ETV Bharat / sports

'ರಜತ್' ಆರ್​ಸಿಬಿ ಸೇರಿದ್ದು ರೋಚಕ.. ಮದುವೆಗೆ ಸಿದ್ಧವಾಗ್ತಿದ್ದ ಪಾಟಿದಾರ್​​ ದಿಢೀರ್ ತಂಡ ಸೇರಿದ್ಹೇಗೆ!?

author img

By

Published : May 26, 2022, 5:33 PM IST

Rajat Patidar postponed marriage to return to RCB
Rajat Patidar postponed marriage to return to RCB

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಅನ್​ಕ್ಯಾಪ್ಡ್ ಪ್ಲೇಯರ್​​ ರಜತ್ ಪಾಟಿದಾರ್​ ಆರ್​ಸಿಬಿ ಅಭಿಮಾನಿಗಳಿಗೆ ರಾತ್ರೋರಾತ್ರಿ ಹೀರೋ ಆಗಿದ್ದು, ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕೆ ಅನೇಕರು ತಲೆದೂಗಿದ್ದಾರೆ.

ಕೋಲ್ಕತ್ತಾ: ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿ ರಜತ್ ಪಾಟಿದಾರ್ ಎಂಬ ಕ್ರಿಕೆಟರ್ ಒಬ್ಬ​​​​ ಇದ್ದಾನೆಂಬುದು ಅದೆಷ್ಟೋ ಜನರಿಗೆ ಗೊತ್ತೇ ಇರಲಿಲ್ಲ. ಆದರೆ, ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನದಿಂದ ಲಕ್ಷಾಂತರ ಕ್ರೀಡಾಭಿಮಾನಿಗಳ ಮನದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ. ಇದರ ಜೊತೆಗೆ ತಮ್ಮಲ್ಲಿರುವ ಬ್ಯಾಟಿಂಗ್ ಪ್ರತಿಭೆ ಹೊರಹಾಕಿ, ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ರಜತ್ ಆರ್​ಸಿಬಿ ತಂಡ ಸೇರಿದ್ದು ರೋಚಕ: ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ಐಪಿಎಲ್​​ ಮೆಗಾ ಹರಾಜು ಪ್ರಕ್ರಿಯೆಲ್ಲಿ ರಜತ್ ಪಾಟಿದಾರ್​ ಅನ್​ಸೋಲ್ಡ್​ ಆಗಿದ್ದರು. ಹೀಗಾಗಿ, ಅವರ ಮದುವೆ ದಿನಾಂಕ ನಿಗದಿಪಡಿಸಿ, ಅದಕ್ಕೋಸ್ಕರ ತಯಾರಿ ನಡೆಸಲಾಗಿತ್ತು. ಇದರ ಬೆನ್ನಲ್ಲೇ ಆರ್​ಸಿಬಿ ಕಡೆಯಿಂದ ತಡವಾಗಿ ಕರೆ ಸ್ವೀಕರಿಸುತ್ತಿದ್ದಂತೆ ಮದುವೆ ದಿನಾಂಕ ಮುಂದೂಡಿಕೆ ಮಾಡಿ, ಫ್ರಾಂಚೈಸಿ ಸೇರಿಕೊಳ್ಳುತ್ತಾರೆ. ಇದೀಗ ಅಬ್ಬರಿಸಿ, ತಮ್ಮ ಸ್ಫೋಟಕ ಪ್ರದರ್ಶನ ಹೊರಹಾಕಿದ್ದಾರೆ.

ಇದನ್ನೂ ಓದಿ: ಸಿಕ್ಸ್​​-ಫೋರ್​ಗಳ ಸುರಿಮಳೆ ಹರಿಸಿದ ರಜತ್​... ಆರ್​ಸಿಬಿ ಅನ್​ಕ್ಯಾಪ್ಡ್ ಪ್ಲೇಯರ್​ ದಾಖಲೆ

2021ರ ಐಪಿಎಲ್​​ನಲ್ಲಿ ಆರ್​ಸಿಬಿ ಪರ ಆಡಿದ್ದ ರಜತ್​ 4 ಪಂದ್ಯಗಳಿಂದ ಕೇವಲ 71ರನ್​​ಗಳಿಕೆ ಮಾಡಿದ್ದರು. ಹೀಗಾಗಿ, ಫ್ರಾಂಚೈಸಿ ಕೈಬಿಟ್ಟಿತ್ತು. ಮೆಗಾ ಹರಾಜಿನಲ್ಲಿ ಅನ್​ಸೋಲ್ಡ್ ಆದ ಕಾರಣ ಮೇ 9ರಂದು ಮದುವೆ ದಿನಾಂಕ ಸಿದ್ಧಪಡಿಸಿದ್ದರು. ಇದರ ಮಧ್ಯೆ ಲುಮ್ನಿತ್​ ಸಿಸೋಡಿಯಾ ಗಾಯಗೊಳ್ಳುತ್ತಿದ್ದಂತೆ ಪಾಟಿದಾರ್​ ಬದಲಿ ಆಟಗಾರನಾಗಿ ಮೂಲ ಬೆಲೆ 20 ಲಕ್ಷ ರೂಪಾಯಿಗೆ ಆರ್​ಸಿಬಿ ಸೇರಿಕೊಳ್ಳುತ್ತಾರೆ.

ಕೆಲವೊಂದು ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲವಾದರೂ, ನಿನ್ನೆಯ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದರು. ಈ ಮೂಲಕ ಎಲ್ಲರ ಮನದಲ್ಲೂ ಉಳಿದುಕೊಂಡಿದ್ದಾರೆ. ತಾವು ಎದುರಿಸಿದ 54 ಎಸೆತಗಳಲ್ಲಿ ಅಜೇಯ 112ರನ್​​ಗಳಿಕೆ ಮಾಡಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಇವರ ಬ್ಯಾಟಿಂಗ್ ವೈಖರಿಗೆ ಫಿದಾ ಆಗಿರುವ ವಿರಾಟ್ ಕೊಹ್ಲಿ, ಖಂಡಿತವಾಗಿ ಪಾಟಿದಾರ್ ಟೀಂ ಇಂಡಿಯಾದ ಸೂಪರ್​ ಕ್ರಿಕೆಟರ್​​ ಆಗಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ. ಮಧ್ಯಪ್ರದೇಶದ ಪರ ಆಡುತ್ತಿರುವ ಪಾಟಿದಾರ್​, ರಣಜಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದೀಗ ಅದ್ಭುತ ಪ್ರದರ್ಶನನೊಂದಿಗೆ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಪ್ರಸಕ್ತ ಸಾಲಿನ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಪರ ಶತಕ ಸಿಡಿಸಿರುವ ಮೊದಲ ಪ್ಲೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರಜತ್ ಪಾಟಿದಾರ್, ಪ್ಲೇ-ಆಫ್​​​ ಹಂತದಲ್ಲಿ ಆರ್​ಸಿಬಿ ಪರ ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಗೂ ರಜತ್ ಪಾತ್ರರಾದರು. ಇವರ ಬ್ಯಾಟಿಂಗ್ ವೈಖರಿಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್​​ಗಳಾದ ಸಚಿನ್ ತೆಂಡೂಲ್ಕರ್​, ವಿರೇಂದ್ರ ಸೆಹ್ವಾಗ್ ಸೇರಿದಂತೆ ಅನೇಕರು ಟ್ವೀಟ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.