ETV Bharat / sports

ಐಪಿಎಲ್​ ಮೊದಲ ಪಂದ್ಯದಲ್ಲಿ 9 ಸಿಕ್ಸ್ ಬಾರಿಸಿದ ಗಾಯಕ್ವಾಡ್ ಬ್ಯಾಟಿಂಗ್​ಗೆ ಕುಂಬ್ಳೆ ಮೆಚ್ಚುಗೆ

author img

By

Published : Apr 1, 2023, 7:55 PM IST

gaikwads-sixes-were-clean-and-pure-timing-kumble
ಗಾಯಕ್ವಾಡ್ ಅವರ ಸಿಕ್ಸರ್‌ಗಳು ‘ಕ್ಲೀನ್’ ಮತ್ತು ‘ಪ್ಯೂರ್ ಟೈಮಿಂಗ್’: ಕುಂಬ್ಳೆ

50 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು 9 ಸಿಕ್ಸರ್​​ ಒಳಗೊಂಡು 92 ರನ್ ಗಳಿಸಿದ ರುತುರಾಜ್​ ಗಾಯಕ್ವಾಡ್​ ಅವರ ಬ್ಯಾಟಿಂಗ್ ಶೈಲಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಅಹಮದಾಬಾದ್​​: ಐಪಿಎಲ್​​ ಆರಂಭಿಕ ಪಂದ್ಯದಲ್ಲಿ ಗುಜರಾತ್​​ ಟೈಟಾನ್ಸ್​​ ವಿರುದ್ಧ 92 ರನ್​ ಗಳಿಸಿದ ಚೆನ್ನೈ ಸೂಪರ್​ ಕಿಂಗ್ಸ್​​ ತಂಡದ ಆರಂಭಿಕ ಆಟಗಾರ ರುತುರಾಜ್​ ಗಾಯಕ್ವಾಡ್​ ಅವರ ಸಿಕ್ಸರ್ ಹೊಡೆತಗಳ ಬಗ್ಗೆ ಟೀಂ ಇಂಡಿಯಾ ಮಾಜಿ ಅನಿಲ್ ಕುಂಬ್ಳೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗಾಯಕ್ವಾಡ್​ ಅವರ ಎಲ್ಲಾ ಹೊಡೆತಗಳು ''ಕ್ಲೀನ್​'' ಮತ್ತು ''ಉತ್ತಮ ಟೈಮಿಂಗ್''​ನ ಫಲಿತಾಂಶವಾಗಿದೆ ಎಂದು ಕುಂಬ್ಳೆ ಹೇಳಿದ್ದಾರೆ.

''ಇನ್ನಿಂಗ್ಸ್​​ನಲ್ಲಿ 9 ಸಿಕ್ಸರ್​​ ಹೊಡೆಯುವುದು ನಿಜವಾಗಿಯೂ ಅದ್ಭುತ, ಪ್ರತಿಯೊಂದು ಹೊಡೆತವು ಸ್ಪಷ್ಟವಾಗಿ ಕಾಣುತ್ತದೆ. ಯಾವುದೇ ಬಲಪ್ರದರ್ಶನವಿಲ್ಲದೇ ಕೇವಲ ಟೈಮಿಂಗ್​​ ಮೂಲಕ ಇದು ಸಾಧ್ಯ'' ಎಂದು ಅಧಿಕೃತ ಐಪಿಎಲ್​​ ಪ್ರಸಾರಕರ ಬಿಡುಗಡೆಯಲ್ಲಿ ಕುಂಬ್ಳೆ ಹೇಳಿದ್ದಾರೆ. ಆದರೆ, 50 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು 9 ಸಿಕ್ಸರ್​​ ಒಳಗೊಂಡ ಗಾಯಕ್ವಾಡ್​ ಅವರ ಇನ್ನಿಂಗ್ಸ್​​ ಗುಜರಾತ್ ​ಟೈಟಾನ್ಸ್​​ನ ಆಲ್​ರೌಂಡರ್​ ಪ್ರದರ್ಶನದಿಂದ ಮರೆಯಾಯಿತು.

ಗಾಯಕ್ವಾಡ್​ ಆಟವನ್ನು ಅಭಿನಂದಿಸಿದ ಭಾರತದ ಮಾಜಿ ವಿಕೆಟ್​​ ಕೀಪರ್​​ ಪಾರ್ಥಿವ್​ ಪಟೇಲ್​​, ‘‘ಇತರ ಬ್ಯಾಟ್ಸ್​​ಮನ್​ಗಳಿಗೆ ಹೋಲಿಸಿದರೆ ರುತುರಾಜ್​ ಗಾಯಕ್ವಾಡ್​ ವಿಭಿನ್ನ ವಿಕೆಟ್​​ನಲ್ಲಿ ಬ್ಯಾಟಿಂಗ್​ ಮಾಡುತ್ತಿರುವಂತೆ ತೋರುತ್ತಿದೆ. ಅವರು ಬಳಸಿದ ವಿಧಾನವು ಅತ್ಯಂತ ಪ್ರಶಂಸನೀಯವಾಗಿದೆ’’ ಎಂದು ಜಿಯೋ ಸಿನಿಮಾ ಎಕ್ಸ್​ಪರ್ಟ್​ನಲ್ಲಿ ಪಾರ್ಥಿವ್​ ಹೇಳಿದ್ದಾರೆ. 2021ರ ಐಪಿಎಲ್​​ ಸಮಯದಲ್ಲಿ ಗಾಯಕ್ವಾಡ್​ ಅವರು 16 ಪಂದ್ಯದಲ್ಲಿ 635 ರನ್​​ ಗಳಿಸಿದ್ದರು, ಇದರಲ್ಲಿ ಒಂದು ಶತಕ ಒಳಗೊಂಡಿತ್ತು ಮತ್ತು ಐಪಿಎಲ್​​ನಲ್ಲಿ ಸಿಎಸ್​ಕ್​ ತಂಡವು ನಾಲ್ಕನೇ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕಳೆದ ವರ್ಷ ಚೆನ್ನೈ ತಂಡವು ಕಳಪೆ ಪ್ರದರ್ಶನದಿಂದಾಗಿ 9ನೇ ಸ್ಥಾನ ಪಡೆದುಕೊಂಡಿತ್ತು.

ರುತುರಾಜ್​ ಗಾಯಕ್ವಾಡ್​ ಅವರು ಹಾರ್ದಿಕ್​​ ಪಾಂಡ್ಯ ಬಳಗದ ಮೇಲೆ ವಿಶೇಷ ಒಲವನ್ನು ಹೊಂದಿದ್ದು, ಟೈಟಾನ್ಸ್​​ ವಿರುದ್ಧ ಆಡಿದ ಮೂರು ಇನ್ನಿಂಗ್ಸ್​​ಗಳಲ್ಲಿ ಅರ್ಧಶತಕ ಬಾರಿಸಿ ಒಟ್ಟು 218 ರನ್ ಕಲೆ ಹಾಕಿದ್ದರು. ಮೊದಲು ಬ್ಯಾಟಿಂಗ್​​ ಮಾಡಿದ ಚೆನ್ನೈ ನೀಡಿದ ಟಾರ್ಗೆಟ್​ ಸ್ಪರ್ಧಾತ್ಮಕವಾಗಿರಲಿಲ್ಲ ಎಂದು ಪಾರ್ಥಿವ್​ ಪಟೇಲ್​ ಭಾವಿಸಿದರು, ''ಈ ಮೈದಾನದಲ್ಲಿ ಬಲವಾದ ಆರಂಭ ಅತ್ಯಗತ್ಯ, ಗುಜರಾತ್​ ಟೈಟಾನ್ಸ್​​ ತಂಡವು ಉತ್ತಮವಾದ ಆರಂಭವನ್ನು ಪಡೆದುಕೊಂಡು ಆ ವೇಗವನ್ನು ಉಳಿಸಿಕೊಂಡು ಗೆಲುವಿನ ದಡ ಸೇರಿದರು ಎಂದು ಹೇಳಿದರು.

ಗಿಲ್​ ಆಟವನ್ನು ಪ್ರಶಂಸಿಸಿದ ಕುಂಬ್ಳೆ ‘‘ಏಕದಿನ ಪಂದ್ಯದಲ್ಲಿ ದೊಡ್ಡ ಇನ್ನಿಂಗ್ಸ್​​ ಆಡುವುದರಲ್ಲಿ ಅವರ ಹೇಗೆ ಸುಧಾರಿಸಿದ್ದಾರೆ ಎಂಬುದರ ಕುರಿತು ನಾವು ಪಂದ್ಯ ಶುರುವಾಗುವ ಮುನ್ನ ಮಾತನಾಡಿದ್ದೇವೆ. ಭಾರತ ಕ್ರಿಕೆಟ್​ ತಂಡಕ್ಕೆ ಉತ್ತಮ ಸಂಕೇತವಾಗಿದೆ. ಶುಭಮನ್​ ಗಿಲ್​ ಒಬ್ಬ ಅದ್ಭುತ ಆಟಗಾರ ಎಂದು ನನಗೆ ಖಾತ್ರಿಯಿದೆ. ಆದರೆ, ಪಂದ್ಯದ ಕೊನೆಯಲ್ಲಿ ಗಿಲ್​ ಔಟ್​ ಆದ ರೀತಿ ನನಗೆ ಇಷ್ಟವಾಗಲಿಲ್ಲ ಎಂದು ಭಾರತದ ಮಾಜಿ ಲೆಗ್​ ಸ್ಪಿನ್ನರ್​ ಅನಿಲ್​ ಕುಂಬ್ಳೆ ಹೇಳಿದರು.

ಇದನ್ನೂ ಓದಿ: ನಾಳೆಯಿಂದ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿ ; ಕ್ರಿಕೆಟ್ ಅಭಿಮಾನಿಗಳಿಗೆ ಹೀಗಿರಲಿದೆ ವಾಹನ ಪಾರ್ಕಿಂಗ್ ವ್ಯವಸ್ಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.