ETV Bharat / sports

T20 World Cup: ಐರ್ಲೆಂಡ್​ ವಿರುದ್ಧ157 ರನ್​ಗಳ  ಸ್ಪರ್ಧಾತ್ಮಕ ಸ್ಕೋರ್​ ಮಾಡಿದ ಇಂಗ್ಲೆಂಡ್

author img

By

Published : Oct 26, 2022, 10:22 AM IST

Updated : Oct 26, 2022, 12:52 PM IST

Etv Bharat
ಇಂಗ್ಲೆಂಡ್​ ಟಾಸ್​ ಗೆದ್ದು ಕ್ಷೇತ್ರರಕ್ಷಣೆಗೆ ಮುಂದಾಗಿದೆ

ಇಂಗ್ಲೆಂಡ್​ ತನ್ನ ಮೊದಲ ಪಂದ್ಯದ ಗೆಲುವಿನ ತಂಡದೊಂದಿಗೆ ಮುಂದುವರೆದಿದೆ, ಐರ್ಲೆಂಡ್ ಒಂದು ಬದಲಾವಣೆ ಮಾಡಿದ್ದು ಸಿಮಿ ಸಿಂಗ್ ಬದಲಿಗೆ ಫಿಯಾನ್ ಹ್ಯಾಂಡ್ ಅವರನ್ನು ಆಡಿಸುತ್ತಿದೆ.

ಮೆಲ್ಬೋರ್ನ್(ಆಸ್ಟ್ರೇಲಿಯಾ): ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಐರ್ಲೆಂಡ್ ಇಂಗ್ಲೆಂಡ್​ ಗೆ158 ರನ್​ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿದೆ. ಮಾರ್ಕ್ ವುಡ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ದಾಳಿಗೆ ನಲುಗಿದ ಐರ್ಲೆಂಡ್ ನಾಯಕ ಆಂಡ್ರ್ಯೂ ಬಾಲ್ಬಿರ್ನಿ ಅವರ ಅರ್ಧ ಶತಕದ ನೆರವಿನಿಂದ ತನ್ನೆಲ್ಲಾ ವಿಕೆಟ್​ ಕಳೆದು ಕೊಂಡು 157ರನ್​ ಗಳಿಸಿದೆ.

ಮಳೆಯ ಅಡ್ಡಿಯಿಂದ ಟಾಸ್​ ಆದ ನಂತರ ಕೊಂಚ ತಡವಾಗಿಯೆ ಪಂದ್ಯ ಆರಂಭವಾಯಿತು. 1.3 ಓವರ್​ಗೆ 11 ರನ್​ ಆಗಿದ್ದಾಗ ಮತ್ತೆ ಮಳೆ ಬಂದು 10 ನಿಮಿಷಗಳ ಕಾಲ ಪಂದ್ಯ ನಿಲ್ಲಿಸಲಾಗಿತ್ತು. ಅತೀ ಹೆಚ್ಚು ಬೌಂಡರಿಗಳಿಸಿ ದಾಖಲೆ ಬರೆದಿದ್ದ ಪಾಲ್ ಸ್ಟಿರ್ಲಿಂಗ್(14) ಬೇಗ ವಿಕೆಟ್​ ಒಪ್ಪಿಸಿದರು. ನಂತರ ನಾಯಕ ಆಂಡ್ರ್ಯೂ ಬಾಲ್ಬಿರ್ನಿ(62) ಜೊತೆ ಲೋರ್ಕನ್ ಟಕರ್(34) ಐವತ್ತು ರನ್​ನ ಜೊತೆಯಾಟ ನೀಡಿದರು.

ಕರ್ಟಿಸ್ ಕ್ಯಾಂಫರ್(17 ಮತ್ತು ಗರೆಥ್ ಡೆಲಾನಿ(12) ಕೊಂಚ ಹೊತ್ತು ಆಡಿದ್ದು ಬಿಟ್ಟರೆ ಬಾಕಿ ಎಲ್ಲರೂ ಒಂದಂಕಿ ಗಳಿಸಲು ಪರದಾಡಿದರು. ಇಂಗ್ಲೆಂಡ್​ ಪರ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಮಾರ್ಕ್ ವುಡ್ ತಲಾ ಮೂರು ವಿಕೆಟ್​ ಪಡೆದರೆ, ಸ್ಯಾಮ್ ಕರ್ರಾನ್ ಎರಡು ವಿಕೆಟ್​ ಉರುಳಿಸಿದರು.

ತಂಡಗಳು: ಐರ್ಲೆಂಡ್: ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಲೋರ್ಕನ್ ಟಕರ್ (ವಿಕೆಟ್​ ಕೀಪರ್​), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಫಿಯಾನ್ ಹ್ಯಾಂಡ್, ಬ್ಯಾರಿ ಮೆಕಾರ್ಥಿ ಮತ್ತು ಜೋಶುವಾ ಲಿಟಲ್.

ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ/ವಿಕೆಟ್​ ಕೀಪರ್​), ಅಲೆಕ್ಸ್ ಹೇಲ್ಸ್, ಡೇವಿಡ್ ಮಲನ್, ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್ ಮತ್ತು ಮಾರ್ಕ್ ವುಡ್.

ಇದನ್ನೂ ಓದಿ ; ಟಿ20 ವಿಶ್ವಕಪ್​ : ಮುಂದಿನ ಪಂದ್ಯದಲ್ಲಿ ಭಾರತದ ಪ್ರಮುಖ ಆಲ್​ರೌಂಡರ್​ ಆಡುವುದು ಅನುಮಾನ

Last Updated :Oct 26, 2022, 12:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.