ETV Bharat / sports

ರಿಜ್ವಾನ್​ 89 ರನ್​: ನ್ಯೂಜಿಲ್ಯಾಂಡ್ ವಿರುದ್ಧ ಕೊನೆ ಪಂದ್ಯ ಗೆದ್ದು ವೈಟ್​ವಾಷ್​​ ತಪ್ಪಿಸಿಕೊಂಡ ಪಾಕ್​​

author img

By

Published : Dec 22, 2020, 6:09 PM IST

ಪಾಕಿಸ್ತಾನ - ನ್ಯೂಜಿಲ್ಯಾಂಡ್​ ಟಿ20 ಸರಣಿ
ಪಾಕಿಸ್ತಾನ - ನ್ಯೂಜಿಲ್ಯಾಂಡ್​ ಟಿ20 ಸರಣಿ

174 ರನ್​ಗಳ ಗುರಿ ಪಡೆದ ಪಾಕಿಸ್ತಾನ ತಂಡ ರಿಜ್ವಾನ್ ಅವರ ಅರ್ಧಶತಕ ಹಾಗೂ ಹಫೀಜ್​ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 19.4 ಓವರ್​ಗಳಲ್ಲಿ ಗೆಲುವಿನ ನಗೆ ಬೀರಿತು.

ನೇಪಿಯರ್: ವಿಕೆಟ್ ಕೀಪರ್​ ಮೊಹಮ್ಮದ್​ ರಿಜ್ವಾನ್​ ಅವರ ಸ್ಫೋಟಕ ಅರ್ಧಶತದ ನೆರವಿನಿಂದ ಪಾಕಿಸ್ತಾನ ತಂಡ ಕೊನೆಯ ಟಿ-20 ಪಂದ್ಯದಲ್ಲಿ 4 ವಿಕೆಟ್​ಗಳ ಜಯ ಸಾಧಿಸಿದೆ. ಕಿವೀಸ್​ ತಂಡ ಕೊನೆಯ ಪಂದ್ಯ ಸೋತರೂ 2-1ರಲ್ಲಿ ಟಿ-20 ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

​ಟಾಸ್​ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡು ನ್ಯೂಜಿಲ್ಯಾಂಡ್ ತಂಡವನ್ನು 173/7 ರನ್​ಗಳಿಗೆ ನಿಯಂತ್ರಿಸಿತ್ತು. ಡಿವೋನ್ ಕಾನ್ವೆ 63 ರನ್ ​ಗಳಿಸಿದರೆ, ಫಿಲಿಫ್ಸ್​ 31, ಸೀಫರ್ಟ್​ 31 ರನ್​ ಗಳಿಸಿದರು. ಶಾಹೀನ್ ಅಫ್ರಿದಿ 43ಕ್ಕೆ 2, ಹ್ಯಾರೀಸ್ ರವೂಫ್​ 44ಕ್ಕೆ 2 ಹಾಗೂ ಫಹೀಮ್​ ಅಶ್ರಫ್​ 20ಕ್ಕೆ 3 ವಿಕೆಟ್​ ಪಡೆದು ಮಿಂಚಿದರು.

174 ರನ್​ಗಳ ಗುರಿ ಪಡೆದ ಪಾಕಿಸ್ತಾನ ತಂಡ ರಿಜ್ವಾನ್ ಅವರ ಅರ್ಧಶತಕ ಹಾಗೂ ಹಫೀಜ್​ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 19.4 ಓವರ್​ಗಳಲ್ಲಿ ಗೆಲುವಿನ ನಗೆ ಬೀರಿತು. ರಿಜ್ವಾನ್​ 59 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸೇರಿದಂತೆ 89​ ರನ್ ಸಿಡಿಸಿದರೆ, ಹಫೀಜ್​ 29 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್​ ಸಹಿತ 41 ರನ್ ​ಗಳಿಸಿ ಗೆಲುವಿನ ರೂವಾರಿಯಾದರು.

ಕಿವೀಸ್ ಪರ ಕುಗ್ಗಲೀನ್ಜ್​ 40ಕ್ಕೆ 2, ಟಿಮ್ ಸೌಥಿ 25ಕ್ಕೆ 2, ಜೇಮ್ಸ್ ನಿಶಾಮ್​ 37ಕ್ಕೆ 2 ವಿಕೆಟ್​ ಪಡೆದರೂ ಸೋಲನ್ನು ತಪ್ಪಿಸಿಕೊಳ್ಳಲಾಗಲಿಲ್ಲ. ನ್ಯೂಜಿಲ್ಯಾಂಡ್​ ತಂಡ ಮೊದಲ ಪಂದ್ಯವನ್ನು 5 ಹಾಗೂ 2ನೇ ಪಂದ್ಯವನ್ನು 9 ವಿಕೆಟ್​ಗಳಿಂದ ಗೆದ್ದು ಸರಣಿ ಜಯಿಸಿತು.

ಇದನ್ನು ಓದಿ:ಟೆಸ್ಟ್‌ ಮ್ಯಾಚ್‌ನಲ್ಲಿ ಪಿಂಕ್​​ ಬಾಲ್ ಬಳಕೆ ಬಗ್ಗೆ ಸ್ಟೀವ್​ ಸ್ಮಿತ್ ಹೇಳುವುದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.