ETV Bharat / sports

ಇಂಗ್ಲೆಂಡ್​ ವೇಗಿ ಸ್ಟುವರ್ಟ್​ ಬ್ರಾಡ್​ಗೆ ಐಸಿಸಿ ದಂಡ

author img

By

Published : Aug 11, 2020, 7:36 PM IST

​ ಸ್ಟುವರ್ಟ್​ ಬ್ರಾಡ್​
​ ಸ್ಟುವರ್ಟ್​ ಬ್ರಾಡ್​

ಬ್ರಾಡ್​ ಜನವರಿ 27 ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ನಾಲ್ಕನೇ ಟೆಸ್ಟ್​ನಲ್ಲಿ ಹಾಗೂ ಆಗಸ್ಟ್​ 19, 2018ರಲ್ಲಿ ಭಾರತದ ವಿರುದ್ಧ ತಮ್ಮ ಅನುಚಿತ ವರ್ತನೆಗಾಗಿ ಒಂದೊಂದು ಡಿಮೆರಿಟ್​ ಅಂಕ ಪಡೆದುಕೊಂಡಿದ್ದಾರೆ.

ಲಂಡನ್: ಇಂಗ್ಲೆಂಡ್​ ವೇಗದ ಬೌಲರ್​ ಸ್ಟುವರ್ಟ್​ ಬ್ರಾಡ್​ ಪಾಕಿಸ್ತಾನದ ವಿರುದ್ದದ ಮೊದಲ ಟೆಸ್ಟ್​ ವೇಳೆ ಮೈದಾನದಲ್ಲಿ ಅನುಚಿತ ವರ್ತನೆ ತೋರಿ ಐಸಿಸಿ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಪಂದ್ಯದ ಸಂಭಾವನೆಯ ಶೇ15 ರಷ್ಟು ಮೊತ್ತವನ್ನು ದಂಡವಾಗಿ ತೆತ್ತಿದ್ದಾರೆ.

ಶನಿವಾರ ಅಂತ್ಯಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ರಾಡ್​ ಐಸಿಸಿ ನಿಯಮಾವಳಿಯ ಅರ್ಟಿಕಲ್​ 2.5 ಬ್ರೇಕ್​ ಮಾಡಿದ್ದಾರೆ. ಪಂದ್ಯದ ವೇಳೆ ಅಸಂಬದ್ಧ ಪದ ಬಳಕೆ, ಸನ್ನೆ ಅಥವಾ ಮೈದಾನದಲ್ಲಿ ಎದುರಾಳಿಯ ವಿಕೆಟ್​ ಪಡೆದಾಗ ಹದ್ದು ಮೀರಿ ವರ್ತಿಸಿದರೆ ಐಸಿಸಿ ನಿಯಮ ಉಲ್ಲಂಘನೆಯಾಗುತ್ತದೆ. ಬ್ರಾಡ್​, ಯಾಸಿರ್​ ಶಾ ವಿಕೆಟ್​ ಪಡೆದ ಸಂದರ್ಭದಲ್ಲಿ ಕೆಟ್ಟ ಪದ ಬಳಸಿದ್ದಕ್ಕೆ ದಂಡ ವಿಧಿಸಲಾಗಿದೆ.

ದಂಡದ ಜೊತೆಗೆ, ಬ್ರಾಡ್‌ನ ಶಿಸ್ತಿನ ದಾಖಲಾತಿಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಲಾಗಿದೆ. ಇದು 24 ತಿಂಗಳ ಅವಧಿಯಲ್ಲಿ ಅವರ ಮೂರನೆಯ ನಿಯಮ ಉಲ್ಲಂಘನೆಯಾಗಿದೆ.

ಬ್ರಾಡ್​ ಜನವರಿ 27 ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ನಾಲ್ಕನೇ ಟೆಸ್ಟ್​ನಲ್ಲಿ ಹಾಗೂ ಆಗಸ್ಟ್​ 19, 2018ರಲ್ಲಿ ಭಾರತದ ವಿರುದ್ಧ ತಮ್ಮ ಅನುಚಿತ ವರ್ತನೆಗಾಗಿ ಒಂದೊಂದು ಡಿಮೆರಿಟ್​ ಅಂಕ ಪಡೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.