ETV Bharat / sports

'ಲೈಂಗಿಕ ಕಿರುಕುಳ ತಡೆ ನೀತಿ' ಅನುಮೋದಿಸಲಿರುವ ಬಿಸಿಸಿಐ: ರಣಜಿ ಕ್ರಿಕೆಟಿಗರಿಗೆ ಆರ್ಥಿಕ ನೆರವು ಸಿಗತ್ತಾ?

author img

By

Published : Sep 7, 2021, 1:58 PM IST

bcci
bcci

ಸೆಪ್ಟೆಂಬರ್ 20 ರಂದು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆ ನಡೆಸಲಿದ್ದು, ಲೈಂಗಿಕ ದೌರ್ಜನ್ಯ ತಡೆ ನೀತಿ ಅಂಗೀಕರಿಸಲಿದೆ.

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೆಪ್ಟೆಂಬರ್ 20 ರಂದು ತನ್ನ ಅಪೆಕ್ಸ್ ಕೌನ್ಸಿಲ್ ಸಭೆ ನಡೆಸಲಿದ್ದು, ಲೈಂಗಿಕ ದೌರ್ಜನ್ಯ ತಡೆ ನೀತಿ ಅಂಗೀಕರಿಸಲಿದೆ. ಜೊತೆಯಲ್ಲಿ ರಣಜಿ ಕ್ರಿಕೆಟಿಗರಿಗೆ ಆರ್ಥಿಕ ನೆರವು ನೀಡುವ ಕುರಿತು ಮತ್ತೊಮ್ಮೆ ಚರ್ಚಿಸಲಿದೆ.

ಇಲ್ಲಿಯವರೆಗೆ, ಲೈಂಗಿಕ ಕಿರುಕುಳದ ದೂರುಗಳನ್ನು ಎದುರಿಸಲು ಮಂಡಳಿಗೆ ನಿರ್ದಿಷ್ಟ ನೀತಿ ಇರಲಿಲ್ಲ. ರಾಹುಲ್ ಜೋಹ್ರಿ ಅವರು ಸಿಇಒ ಆಗಿದ್ದಾರೆ, ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳು ಕೇಳಿ ಬಂದ ನಂತರ ಬಿಸಿಸಿಐ ಸಮಿತಿಯೊಂದನ್ನು ರಚಿಸಿತ್ತು. ಅಂತಿಮವಾಗಿ ರಾಹುಲ್ ಜೋಹ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ತನ್ನ ಮುಂದಿನ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ 'ಲೈಂಗಿಕ ಕಿರುಕುಳ ತಡೆ ನೀತಿ'ಯನ್ನು ಬಿಸಿಸಿಐ ಅಂಗೀಕರಿಸಲಿದೆ.

ಇದನ್ನೂ ಓದಿ: Eng vs Ind 4th Test: ಟೀಂ ಇಂಡಿಯಾಗೆ ಅಮೋಘ ವಿಜಯ; ಸರಣಿಯಲ್ಲಿ 2-1ರ ಮುನ್ನಡೆ

ಜೂನ್ 20 ರಂದು ಕೊನೆಯದಾಗಿ ಅಪೆಕ್ಸ್ ಕೌನ್ಸಿಲ್ ಸಭೆ ನಡೆದಿತ್ತು. ಸಭೆಯಲ್ಲಿ ಕೋವಿಡ್​ನಿಂದ 2020-2021ರ ರಣಜಿ ಕ್ರಿಕೆಟ್​ ಆಯೋಜಿಸಲಾಗಿದ್ದ ಕಾರಣ ದೇಶೀಯ ಕ್ರಿಕೆಟಿಗರಿಗೆ ಆರ್ಥಿಕ ನೆರವು ನೀಡಲು ಪ್ಯಾಕೇಜ್​ ಘೋಷಿಸುವ ಬಗ್ಗೆ ಚರ್ಚಿಸಲಾಗಿತ್ತು. ಹೀಗಾಗಿ ಆರ್ಥಿಕ ಸಂಕಷ್ಟದಲ್ಲಿರುವ ರಣಜಿ ಆಟಗಾರರಿಗೆ ಪರಿಹಾರ ನೀಡುವ ಕುರಿತು ಸೆ. 20 ರಂದು ನಡೆಯುವ ಸಭೆಯಲ್ಲಿ ಬಿಸಿಸಿಐ ಚರ್ಚಿಸಿ, ತೀರ್ಮಾನಕ್ಕೆ ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.