ETV Bharat / sports

₹2.4 ಕೋಟಿಗೆ ಡೆಲ್ಲಿ ಪಾಲಾದ ಮನೀಶ್ ಪಾಂಡೆ; ಮಿನಿ ಹರಾಜಿನಲ್ಲಿ ಆರ್​ಸಿಬಿಗೆ ಯಾರೆಲ್ಲಾ?

author img

By

Published : Dec 23, 2022, 7:53 PM IST

ipl-auction-2023-dc-rope-in-manish-pandey
ಮನೀಶ್ ಪಾಂಡೆ ಮತ್ತು ಆರ್​ಸಿಬಿ

ಕೇರಳದ ಕೊಚ್ಚಿಯಲ್ಲಿ ನಡೆಯುತ್ತಿರುವ ಐಪಿಎಲ್​ ಮಿನಿ ಹರಾಜಿನಲ್ಲಿ ಆರ್​ಸಿಬಿ ತಂಡ ಇಬ್ಬರು ವಿದೇಶಿಗರು ಸೇರಿದಂತೆ ಐವರು ಆಟಗಾರರನ್ನು ಖರೀದಿಸಿದೆ.

ಕೊಚ್ಚಿ (ಕೇರಳ): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)​ ಹರಾಜಿನಲ್ಲಿ ಕನ್ನಡಿಗ ಮನೀಷ್​ ಪಾಂಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ. ಆರ್​ಆರ್​ ಮತ್ತು ಆರ್​ಸಿಬಿ ನಡುವಿನ ಪೈಪೋಟಿ ನಡುವೆಯೇ ಡೆಲ್ಲಿ 2.4 ಕೋಟಿ ರೂ ಕೊಟ್ಟು ಮನೀಷ್​ರನ್ನು ಖರೀದಿಸಿತು.

ಅನುಭವಿ ಬ್ಯಾಟರ್ ಮನೀಶ್ ಪಾಂಡೆ ಕಳೆದ ಬಾರಿ ಲಖನೌ ಸೂಪರ್ ಜೈಂಟ್ಸ್‌ (ಎಲ್​ಎಸ್​ಜಿ) ತಂಡಕ್ಕೆ 4 ಕೋಟಿ ರೂ.ಗೆ ಹರಾಜಾಗಿಗಿದ್ದರು. ಆದರೆ, ಈ ಬಾರಿ ಕಡಿಮೆ ಬೆಲೆಗೆ ಬಿಕರಿ ಆಗಿದ್ದಾರೆ. ಪಾಂಡೆ ಅವರ ಮೂಲ ಬೆಲೆ 1 ಕೋಟಿ ರೂ. ನಿಗದಿಯಾಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಬಿಡ್ ಮಾಡಲು ಪ್ರಯತ್ನಿಸಿದವು. ನಂತರ ರಾಜಸ್ಥಾನ ರಾಯಲ್ಸ್​ ಮತ್ತು ಆರ್​​ಸಿಬಿ ನಡುವೆ ಪೈಪೋಟಿ ನಡೆಯಿತು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮನೀಷ್​ ಪಾಂಡೆ ಅವರನ್ನು ಸೇರಿಸಿಕೊಂಡಿತು.

ಇದನ್ನೂ ಓದಿ: ಕೆರಿಬಿಯನ್ ಕ್ರಿಕೆಟಿಗನಿಗೆ 16 ಕೋಟಿ ರೂ! ಕೆ.ಎಲ್‌ ರಾಹುಲ್‌ ತಂಡದಲ್ಲಿ ಪೂರನ್ ಆಟ

ಐವರನ್ನು ಖರೀದಿಸಿದ ಆರ್​ಸಿಬಿ: ಮಿನಿ ಹರಾಜಿನಲ್ಲಿ ಆರ್​ಸಿಬಿ ತಂಡ ಇದುವರೆಗೆ ಇಬ್ಬರು ವಿದೇಶಿಗರು ಸೇರಿದಂತೆ ಐವರು ಆಟಗಾರರನ್ನು ಖರೀದಿಸಿದೆ. ಇದರಲ್ಲಿ ಇಂಗ್ಲೆಂಡ್​ನ ಬ್ಯಾಟರ್​ ವಿಲ್​ ಜಾಕ್ಸ್​ ಅವರಿಗೆ 3.20 ಕೋಟಿ ರೂಪಾಯಿ ನೀಡಿ ಕೊಂಡುಕೊಂಡಿದೆ. ಜೊತೆಗೆ, ಇಂಗ್ಲೆಂಡ್​ನ ಮತ್ತೊಬ್ಬ ಆಟಗಾರರಾದ ಬೌಲರ್​​ ರೀಸ್ ಟೋಪ್ಲಿ ಅವರನ್ನೂ 1.9 ಕೋಟಿಗೆ ಆರ್​ಸಿಬಿ ತಂಡ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಉಳಿದಂತೆ, ಬೌಲರ್​ ರಾಜನ್ ಕುಮಾರ್ ಅವರನ್ನು 70 ಲಕ್ಷ ರೂ ಮತ್ತು ಆಲ್​ರೌಂಡರ್​ ಮನೋಜ್ ಭಾಂಡ ಹಾಗೂ ಬೌಲರ್​ ಹಿಮಾಂಶು ಶರ್ಮಾ ಅವರನ್ನು ತಲಾ 20 ಲಕ್ಷ ರೂ ಕೊಟ್ಟು ಆರ್​ಸಿಬಿ ಫ್ರಾಂಚೈಸಿ ಖರೀದಿಸಿತು. ಆರ್​ಸಿಬಿ ಖಾತೆಯಲ್ಲಿ ಇನ್ನೂ 2.5 ಕೋಟಿ ರೂ ಬಾಕಿ ಉಳಿದಿದೆ. ಒಟ್ಟಾರೆ 23 ಆಟಗಾರರು ತಂಡದ ಬಳಿಯಿದ್ದು, ಇದರಲ್ಲಿ 8 ಜನ ವಿದೇಶಿ ಕ್ರಿಕೆಟಿಗರನ್ನು ಆರ್​ಸಿಬಿ ಹೊಂದಿದೆ.

ಇದನ್ನೂ ಓದಿ: ₹18.5 ಕೋಟಿ! ಐಪಿಎಲ್​ ಟೂರ್ನಿ ಇತಿಹಾಸದಲ್ಲೇ ಅತಿ ದುಬಾರಿ ಆಟಗಾರ ಸ್ಯಾಮ್ ಕರ್ರಾನ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.