ETV Bharat / sports

ಒಲಿಂಪಿಕ್ಸ್ ಚಾಂಪಿಯನ್​ಗೆ ಸೋಲುಣಿಸಿದ ಸಿಂಧು, ಶ್ರೀಕಾಂತ್​ ಜೊತೆ 8ರ ಘಟ್ಟಕ್ಕೆ ಎಂಟ್ರಿ ಕೊಟ್ಟ ಪ್ರಣಯ್

author img

By

Published : Nov 18, 2021, 7:19 PM IST

Indonesia Masters
ಇಂಡೋನೇಷಿಯಾ ಮಾಸ್ಟರ್ಸ್

ಪ್ರಣಯ್​ ಅವರು ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ​ಭಾರತದ ಸ್ಟಾರ್​ ಬ್ಯಾಡ್ಮಿಂಟನ್‌ ಆಟಗಾರ ಕಿಡಂಬಿ ಶ್ರೀಕಾಂತ್​ ವಿರುದ್ಧ ಹೋರಾಡಲಿದ್ದಾರೆ. ಶ್ರೀಕಾಂತ್​ ಹಿಂದಿನ 5 ಮುಖಾಮುಖಿಯಲ್ಲಿ ಪ್ರಣಯ್ ವಿರುದ್ಧ 4-1ರಲ್ಲಿ ಗೆಲುವಿನ ಅಂತರ ಕಾಯ್ದುಕೊಂಡಿದ್ದಾರೆ.

ಬಾಲಿ(ಇಂಡೋನೇಷಿಯಾ): 2021ರಲ್ಲಿ ಭಾರಿ ವೈಫಲ್ಯ ಅನುಭವಿಸಿದ್ದ ಭಾರತದ ಶಟ್ಲರ್​ ಪ್ರಣಯ್ ಇಂಡೋನೇಷಿಯಾ ಮಾಸ್ಟರ್ಸ್​ನಲ್ಲಿ (Indonesia Masters) ವಿಶ್ವದ 2ನೇ ಶ್ರೇಯಾಂಕದ ವಿಕ್ಟರ್ ಅಕ್ಸೆಲ್ಸನ್​ ವಿರುದ್ಧ ರೋಚಕ ಜಯ ಸಾಧಿಸಿ ಕ್ವಾರ್ಟರ್​ ಫೈನಲ್ಸ್​ ಪ್ರವೇಶಿಸಿದ್ದಾರೆ.

2020ರ ಟೋಕಿಯೋ ಒಲಿಂಪಿಕ್ಸ್ ಚಾಂಪಿಯನ್ (Olympic champ Axelsen) ಆಗಿರುವ ಡೆನ್ಮಾರ್ಕ್​ನ ವಿಕ್ಟರ್​ ಅಕ್ಸೆಲ್ಸನ್​ ವಿರುದ್ಧ 14-21,21-19, 21-16ರ ಅಂತರದಲ್ಲಿ ಗೆಲುವು ಸಾಧಿಸಿದರು. ಮೊದಲ ಸೆಟ್​ನಲ್ಲಿ 21-14ರಲ್ಲಿ ಸುಲಭವಾಗಿ ಚಾಂಪಿಯನ್​ ಆಟಗಾರನಿಗೆ ಶರಣಾದ ಪ್ರಣಯ್​, ನಂತರದ ಎರಡು ಗೇಮ್​ಗಳಲ್ಲಿ ಅದ್ಭುತ ಪ್ರದರ್ಶನ ತೋರಿ ಪಂದ್ಯವನ್ನು ಗೆದ್ದುಕೊಂಡರು.

ಕಳೆದ ಒಂದು ವರ್ಷದಲ್ಲಿ ಆಡಿದ ಬಹುತೇಕ ಟೂರ್ನಿಗಳಲ್ಲಿ ಹೀನಾಯ ಪ್ರದರ್ಶನ ತೋರಿ 32ನೇ ಶ್ರೇಯಾಂಕಕ್ಕೆ ಕುಸಿದಿದ್ದ ಭಾರತೀಯ ಶಟ್ಲರ್​ ಇಂದಿನ ಪ್ರದರ್ಶನ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅಲ್ಲದೆ ಹಿಂದಿನ 5 ಮುಖಾಮುಖಿಯಲ್ಲಿ ಪ್ರಣಯ್​ ಡ್ಯಾನೀಸ್ ಶಟ್ಲರ್ ವಿರುದ್ಧ ಸೋಲು ಕಂಡಿದ್ದರು.

ಪ್ರಣಯ್​ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ​ಭಾರತದ ಸ್ಟಾರ್​ ಕಿಡಂಬಿ ಶ್ರೀಕಾಂತ್​ ವಿರುದ್ಧ ಹೋರಾಡಲಿದ್ದಾರೆ. ಶ್ರೀಕಾಂತ್​ ಹಿಂದಿನ 5 ಮುಖಾಮುಖಿಯಲ್ಲಿ ಪ್ರಣಯ್ ವಿರುದ್ಧ 4-1ರಲ್ಲಿ ಗೆಲುವಿನ ಅಂತರ ಕಾಯ್ದುಕೊಂಡಿದ್ದಾರೆ.

ಶ್ರೀಕಾಂತ್ ಇಂದಿನ ಪಂದ್ಯದಲ್ಲಿ ಟೂರ್ನಿಯ 6ನೇ ಶ್ರೇಯಾಂಕದ ಜೊನಾಥನ್ ಕ್ರಿಸ್ಟೀ ವಿರುದ್ಧ 13-21, 21-18, 21-15ರಲ್ಲಿ ಗೆಲುವು ಸಾಧಿಸಿದರು.

8ರ ಘಟ್ಟಕ್ಕೆ ಪಿ.ವಿ.ಸಿಂಧು:

ಹಾಲಿ ವಿಶ್ವಚಾಂಪಿಯನ್ ಪಿ.ವಿ.ಸಿಂಧು (World champion P.V.Sindhu) ಕೂಡ 2ನೇ ಸುತ್ತಿನ ಪಂದ್ಯದಲ್ಲಿ ವಿಶ್ವದ 47ನೇ ಶ್ರೇಯಾಂಕದ ಸ್ಪೇನ್​ನ ಕ್ಲಾರಾ ಅಹುರ್ಮೆಂದಿ ವಿರುದ್ಧ ಪ್ರಯಾಸದ ಗೆಲುವು ಪಡೆದು ಕ್ವಾರ್ಟರ್​ ಫೈನಲ್ ಪ್ರವೇಶಿಸಿದರು. ಒಲಿಂಪಿಕ್ಸ್ ಮೆಡಲಿಸ್ಟ್​ ಸಿಂಧು 17-21, 21-7, 21-12ರಲ್ಲಿ ಗೆಲುವು ಸಾಧಿಸಿದರು.

ಆದರೆ ಪುರುಷರ 2ನೇ ಸುತ್ತಿನ ಮತ್ತೊಂದು ಸಿಂಗಲ್ಸ್​ ಪಂದ್ಯದಲ್ಲಿ ಭಾರತದ ಯುವ ಶಟ್ಲರ್​ ಲಕ್ಷ್ಯ ಸೇನ್ ವಿಶ್ವದ ನಂಬರ್​ ಒನ್​ ಆಟಗಾರ ಜಪಾನ್​ನ ಕೆಂಟೊ ಮೊಮೊಟೊ ವಿರುದ್ಧ 13-21, 19-21ರಲ್ಲಿ ಸೋಲು ಕಂಡರು. ಆದರೆ ಮೊದಲ ಸುತ್ತಿನಲ್ಲಿ ಸ್ಥಳೀಯ 10ನೇ ಶ್ರೇಯಾಂಕದ ಶಟ್ಲರ್​ ಕಾಂತಾ ತ್ಸುನೇಯಮಾರನ್ನು ಮಣಿಸಿದ್ದರು.

ಇದನ್ನೂ ಓದಿ: ಧೋನಿಯನ್ನು ಕಾಣಲು 1,436 ಕಿ.ಮೀ. ನಡೆದುಕೊಂಡೇ ಸಾಗಿ ಬಂದ ಅಭಿಮಾನಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.