ಡೇವಿಡ್ ವಿಲ್ಲಿ, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್. ಇಂಪ್ಯಾಕ್ಟ್ ಪ್ಲೇಯರ್ - ವೈಶಾಕ್ ವಿಜಯ್ ಕುಮಾರ್.

ಕೋಲ್ಕತ್ತಾ ನೈಟ್​ ರೈಡರ್ಸ್​: ಎನ್ ಜಗದೀಶನ್ (ವಿಕೆಟ್​ ಕೀಪರ್​), ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಡೇವಿಡ್ ವೈಸ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ. ಇಂಪ್ಯಾಕ್ಟ್ ಪ್ಲೇಯರ್ - ಸುಯಾಶ್​ ಶರ್ಮಾ.

ಇದನ್ನೂ ಓದಿ: ಅರ್ಧ ಐಪಿಎಲ್​ ಮುಕ್ತಾಯ.. ಪಟ್ಟಿಯಲ್ಲಿ ಚೆನ್ನೈ ಅಗ್ರ ಸ್ಥಾನ, ಆರ್​ಸಿಬಿ ಎಲ್ಲಿದೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.