ETV Bharat / sports

ಸಿಕ್ಸ್​​-ಫೋರ್​ಗಳ ಸುರಿಮಳೆ ಹರಿಸಿದ ರಜತ್​... ಆರ್​ಸಿಬಿ ಅನ್​ಕ್ಯಾಪ್ಡ್ ಪ್ಲೇಯರ್​ ದಾಖಲೆ

author img

By

Published : May 25, 2022, 10:52 PM IST

ಲಖನೌ ತಂಡದ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ರಜತ್ ಪಾಟಿದಾರ್​ ಶತಕ ಸಿಡಿಸಿ ಮಿಂಚಿದ್ದು, ಈ ಮೂಲಕ ಐಪಿಎಲ್​​ನಲ್ಲಿ ಹೊಸದೊಂದು ದಾಖಲೆ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.

ಆರ್​ಸಿಬಿ ಅನ್​ಕ್ಯಾಪ್ಡ್ ಪ್ಲೇಯರ್​ನಿಂದ ದಾಖಲೆ
ಆರ್​ಸಿಬಿ ಅನ್​ಕ್ಯಾಪ್ಡ್ ಪ್ಲೇಯರ್​ನಿಂದ ದಾಖಲೆ

ಕೋಲ್ಕತ್ತಾ: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಅನ್​ಕ್ಯಾಪ್ಡ್ ಪ್ಲೇಯರ್​​ ರಜತ್ ಪಾಟಿದಾರ್​ ಹೊಸದಾಖಲೆ ಬರೆದಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸಿಕ್ಸ್​​-ಫೋರ್​​ಗಳ ಸುರಿಮಳೆಯನ್ನೇ ಹರಿಸಿದ ಈ ಪ್ಲೇಯರ್​ ಅಜೇಯ 112ರನ್​ ಸಿಡಿಸಿ ಮಿಂಚಿದರು. ಈ ಮೂಲಕ ಚೊಚ್ಚಲ ಶತಕ ಸಾಧನೆ ಮಾಡಿದರು.

  • 1⃣1⃣2⃣* Runs
    5⃣4⃣ Balls
    1⃣2⃣ Fours
    7⃣ Sixes

    Recap the Rajat Patidar batting brilliance & the fastest hundred of the #TATAIPL 2022. 🔝 ✨ #LSGvRCB | @RCBTweets

    Watch that stroke-filled extravaganza 🎥 🔽https://t.co/6sWBLTcOwm

    — IndianPremierLeague (@IPL) May 25, 2022 " class="align-text-top noRightClick twitterSection" data=" ">

ಡುಪ್ಲೆಸಿಸ್ ವಿಕೆಟ್ ಪತನಗೊಳ್ಳುತ್ತಿದ್ದಂತೆ ಮೈದಾನಕ್ಕೆ ಬಂದ ರಜತ್​, ಕೇವಲ 28 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಇದಾದ ಬಳಿಕ ಅಬ್ಬರಿಸಿದ ಪಾಟಿದಾರ್ ತಾವು ಎದುರಿಸಿದ 49 ಎಸೆತಗಳಲ್ಲಿ ಚೊಚ್ಚಲ ಶತಕ ಪೂರ್ಣಗೊಳಿಸಿದರು. ಅಜೇಯರಾಗಿ ಉಳಿದ ಈ ಪ್ಲೇಯರ್ ತಾವು ಎದುರಿಸಿದ 54 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್​, 12 ಬೌಂಡರಿ ಸಮೇತ 112ರನ್​ಗಳಿಸಿದರು.

ಈ ಮೂಲಕ ಪ್ರಸಕ್ತ ಐಪಿಎಲ್​​ನಲ್ಲಿ ಆರ್​ಸಿಬಿ ಪರ ಶತಕ ಸಿಡಿಸಿರುವ ಮೊದಲ ಪ್ಲೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2022ರ ಐಪಿಎಲ್​​ನಲ್ಲಿ ಆರ್​ಸಿಬಿ ತಂಡದ ಯಾವುದೇ ಬ್ಯಾಟರ್​ ಮೂರಂಕಿ ರನ್​ಗಳಿಕೆ ಮಾಡಿಲ್ಲ. ಇನ್ನೂ ಪ್ಲೇ-ಆಫ್​​​ ಹಂತದಲ್ಲಿ ಆರ್​ಸಿಬಿ ಪರ ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಗೂ ರಜತ್ ಪಾತ್ರರಾದರು.

ಐಪಿಎಲ್ ಇತಿಹಾಸದಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾಟಿದಾರ್ ಪಾತ್ರರಾಗಿದ್ದು, ಪ್ಲೇ-ಆಫ್​​ ಹಂತದಲ್ಲಿ ಸೆಂಚುರಿ ಬಾರಿಸಿದ 5ನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಇನ್ನೂ ಐಪಿಎಲ್​ನಲ್ಲಿ ಅನ್​ಕ್ಯಾಪ್ಡ್​​ ಬ್ಯಾಟರ್ ಆಗಿ ಶತಕ ಸಿಡಿಸಿರುವ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾಟಿದಾರ್ ಪಾತ್ರರಾಗಿದ್ದಾರೆ. ಈಗಾಗಲೇ ಮನೀಷ್ ಪಾಂಡೆ 2009, ದೇವದತ್ ಪಡಿಕ್ಕಲ್​ 2021ರಲ್ಲಿ ಈ ಸಾಧನೆ ಮಾಡಿದ್ದಾರೆ.

ವಿಶೇಷವೆಂದರೆ ಮಹತ್ವದ ಪಂದ್ಯದಲ್ಲಿ ತಂಡದ ಡುಪ್ಲೆಸಿಸ್​, ವಿರಾಟ್ ಕೊಹ್ಲಿ ಹಾಗೂ ಮ್ಯಾಕ್ಸ್​​​ವೆಲ್​ ಬ್ಯಾಟಿಂಗ್ ವೈಫಲ್ಯ ಅನುಭವಿಸಿ, ನಿರಾಸೆ ಮೂಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.