ETV Bharat / sports

India vs South Africa: ಬಲಿಷ್ಠ ಟೀಂ ಇಂಡಿಯಾಗೆ ಕಾಡುತ್ತಿದೆ ರಾಹುಲ್​ ಪ್ರದರ್ಶನದ ಚಿಂತೆ

author img

By

Published : Oct 29, 2022, 9:36 PM IST

ANALYSIS: All bright and sunny for Team India, but KL conundrum remains
ANALYSIS: ಬಲಿಷ್ಠ ಟೀಂ ಇಂಡಿಯಾ.. ಕಾಡುತ್ತಿದೆ ರಾಹುಲ್​ ಪ್ರದರ್ಶನದ ಚಿಂತೆ

ಟಿ20 ವಿಶ್ವಕಪ್​ ಪಂದ್ಯದಲ್ಲಿ ಭಾರತವು ಪಾಕಿಸ್ತಾನ ಮತ್ತು ನೆದರ್​ಲ್ಯಾಂಡ್​​​ ತಂಡವನ್ನು ಸೋಲಿಸಿ ಶುಭಾರಂಭ ಪಡೆದುಕೊಂಡಿದೆ. ಆದರೆ ರಾಹುಲ್​ ಬ್ಯಾಟಿಂಗ್​ ವೈಫಲ್ಯ ಬಲಿಷ್ಠ ಭಾರತ ತಂಡಕ್ಕೆ ಕಾಡುತ್ತಿದೆ.

ಹೈದರಾಬಾದ್: ಟಿ 20 ವಿಶ್ವಕಪ್​ ಪಂದ್ಯಾಟದಲ್ಲಿ ಭಾರತವು ಪಾಕಿಸ್ತಾನ ಮತ್ತು ನೆದರ್​ಲ್ಯಾಂಡ್​​​ ತಂಡವನ್ನು ಸೋಲಿಸಿ ಶುಭಾರಂಭ ಪಡೆದುಕೊಂಡಿದೆ. ಆದರೂ ಭಾರತ ತಂಡದ ಬ್ಯಾಟಿಂಗ್​, ಬೌಲಿಂಗ್​ ಮತ್ತು ಕ್ಷೇತ್ರರಕ್ಷಣೆ ಮಾತ್ರವಲ್ಲದೆ ವಿವಿಧ ಆಯಾಮಗಳಲ್ಲಿ ಚಿಂತಿಸುವಾಗ ಭಾರತ ತಂಡವು ಮುಂದಿನ ಪ್ರದರ್ಶನದ ಬಗ್ಗೆ ಚರ್ಚಿಸಬೇಕಾಗುತ್ತದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ: ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ಅದ್ಭುತ ಗೆಲುವನ್ನು ಸಾಧಿಸಿತ್ತು. ಕೊನೆಯ ಮೂರು ಓವರ್​ಗಳಲ್ಲಿ ಅಸಾಧ್ಯವಾದ 48 ರನ್ ಗಳಿಸಿ ಭಾರತ ವಿಜಯದ ಪತಾಕೆ ಹಾರಿಸಿತು. ಕೊಹ್ಲಿಯ ಅದ್ಭುತ ಬ್ಯಾಟಿಂಗ್​ ಪ್ರದರ್ಶನವು ಪಂದ್ಯದ ಗತಿಯನ್ನು ಬದಲಿಸಿತು.

ಕೊಹ್ಲಿ, ಪಾಂಡ್ಯ ಹೊರತಾಗಿ ಭಾರತದ ಓಪನಿಂಗ್ ಬ್ಯಾಟ್ಸ್​ಮನ್​ ಕೆ ಎಲ್​ ರಾಹುಲ್​ ಬ್ಯಾಟಿಂಗ್​ ವೈಫಲ್ಯವನ್ನು ಅನುಭವಿಸುತ್ತಿದ್ದು, ರಾಹುಲ್​ ಸ್ಥಾನದಲ್ಲಿ ರಿಷಭ್​ ಪಂತ್​ ಗೆ ಅವಕಾಶ ನೀಡಬಹುದು. ಏಕೆಂದರೆ ಎಡಗೈ ಬ್ಯಾಟ್ಸ್​ಮನ್​ ಆಗಿರುವ ಪಂತ್ ಎದುರಾಳಿ ದಾಳಿಗೆ ಹೆಚ್ಚು ಪರಿಣಾಮಕಾರಿಯಾಗಬಹುದು.

ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯಕ್ಕೂ ಮುನ್ನ ಶನಿವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಭಾನುವಾರ ಪರ್ತ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೆ ಎಲ್ ರಾಹುಲ್ ಆರಂಭಿಕ ಆಟಗಾರರಾಗಿ ಬರಲಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

'ರಾಹುಲ್ ಅವರು ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ. ಅದಾಗ್ಯೂ, ರಾಹುಲ್ ಪಾಕಿಸ್ತಾನದ ವಿರುದ್ಧ ಸ್ಟ್ರೈಕ್ ರೇಟ್ 50 ರಲ್ಲಿ 8 ಎಸೆತಗಳಲ್ಲಿ 4 ರನ್ ಮತ್ತು ನೆದರ್ಲ್ಯಾಂಡ್​ ವಿರುದ್ಧ 12 ಎಸೆತಗಳಲ್ಲಿ ಅವರ 9 ರನ್ ಗಳಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಭಾರತದ ತಂಡಕ್ಕೆ ರಾಹುಲ್ ಅವರದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವರು ತಮ್ಮ ಲಯವನ್ನು ಮರಳಿ ಪಡೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೂರ್ಯಕುಮಾರ್ ಯಾದವ್ : ನೆದರ್ಲ್ಯಾಂಡ್ಸ್ ವಿರುದ್ಧ ಸೂರ್ಯಕುಮಾರ್ ಅಬ್ಬರದ ಬ್ಯಾಟಿಂಗ್​ ಎಲ್ಲರನ್ನು ಚಕಿತಗೊಳಿಸಿದೆ. ಆದರೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸ್ವಲ್ಪ ಎಡವಿದಂತೆ ಕಂಡಿದೆ. ಏಕೆಂದರೆ ವೇಗದ ಬೌಲಿಂಗ್ ದಾಳಿ ಯಾದವ್ ಬ್ಯಾಟಿಂಗ್​​ ಸಾಮರ್ಥ್ಯದ ಬಗ್ಗೆ ಅನುಮಾನಗಳನ್ನು ಮೂಡಿಸಿದೆ.

ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟರ್ ಆಗಿ ಕಂಡರೂ, ಜೋಸ್ ಬಟ್ಲರ್‌ಗೆ ಹೋಲಿಸಿದರೆ, ಯಾದವ್ ಸರಾಸರಿ 42 ರನ್​ ಮತ್ತು 149 ಸ್ಟ್ರೈಕ್‌ಗಳನ್ನು ಹೊಂದಿದ್ದಾರೆ. ಆದರೆ ಬಟ್ಲರ್ ವೇಗದ ಬೌಲಿಂಗ್​ ವಿರುದ್ಧ ಎರಡೂ ಕ್ಷೇತ್ರಗಳಲ್ಲಿ ಉತ್ತಮ ಸ್ಟ್ರೈಕ್ ಮತ್ತು ಸರಾಸರಿಯನ್ನು ಹೊಂದಿದ್ದಾರೆ. ಇನ್ನು ಭಾರತದ ಯಶಸ್ಸು ಇವರು ಆಡುವ ಆಟವನ್ನು ಅವಲಂಬಿಸಿದೆ.

ಆಲ್​ರೌಂಡರ್​ ಅಕ್ಷರ್ ಪಟೇಲ್ : ನೆದರ್​ಲ್ಯಾಂಡ್ಸ್​​ ವಿರುದ್ಧದ ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ ಕೇವಲ 18 ರನ್‌ಗಳನ್ನು ನೀಡಿ 2 ವಿಕೆಟ್‌ಗಳನ್ನು ಕಬಳಿಸಿರುವುದು ಪಟೇಲ್​​ಗೆ ಸಾಕಷ್ಟು ಆತ್ಮವಿಶ್ವಾಸವನ್ನು ನೀಡಿದೆ. ಇನ್ನು ಅಕ್ಷರ್​ ಬ್ಯಾಟ್ ಮತ್ತು ಬೌಲಿಂಗ್​ನಿಂದಲೂ ತಂಡಕ್ಕೆ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಇನ್ನು ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಸ್ಥಾನವನ್ನು ತುಂಬಲು ಇಷ್ಟಪಡುತ್ತಾರೆ.

ವೇಗದ ಬೌಲಿಂಗ್ : ಪಾಕಿಸ್ತಾನದ ವಿರುದ್ಧ ಅರ್ಶ್‌ದೀಪ್ ಸಿಂಗ್ ಉತ್ತಮ ಬೌಲಿಂಗ್​ ದಾಳಿ ನಡೆಸಿದ್ದು, ಇನ್ನು ಇತರ ಪಂದ್ಯದಲ್ಲಿ ಇವರ ವೇಗದ ಬೌಲಿಂಗ್​ ಪ್ರಶ್ನಾರ್ಹವಾಗಬಹುದು. ಭುವನೇಶ್ವರ್ ಕುಮಾರ್ ಉತ್ತಮ ಬೌಲಿಂಗ್​ ದಾಳಿ ನಡೆಸುತ್ತಿದ್ದರೂ ಮುಂದಿನ ಪಂದ್ಯಗಳಲ್ಲಿ ಸ್ವಲ್ಪ ಕಾಡುತ್ತದೆ. ಈ ವೇಗದ ಬೌಲರ್​ಗಳು ಪವರ್​ಪ್ಲೇ ಸುತ್ತಿನಲ್ಲೂ ಮತ್ತು ಡೆತ್​ ಓವರ್​ಗಳಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕಾಗುತ್ತದೆ.

ಇದನ್ನೂ ಓದಿ : India vs South Africa: ಗೆಲ್ಲುವ ವಿಶ್ವಾಸದಲ್ಲಿ ಉಭಯ ತಂಡಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.