ETV Bharat / sports

ಕಿವೀಸ್​ ದಿಗ್ಗಜನಿಗೆ ಮಣೆ: ಇಂಗ್ಲೆಂಡ್ ತಂಡದ ಮುಖ್ಯ ಕೋಚ್​​ ಆಗಿ ಬ್ರೆಂಡನ್​ ಮೆಕಲಮ್​ ಆಯ್ಕೆ

author img

By

Published : May 12, 2022, 7:59 PM IST

Brendon McCullum as the head coach
Brendon McCullum as the head coach

ನ್ಯೂಜಿಲ್ಯಾಂಡ್​ ತಂಡದ ಮಾಜಿ ನಾಯಕ ಹಾಗೂ ಇಂಗ್ಲೆಂಡ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಮುಖ್ಯ ಕೋಚ್‌ ಆಗಿ ಕೆಲಸ ಮಾಡುತ್ತಿರುವ ಬ್ರೆಂಡನ್‌ ಮೆಕಲಮ್ ಇದೀಗ ಇಂಗ್ಲೆಂಡ್​ ಟೆಸ್ಟ್​ ತಂಡದ ಮುಖ್ಯ ಕೋಚ್​ ಆಗಿ ನೇಮಕಗೊಂಡಿದ್ದಾರೆ.

ವೇಲ್ಸ್​​(ಇಂಗ್ಲೆಂಡ್​): ನ್ಯೂಜಿಲ್ಯಾಂಡ್​ ತಂಡದ ಮಾಜಿ ನಾಯಕನಿಗೆ ಮಣೆ ಹಾಕಿರುವ ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​​​ ಬ್ರೆಂಡನ್​ ಮೆಕಲಮ್​ ಅವರನ್ನ ಟೆಸ್ಟ್​ ತಂಡದ ಮುಖ್ಯ ಕೋಚ್​ ಆಗಿ ನೇಮಕ ಮಾಡಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಇಸಿಬಿ ಖುದ್ದಾಗಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ.

ಆಸ್ಟ್ರೇಲಿಯಾ ವಿರುದ್ಧ ನಡೆದ ಆಸಿಸ್​ ಸರಣಿಯಲ್ಲಿ ಇಂಗ್ಲೆಂಡ್ ತಂಡ 4-0 ಅಂತರದಿಂದ ಟೆಸ್ಟ್​ ಸರಣಿ ಸೋತ ಬೆನ್ನಲ್ಲೇ ಕೋಚ್​ ಸ್ಥಾನದಿಂದ ಕ್ರಿಸ್​​​ ಸಿಲ್ವರ್​ವುಡ್​​ ಕೆಳಕ್ಕಿಳಿದಿದ್ದರು. ಇದರ ಬೆನ್ನಲ್ಲೇ ಮಧ್ಯಂತರ ಕೋಚ್​ ಆಗಿ ಮಾಜಿ ಆಲ್​​ರೌಂಡರ್ ಪಾಲ್ ಕಾಲಿಂಗ್​ವುಡ್​ ಆಯ್ಕೆಯಾಗಿದ್ದರು. ಆದರೆ, ಇದೀಗ ಆ ಜಾಗಕ್ಕೆ ಮೆಕಲಮ್​​ ಆಯ್ಕೆಯಾಗಿದ್ದಾರೆ.

ಟೆಸ್ಟ್​ ಸರಣಿಯಲ್ಲಿ ಹೀನಾಯ ಪ್ರದರ್ಶನದ ಬಳಿಕ ಇಂಗ್ಲೆಂಡ್ ತಂಡದ ಟೆಸ್ಟ್​​ ನಾಯಕತ್ವಕ್ಕೂ ಜೋ ರೂಟ್​​ ವಿದಾಯ ಹೇಳಿದ್ದಾರೆ. ಆ ಸ್ಥಾನಕ್ಕೆ ಈಗಾಗಲೇ ಆಲ್​​ರೌಂಡರ್ ಬೆನ್​​ ಸ್ಟೋಕ್ಸ್​​ ಆಯ್ಕೆಯಾಗಿದ್ದಾರೆ. ಮುಖ್ಯ ಕೋಚ್​​​​​​ ಸ್ಥಾನಕ್ಕೆ ಕಿವೀಸ್​ ದಿಗ್ಗಜ ಬ್ರೆಂಡನ್​ ಮೆಕಲಮ್​​ಗೆ ಕರೆತರಲಾಗಿದೆ.

ಇದನ್ನೂ ಓದಿ: CSK vs MI ಕಾದಾಟ: ಟಾಸ್​​ ಗೆದ್ದು ಬೌಲಿಂಗ್​ ಆಯ್ದುಕೊಂಡ ಮುಂಬೈ ಇಂಡಿಯನ್ಸ್​​

ಐಪಿಎಲ್​ 2022ರಲ್ಲಿ ಬ್ರೆಂಡನ್ ಮೆಕಲಮ್​​ ಎರಡು ಬಾರಿಯ ಚಾಂಪಿಯನ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡದ ಮುಖ್ಯ ಕೋಚ್​ ಆಗಿ ಕೆಲಸ ಮಾಡುತ್ತಿದ್ದಾರೆ. ನ್ಯೂಜಿಲ್ಯಾಂಡ್​ ತಂಡದ ಪರ 101 ಟೆಸ್ಟ್​ ಪಂದ್ಯಗಳನ್ನಾಡಿರುವ ಬ್ರೆಂಡನ್ ಮೆಕಲಮ್​ ಇದೀಗ ಮತ್ತೊಂದು ಹೊಸ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಜೂನ್​ 2ರಿಂದ ಇಂಗ್ಲೆಂಡ್ ತಂಡ ನ್ಯೂಜಿಲ್ಯಾಂಡ್​ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಭಾಗಿಯಾಗಲಿದ್ದು, ಈ ವೇಳೆಗೆ ಅವರು ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.