ETV Bharat / sports

ಭಾರತ - ಪಾಕಿಸ್ತಾನ ಕ್ರಿಕೆಟ್ ಕದನ.. ಬರೋಬ್ಬರಿ 1.3 ಮಿಲಿಯನ್​ ಟಿಕೆಟ್ ಮಾರಾಟ

author img

By

Published : Jul 20, 2022, 8:09 PM IST

India Pak match at Commonwealth Games
India Pak match at Commonwealth Games

ಜುಲೈ 31ರಂದು ನಡೆಯಲಿರುವ ಭಾರತ ಪಾಕಿಸ್ತಾನ ಮಹಿಳಾ ಕ್ರಿಕೆಟ್​​ ಪಂದ್ಯ ವೀಕ್ಷಣೆ ಮಾಡಲು ದಾಖಲೆ ಮಟ್ಟದಲ್ಲಿ ಟಿಕೆಟ್​ ಸೋಲ್ಡ್​ ಆಗಿವೆ.

ನವದೆಹಲಿ: ಕಾಮನ್​​ವೆಲ್ತ್​ ಗೇಮ್ಸ್​​​ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್ ಆಟಕ್ಕೆ ಅವಕಾಶ ಸಿಕ್ಕಿದ್ದು, ಹರ್ಮನ್​​ಪ್ರೀತ್​ ಕೌರ್​ ನೇತೃತ್ವದ ಮಹಿಳಾ ಬಳಗ ಪಾಕಿಸ್ತಾನದ ವಿರುದ್ಧ ಸೆಣಸಾಟ ನಡೆಸಲಿದೆ. ಉಭಯ ತಂಡಗಳ ಮಧ್ಯೆ ಜುಲೈ 31ರಂದು ಪಂದ್ಯ ನಡೆಯಲಿದೆ. ಅದಕ್ಕಾಗಿ ಕ್ರಿಕೆಟ್ ಪ್ರೇಮಿಗಳು ಕಾತುರರಾಗಿದ್ದು, ಟಿಕೆಟ್ ಖರೀದಿ ಮಾಡ್ತಿದ್ದಾರೆ. ಇಲ್ಲಿಯವರೆಗಿನ ಮಾಹಿತಿ ಪ್ರಕಾರ ಬರೋಬ್ಬರಿ 1.2 ಮಿಲಿಯನ್​ ಟಿಕೆಟ್ ಮಾರಾಟಗೊಂಡಿವೆ.

ಎಡ್ಜಬಾಸ್ಟನ್​ ಮೈದಾನದಲ್ಲಿ ಉಭಯ ದೇಶಗಳ ಮಧ್ಯೆ ಕ್ರಿಕೆಟ್ ಪಂದ್ಯ ನಡೆಯಲಿದ್ದು, ಎಲ್ಲರ ಆಕರ್ಷಣೆ ಕೇಂದ್ರ ಬಿಂದುವಾಗಿರುವ ಈ ಮ್ಯಾಚ್​ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಖರೀದಿ ಮಾಡ್ತಿದ್ದಾರೆ. ಜುಲೈ 28ರಿಂದ ಬರ್ಮಿಗ್​​ಹ್ಯಾಮ್​​ನಲ್ಲಿ ಕಾಮನ್​​ವೆಲ್ತ್ ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ. ಎಡ್ಜಬಾಸ್ಟನ್​​​ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತ ಹಾಗೂ ಪಾಕಿಸ್ತಾನದ ಪ್ರಜೆಗಳು ವಾಸವಾಗಿದ್ದು, ಪಂದ್ಯ ವೀಕ್ಷಣೆ ಮಾಡಲು ತೆರಳಲಿದ್ದಾರೆ. ಇದರ ಜೊತೆಗೆ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದ ಟಿಕೆಟ್​ಗೂ ಹೆಚ್ಚಿನ ಬೇಡಿಕೆ ಬಂದಿದೆ ಎಂದು ಕ್ರೀಡಾಕೂಟದ ಸಿಇಒ ಅಯಾನ್ ರೈಡ್​ ತಿಳಿಸಿದ್ದಾರೆ.

ಇದನ್ನೂ ಓದಿರಿ: ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​: 3ನೇ ಸ್ಥಾನಕ್ಕೆ ಲಗ್ಗೆ ಹಾಕಿದ ಪಾಕ್​

ಆಸ್ಟ್ರೇಲಿಯಾ, ಬಾರ್ಬಡೋಸ್​ ಮತ್ತು ಪಾಕಿಸ್ತಾನದೊಂದಿಗೆ ಭಾರತ ಎ ಗುಂಪಿನಲ್ಲಿದ್ದು, ಶ್ರೀಲಂಕಾ, ಇಂಗ್ಲೆಂಡ್​, ನ್ಯೂಜಿಲ್ಯಾಂಡ್​ ಮತ್ತು ದಕ್ಷಿಣ ಆಫ್ರಿಕಾ ಬಿ ಗುಂಪಿನಲ್ಲಿವೆ. ಎರಡು ಪೂಲ್​​​ಗಳಿಂದ ಎರಡು ಅಗ್ರ ತಂಡಗಳು ಸೆಮಿಫೈನಲ್​ಗೆ ಲಗ್ಗೆ ಹಾಕಲಿದ್ದು, ಇಲ್ಲಿ ಗೆಲ್ಲುವ ತಂಡಗಳು ಫೈನಲ್​​ಗೆ ಪ್ರವೇಶ ಪಡೆದುಕೊಳ್ಳಲಿವೆ. ಕಾಮನ್​ವೆಲ್ತ್​ ಗೇಮ್ಸ್​​ನಲ್ಲಿ ಭಾರತದ 108 ಪುರುಷ ಹಾಗೂ 107 ಮಹಿಳಾ ಕ್ರೀಡಾಪಟುಗಳು ಭಾಗಿಯಾಗಿದ್ದು, ಜುಲೈ 28ರಿಂದ ಆರಂಭಗೊಳ್ಳಲಿರುವ ಕ್ರೀಡೆಗಳಲ್ಲಿ ಭಾಗಿಯಾಗಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.