ETV Bharat / sports

ಐಸಿಸಿ ಟಿ20 ರ‍್ಯಾಂಕಿಂಗ್: 2ನೇ ಸ್ಥಾನ ಉಳಿಸಿಕೊಂಡ ಕನ್ನಡಿಗ ರಾಹುಲ್, 6ಕ್ಕೇರಿದ ಕೊಹ್ಲಿ

author img

By

Published : Mar 3, 2021, 5:51 PM IST

ಐಸಿಸಿ ಟಿ20 ರ‍್ಯಾಂಕಿಂಗ್
ಐಸಿಸಿ ಟಿ20 ರ‍್ಯಾಂಕಿಂಗ್

816 ಅಂಕಗಳನ್ನು ಹೊಂದಿರುವ ಕೆಎಲ್​ ರಾಹುಲ್ 915 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಡೇವಿಡ್ ಮಲನ್​ ನಂತರದ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಬಾಬರ್​ ಅಜಮ್ (801) ಒಂದು ಸ್ಥಾನ ಮೇಲೇರಿ 3ಕ್ಕೇರಿದ್ದರೆ, ಆಸ್ಟ್ರೇಲಿಯಾದ ನಾಯಕ ಫಿಂಚ್​ (788) ಒಂದು 3 ರಿಂದ 4ಕ್ಕೆ ಕುಸಿದಿದ್ದಾರೆ. ದಕ್ಷಿಣ ಆಫ್ರಿಕಾದ ವಾನ್ ಡರ್​ ಡಾಸೆನ್ (700) 5ರಲ್ಲಿದ್ದರೆ ಕೊಹ್ಲಿ (697) 6ನೇ ಶ್ರೇಯಾಂಕ ಪಡೆದಿದ್ದಾರೆ.

ದುಬೈ: ಭಾರತ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಹಾಗೂ ಕನ್ನಡಿಗ ಕೆಎಲ್​ ರಾಹುಲ್ ಐಸಿಸಿಯ ಬುಧವಾರ ಬಿಡುಗಡೆ ಮಾಡಿರುವ ನೂತನ ಶ್ರೇಯಾಂಕ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಉಳಿಸಿಕೊಂಡಿದ್ದರೆ, ನಾಯಕ ಕೊಹ್ಲಿ ಒಂದು ಸ್ಥಾನ ಬಡ್ತಿ ಪಡೆದು 6ನೇ ಸ್ಥಾನಕ್ಕೇರಿದ್ದಾರೆ.

816 ಅಂಕಗಳನ್ನು ಹೊಂದಿರುವ ಕೆಎಲ್​ ರಾಹುಲ್ 915 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಡೇವಿಡ್ ಮಲನ್​ ನಂತರದ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಬಾಬರ್​ ಅಜಮ್ (801) ಒಂದು ಸ್ಥಾನ ಮೇಲೇರಿ 3ಕ್ಕೇರಿದ್ದರೆ, ಆಸ್ಟ್ರೇಲಿಯಾದ ನಾಯಕ ಫಿಂಚ್​(788) 3 ರಿಂದ 4ಕ್ಕೆ ಕುಸಿದಿದ್ದಾರೆ. ದಕ್ಷಿಣ ಆಫ್ರಿಕಾದ ವಾನ್ ಡರ್​ ಡಾಸೆನ್ (700) 5 ರಲ್ಲಿದ್ದರೆ ಕೊಹ್ಲಿ (697) 6ನೇ ಶ್ರೇಯಾಂಕ ಪಡೆದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 99 ರನ್​ಗಳಿಸಿದ ಡೆವೋನ್ ಕಾನ್ವೆ 46 ಸ್ಥಾನಕ್ಕೆ ಜಿಗಿದು 17ಕ್ಕೆ ಹಾಗೂ 2ನೇ ಪಂದ್ಯದಲ್ಲಿ 97 ರನ್​ಗಳಿಸಿದ ಮಾರ್ಟಿನ್ ಗಪ್ಟಿಲ್​ 3 ಸ್ಥಾನ ಬಡ್ತಿ ಪಡೆದು 11ನೇ ಶ್ರೇಯಾಂಕ ಪಡೆದಿದ್ದಾರೆ.

ಬೌಲರ್​ಗಳ ರ್ಯಾಂಕಿಂಗ್​ನಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್​ (736) ಅಗ್ರಸ್ಥಾನದಲ್ಲಿದ್ದಾರೆ, ನಂತರ ದಕ್ಷಿಣ ಆಫ್ರಿಕಾದ ತಬ್ರೈಜ್ ಶಂಸಿ (733), ಅಫ್ಘನ್​ನ ಮುಜೀಬ್​ (730), ಇಂಗ್ಲೆಂಡ್​ನ ಆದಿಲ್​ ರಶೀದ್​ (700) ಆಸ್ಟ್ರೇಲಿಯಾದ ಆ್ಯಡಂ ಜಂಪಾ (676) ಮೊದಲ 5 ಸ್ಥಾನದಲ್ಲಿದ್ದಾರೆ. ಟಾಪ್​ 10ರಲ್ಲಿ ಯಾವುದೇ ಭಾರತೀಯ ಬೌಲರ್​ ಕಾಣಿಸಿಕೊಂಡಿಲ್ಲ.

ಇದನ್ನು ಓದಿ:'ನ್ಯೂಜಿಲ್ಯಾಂಡ್​ನಲ್ಲಿ 3ನೇ ದಿನ 36 ಓವರ್​ಗಳಲ್ಲಿ ಸೋತಿದ್ದೆವು, ಅಂದು ಯಾರೂ ಪಿಚ್​ ಬಗ್ಗೆ ಟೀಕಿಸಲಿಲ್ಲ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.