ETV Bharat / sports

ಏಷ್ಯಾಕಪ್​ಗಾಗಿ ಪಾಕಿಸ್ತಾನಕ್ಕೆ ಬರ್ತೀರಾ, ಇಲ್ವಾ? ಭಾರತದ ನಿರ್ಧಾರಕ್ಕೆ ಗಡುವು ನೀಡಿದ ಪಿಸಿಬಿ

author img

By

Published : Sep 30, 2019, 5:54 PM IST

Updated : Sep 30, 2019, 7:24 PM IST

Asia Cup

ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುವ ಜವಾಬ್ದಾರಿ ಪಾಕಿಸ್ತಾನ ವಹಿಸಿಕೊಂಡಿದೆ. ಮುಂದಿನ ವರ್ಷ ಸೆಪ್ಟೆಂಬರ್​ನಲ್ಲಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ನಡೆಯಲಿದ್ದು, ಈ ಟೂರ್ನಿಗೆ ಭಾರತ ತಂಡ ಪಾಲ್ಗೊಳ್ಳುವುದರ ಬಗ್ಗೆ ಜೂನ್​ 2012ರೊಳಗೆ ನಿರ್ಧಾರ ತಿಳಿಸಲು ಪಿಸಿಬಿ ಬಿಸಿಸಿಐಗೆ ಗಡುವು ನೀಡಿದೆ.

ಇಸ್ಲಾಮಾಬಾದ್ : ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ರಾಜಕೀಯ ವಿಚಾರವಾಗಿ ಕಲಹಗಳು ಇರುವುದರಿಂದ ಅಲ್ಲಿಗೆ ಭಾರತೀಯ ಕ್ರೀಡಾಪಟುಗಳು ಹೋಗಲು ಹಿಂದೇಟು ಹಾಕುತ್ತಿದೆ. ಇದೀಗ ಅದು ಕ್ರಿಕೆಟ್​ನಲ್ಲೂ ಮುಂದುವರಿದಿದ್ದು ಈ ಬಾರಿ ಏಷ್ಯಾಕಪ್​ನಲ್ಲೂ ಪಾಕ್​ ಪ್ರವಾಸ ಕುರಿತು ಗೊಂದಲ ಮೂಡಿದೆ.

ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುವ ಜವಾಬ್ದಾರಿ ಪಾಕಿಸ್ತಾನ ವಹಿಸಿಕೊಂಡಿದೆ. ಮುಂದಿನ ವರ್ಷ ಸೆಪ್ಟೆಂಬರ್​ನಲ್ಲಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ನಡೆಯಲಿದ್ದು, ಈ ಟೂರ್ನಿಗೆ ಭಾರತ ತಂಡ ಪಾಲ್ಗೊಳ್ಳುವುದರ ಬಗ್ಗೆ ಜೂನ್​ 2012ರೊಳಗೆ ನಿರ್ಧಾರ ತಿಳಿಸಲು ಪಿಸಿಬಿ ಬಿಸಿಸಿಐಗೆ ಗಡುವು ನೀಡಿದೆ.

2020 ಸೆಪ್ಟೆಂಬರ್ ತಿಂಗಳಲ್ಲಿ ಏಷ್ಯಾಕಪ್ ಟೂರ್ನಿ ನಡೆಯಲಿದೆಯಾದರೂ ಬಿಸಿಸಿಐ ಜೂನ್​ ತಿಂಗಳೊಳಗೆ ತಮ್ಮ ನಿರ್ಧಾರವನ್ನ ತಿಳಿಸಬೇಕು. ಒಂದು ವೇಳೆ ಭಾರತ ಭಾಗವಹಿಸುವುದಿಲ್ಲವಾದರೆ ಟೂರ್ನಿಯನ್ನು ಸ್ಥಳಾಂತರ ಮಾಡಬೇಕಾಗುತ್ತದೆ. ಆದರೆ, ಆ ನಿರ್ಧಾರ ಏಷ್ಯಾ ಕ್ರಿಕೆಟ್​ ಸಮಿತಿ ಹಾಗೂ ಐಸಿಸಿ ನೋಡಿಕೊಳ್ಳಲಿದೆ. ಒಂದು ವೇಳೆ ಭಾರತ ಪಾಕಿಸ್ತಾನಕ್ಕೆ ಬರಲು ಒಪ್ಪುವುದಾದರೆ ನಾವು ರಕ್ಷಣೆ ನೀಡುತ್ತೇವೆ ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಸೀಂ ಖಾನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಖಾನ್​ ಭಾರತದೊಂದಿಗೆ ದ್ವಿಪಕ್ಷೀಯ ಸರಣಿ ಆಯೋಜನೆಯ ಬಗ್ಗೆ ಮಾತನಾಡಿ, ಕ್ರಿಕೆಟ್​ ಮಂಡಳಿಗಳ ನಡುವೆ ಉತ್ತಮ ಸಂಬಂಧವಿದೆ. ಆದರೆ, ಸರ್ಕಾರಗಳು ಮಧ್ಯ ಪ್ರವೇಶಿಸುವಿಕೆಯಿಂದ ದ್ವಿಪಕ್ಷೀಯ ಸರಣಿ ನಡೆಯಲು ಸಾಧ್ಯವಾಗುತ್ತಿಲ್ಲ. ಆದರೆ, ಬಿಸಿಸಿಐ ಬಯಸಿದರೆ ತಟಸ್ಥ ಸ್ಥಳದಲ್ಲಿ ಕ್ರಿಕೆಟ್​ ಆಡಲು ನಾವು ಸಿದ್ದರಿದ್ದೇವೆ ಎಂದು ತಿಳಿಸಿದ್ದಾರೆ.

Intro:Body:Conclusion:
Last Updated :Sep 30, 2019, 7:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.