ETV Bharat / sports

Cricket World Cup 2023: ಭಾರತದ ಬೌಲಿಂಗ್​ ದಾಳಿಗೆ ನಲುಗಿದ ಪಾಕ್​.. 191ಕ್ಕೆ ಸರ್ವಪತನ

author img

By ETV Bharat Karnataka Team

Published : Oct 14, 2023, 3:26 PM IST

Updated : Oct 14, 2023, 5:48 PM IST

ICC Cricket World Cup 2023
ICC Cricket World Cup 2023

ವಿಶ್ವಕಪ್​ನ 12ನೇ ಲೀಗ್​ ಪಂದ್ಯದಲ್ಲಿ ಭಾರತ - ಪಾಕಿಸ್ತಾನ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಿದ್ದು, ಟಾಸ್​ ಗೆದ್ದ ಭಾರತ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.

ಅಹಮದಾಬಾದ್​ (ಗುಜರಾತ್​​): ವಿಶ್ವಕಪ್​ನ ಮೂರನೇ ಪಂದ್ಯದಲ್ಲೂ ಭಾರತ ಬೌಲಿಂಗ್​​ ಸಾಮರ್ಥ್ಯವನ್ನು ಮೆರೆದಿದೆ. ಭಾರತದ ಐವರು ಬೌಲರ್​ಗಳು ತಲಾ ಎರಡು ವಿಕೆಟ್​ ಕಬಳಿಸಿ 42.5 ಓವರ್​ಗೆ 191 ರನ್​ಗೆ ಪಾಕಿಸ್ತಾನವನ್ನು ಆಲ್​ಔಟ್​ ಮಾಡಿದರು. ಪಾಕಿಸ್ತಾನ ಪರ ಬಾಬರ್​ ಅಜಮ್​, ಮೊಹಮ್ಮದ್ ರಿಜ್ವಾನ್​, ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್-ಉಲ್-ಹಕ್ ಗಮನಾರ್ಹ ಇನ್ನಿಂಗ್ಸ್​ ಆಡಿದ್ದರಿಂದ ಭಾರತ 192 ರನ್ ಗುರಿ ಎದುರಿಸಬೇಕಿದೆ.

ಭಾರತ ವಿಶ್ವಕಪ್​ಗೂ ಮುನ್ನ ಏಷ್ಯಾಕಪ್​ ಫೈನಲ್​ನಲ್ಲಿ ತಾನು ಬೌಲಿಂಗ್​ನಲ್ಲಿ ಸಮರ್ಥ ತಂಡ ಎಂದು ವಿಶ್ವಕ್ಕೆ ಸಂದೇಶ ನೀಡಿತ್ತು. ಅದರಂತೆ ವಿಶ್ವಕಪ್​ನ ಎರಡು ಪಂದ್ಯದಲ್ಲಿ ನಿಯಂತ್ರಿತ ಬೌಲಿಂಗ್​ ಪ್ರದರ್ಶನ ನೀಡಿತ್ತು. ಪಾಕಿಸ್ತಾನದ ವಿರುದ್ಧದ ಮೂರನೇ ಪಂದ್ಯದಲ್ಲಿ ಅದೇ ಲಯದ ಬೌಲಿಂಗ್​ನ್ನು ಮುಂದುವರೆಸಿದೆ. ಸಿರಾಜ್​ ಆರಂಭದಲ್ಲಿ ದುಬಾರಿ ಆದರು ನಂತರ ವಿಕೆಟ್​ ಪಡೆಯುವಲ್ಲಿ ಯಶಸ್ವಿ ಆದರೆ. ಪಾಕಿಸ್ತಾನ ನಾಯಕ ಬಾಬರ್​ ಅರ್ಧಶತಕ ಮತ್ತು ರಿಜ್ವಾನ್​ ಅವರ 49 ರನ್​ ಬಲವಾಯಿತು. ಮತ್ತಾವ ಬ್ಯಾಟರ್​​ನಿಂದಲೂ ದೊಡ್ಡ ಇನ್ನಿಂಗ್ಸ್​ ಬರಲೇ ಇಲ್ಲ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಪಾಕ್​ ಮೊದಲ 5 ಓವರ್​ನಲ್ಲಿ ಉತ್ತಮ ಲಯದಲ್ಲಿ ಬ್ಯಾಟಿಂಗ್​ ಮಾಡಿತು. ಆದರೆ 8ನೇ ಓವರ್​ನಲ್ಲಿ ಸಿರಾಜ್​ ಅಬ್ದುಲ್ಲಾ ಶಫೀಕ್ (20) ಅವರ ವಿಕೆಟ್​ ಪಡೆದರು. ಅವರ ಬೆನ್ನಲ್ಲೇ ಇನ್ನೊಬ್ಬ ಆರಂಭಿಕ ಆಟಗಾರ ಇಮಾಮ್-ಉಲ್-ಹಕ್ (36) ವಿಕೆಟ್​ ಸಹ ಉರುಳಿತು.

ಬಾಬರ್​ - ರಿಜ್ವಾನ್​ ಜೊತೆಯಾಟ: ಮೂರನೇ ವಿಕೆಟ್​ಗೆ ಒಂದಾದ ನಾಯಕ ಬಾಬರ್​ ಅಜಮ್​ ಮತ್ತು ವಿಕೆಟ್​ ಕೀಪರ್​ ಮೊಹಮ್ಮದ್ ರಿಜ್ವಾನ್ ಭರ್ಜರಿ ಜೊತೆಯಾಟ ಮಾಡಿದರು. ಈ ಜೋಡಿ ತಂಡಕ್ಕೆ ವಿಕೆಟ್​ ಕಾಯ್ದುಕೊಟ್ಟಿದ್ದಲ್ಲದೇ, ಆರಂಭಿಕ ವಿಕೆಟ್​ ನಷ್ಟದಿಂದ ತಂಡಕ್ಕೆ ಚೇತರಿಕೆಯನ್ನು ನೀಡಿತು. ಎರಡು ಪಂದ್ಯದಲ್ಲಿ ವಿಫಲತೆ ಕಂಡಿದ್ದ ಬಾಬರ್​ ಅಜಮ್​ ಇಂದು ಅರ್ಧಶತಕ ಗಳಿಸಿದರು. 58 ಬಾಲ್​ ಎದುರಿಸಿದ ಬಾಬರ್​ ಅಜಮ್​ 7 ಬೌಂಡರಿ ಸಹಾಯದಿಂದ 50 ರನ್​ ಗಳಿಸಿದರು. ಇಬ್ಬರು 82 ರನ್​ನ ಜೊತೆಯಾಟ ಆಡಿದರು.

36 ರನ್​ ಅಂತರದಲ್ಲಿ 8 ವಿಕೆಟ್​ ಪತನ: 50 ರನ್​ ಗಳಿಸಿದ ಬಾಬರ್ ಸಿರಾಜ್​ಗೆ ವಿಕೆಟ್​ ಕೊಟ್ಟರು. ಅವರ ಬೆನ್ನಲ್ಲೇ ​ಸೌದ್ ಶಕೀಲ್(6), ಇಫ್ತಿಕರ್ ಅಹ್ಮದ್ (4) ವಿಕೆಟ್​ನ್ನು ಕುಲ್ದೀಪ್​ ಯಾದವ್​ ಪಡೆದರು. ಈ ವೇಳೆ 49 ರನ್​ ಗಳಿಸಿ ಪಿಚ್​​ಗೆ ಸೆಟ್​ ಆಡುತ್ತಿದ್ದ ರಿಜ್ವಾನ್​ ಬುಮ್ರಾಗೆ ವಿಕೆಟ್​ ಕೊಟ್ಟರು. 1 ರನ್​ನಿಂದ ಸತತ ಮೂರನೇ ಅರ್ಧಶತಕ ಗಳಿಸುವ ಅವಕಾಶವನ್ನು ಕಳೆದುಕೊಂಡರು. ಅವರ ನಂತರ ಬಂದ ಶಾದಾಬ್ ಖಾನ್ (2) ಬುಮ್ರಾಗೆ ಕ್ಲೀನ್​ ಬೌಲ್ಡ್​ ಆದರು.

ನಿಲ್ಲದ ಬಾಲಂಗೋಚಿಗಳು: ಮೊದಲ ನಾಲ್ಕು ಆಟಗಾರರು ಎರಡಂಕಿಯ ರನ್​ ಗಳಿಸಿದರೆ, ನಂತರದ ಬ್ಯಾಟರ್​ಗಳು ಒಂದಂಕಿಗೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಸೇರಿದ್ದರು. ಬಾಲಂಗೋಚಿಗಳಾದ ಮೊಹಮ್ಮದ್ ನವಾಜ್(4), ಹಸನ್ ಅಲಿ (12), ಹಾರಿಸ್ ರೌಫ್ (2) ಭಾರತದ ಬೌಲಿಂಗ್​ ಎದುರಿಸುವಲ್ಲಿ ಎಡವಿದರು. ಇದರಿಂದ ಪಾಕಿಸ್ತಾನ 42.5 ಓವರ್​ಗೆ ಸರ್ವಪತನ ಕಂಡ ಪಾಕಿಸ್ತಾನ 191 ರನ್​ ಗಳಿಸಲಷ್ಟೇ ಶಕ್ತವಾಯಿತು.

ಭಾರತದ ಪರ ಜಸ್ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್​, ಹಾರ್ದಿಕ್​ ಪಾಂಡ್ಯ, ಕುಲ್ದೀಪ್​ ಯಾದವ್​ ಮತ್ತು ರವೀಂದ್ರ ಜಡೇಜಾ ತಲಾ ಎರಡೆರಡು ವಿಕೆಟ್​​​ಗಳನ್ನು ಸಮಾನವಾಗಿ ಹಂಚಿಕೊಂಡರು. ಅದರಲ್ಲೂ ಕುಲ್ದೀಪ್​ ಯಾದವ್​ 10 ಓವರ್​ ಮಾಡಿ 35 ರನ್​ ಬಿಟ್ಟುಕೊಟ್ಟು ಅತ್ಯುತ್ತಮ ಬೌಲಿಂಗ್​ ಪ್ರದರ್ಶನ ನೀಡಿದರು.

ಇದನ್ನೂ ಓದಿ: Cricket World Cup: 8ನೇ ಗೆಲುವಿನ ಮೇಲೆ ಕಣ್ಣಿಟ್ಟಿರುವ ಭಾರತ.. ಉಭಯ ತಂಡಗಳ ಆಟಗಾರರ ಮಧ್ಯೆ ಹೀಗಿದೆ ಕಾದಾಟ

Last Updated :Oct 14, 2023, 5:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.