ETV Bharat / sitara

"ಪುನೀತ್​ ಅವರನ್ನು ನಾವು ಹೂತಿಲ್ಲ, ಬಿತ್ತಿದ್ದೇವೆ": ತಮ್ಮನ ನೆನೆದು ಕಣ್ಣೀರಾದ ಶಿವಣ್ಣ, ರಾಘಣ್ಣ

author img

By

Published : Nov 16, 2021, 3:05 PM IST

Updated : Nov 16, 2021, 9:14 PM IST

ಪುನೀತ್​ಗೆ ಗೀತ ನಮನ
ಪುನೀತ್​ಗೆ ಗೀತ ನಮನ

20:14 November 16

'ಪುನೀತ್ ನಮನ' ಕಾರ್ಯಕ್ರಮ ಮುಕ್ತಾಯ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ 'ಪುನೀತ್ ನಮನ' ಕಾರ್ಯಕ್ರಮ ಮುಕ್ತಾಯಗೊಂಡಿದೆ.  

19:15 November 16

'ಪ್ರೀತಿಯ ನೀಡಿ ಸ್ನೇಹವ ಹಂಚಿ ದೂರ ಸರಿದ ಗೆಳೆಯ': ಗಾಯಕ ರಾಜೇಶ್​ ಕೃಷ್ಣನ್​ ಗಾನ ನಮನ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ 'ಪುನೀತ್​ ನಮನ' ಕಾರ್ಯಕ್ರಮದಲ್ಲಿ ಹಿನ್ನೆಲೆ ಗಾಯಕ ರಾಜೇಶ್​ ಕೃಷ್ಣನ್​ ಅವರು ಪುನೀತ್​ ರಾಜ್​ಕುಮಾರ್​ ಅವರಿಗೆ ಗೀತ ನಮನ ಸಲ್ಲಿಸಿದರು. 

19:07 November 16

'ಮೇ ಶಾಯರ್‌ ತೋ ನಹೀ...' ಬಿಕ್ಕಳಿಸುತ್ತಲೇ ವೇದಿಕೆಗೆ ಆಗಮಿಸಿ ಹಾಡುತ್ತಾ ಶಿವಣ್ಣನ ಕಣ್ಣೀರು

  • ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ 'ಪುನೀತ್​ ನಮನ' ಕಾರ್ಯಕ್ರಮ  
  • ಅಳುತ್ತಲೇ ವೇದಿಕೆಗೆ ಆಗಮಿಸಿದ ನಟ ಶಿವರಾಜ್​ಕುಮಾರ್​
  • ಮಾತಾಡೋಕೆ ತುಂಬಾ ಕಷ್ಟ ಆಗುತ್ತೆ, ರಾಘು ಏನೇನೋ ಮಾತಾಡಿ ಹೋದಾ
  • ಅವನ ಬಗ್ಗೆ ಮಾತಾಡಿ, ಮಾತಾಡಿ ನನ್ನ ತಮ್ಮನಿಗೆ ನನ್ನ ದೃಷ್ಟಿನೆ ಆಯ್ತಾ ಅನಿಸುತ್ತೆ
  • ಎಲ್ಲರೂ ನಿನ್ನ ತಮ್ಮನಿಗೆ ಅಷ್ಟಒಂದು ಹೊಗಳ್ತಿಯಲ್ಲ ಅಂತಾರೆ
  • ಆತ ಹೊಗಳಿಕೆ ಪದಾರ್ಥ ಅಲ್ವ, ಆತನೇ ನನಗೆ ಸ್ಫೂರ್ತಿ
  • ಇಷ್ಟೊಂದು ಸಮಾಜ ಸೇವೆ ಮಾಡಿದಾನೆ ಎಲ್ಲಿಂದ ಈ ಗುಣ ಬಂತೋ ಗೊತ್ತಿಲ್ಲ
  • ಅಪ್ಪು ನಮ್ಮಲ್ಲಿದಾನೆ ಅವನಿಗೆ ಜೀವಂತವಾಗಿ ಇರಿಸಿಕೊಳ್ಳೋಕೆ ನಾವು ಪ್ರಯತ್ನಿಸಬೇಕು
  • ಎಲ್ಲರಿಗೂ ಹೋಗೋ ಸಮಯ ಬರುತ್ತೆ, ಆದರೆ ಇವನಿಗೆ ಇಷ್ಟು ಬೇಗ ಬಂತಲ್ಲ ಅಂತ ದುಃಖ ಆಗುತ್ತೆ
  • ತಮಿಳು ನಟ ವಿಶಾಲ್​ ನೋಡಿದರೆ ಅಪ್ಪು ನೋಡಿದ ಹಾಗೆ ಆಗುತ್ತೆ
  • 'ಮೇ ಶಾಯರ್‌ ತೋ ನಹೀ...'- ಹಾಡಿನ ಮೂಲಕ ಅಗಲಿದ ಸೋದರನಿಗೆ ಶಿವಣ್ಣನ ಭಾವುಕ ನಮನ

18:57 November 16

'ಪುನೀತ್​ ಅವರನ್ನು ನಾವು ಹೂತಿಲ್ಲ, ಬಿತ್ತಿದ್ದೇವೆ..': ರಾಘಣ್ಣನ ಭಾವುಕ ನುಡಿ

  • ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ 'ಪುನೀತ್​ ನಮನ' ಕಾರ್ಯಕ್ರಮ  
  • ಕಾರ್ಯಕ್ರಮದಲ್ಲಿ ಪುನೀತ್​ ಸಹೋದರ, ನಟ ರಾಘವೇಂದ್ರ ರಾಜ್​ಕುಮಾರ್​ ಮಾತು 
  • 20 ದಿನಗಳಿಂದ ನೊಂದು, ತಡೆದುಕೊಂಡು ಬಂದ್ವಿ
  • ಪವರ್​ ಹೋದಮೇಲೆ ಬಲ್ಬ್​ಗಳು ಇನ್ನೇನು ಮಾಡಲು ಸಾಧ್ಯ?
  • ನಮ್ಮ ಮುಖ ಕನ್ನಡಿಯಲ್ಲಿ ನೋಡಿಕೊಳ್ಳೋಕೆ ಆಗುತ್ತಿಲ್ಲ
  • ಇದೇ ವೇದಿಕೆ ಮೇಲೆ ನನ್ನ ಆಯಸ್ಸು ನಿನಗೆ ಕೊಡುವೆ ಎಂದಿದ್ದೆ
  • ಆದರೆ ತನ್ನ ಆಯಸ್ಸನ್ನು ನನಗೆ ಕೊಟ್ಟು ಆತ ಹೋದ
  • ಹೇಗಾದರೂ ಮಾಡಿ ನನ್ನ ಕಳಿಸಿ, ಅವನನ್ನು ವಾಪಸ್ ಕರೆಸಿ
  • ಪುನೀತ್​ ಅವರನ್ನು ನಾವು ಹೂತಿಲ್ಲ, ಬಿತ್ತಿದ್ದೇವೆ
  • ವೇದಿಕೆ ಮೇಲೆ ಕಣ್ಣೀರು ಹಾಕಿದ ನಟ ರಾಘವೇಂದ್ರ ರಾಜ್​ಕುಮಾರ್​ 

18:57 November 16

ಶಾಸಕ ಆನಂದ್​ ಸಿಂಗ್​ ನುಡಿ ನಮನ

  • ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ 'ಪುನೀತ್​ ನಮನ' ಕಾರ್ಯಕ್ರಮ  
  • ಕಾರ್ಯಕ್ರಮದಲ್ಲಿ ಶಾಸಕ ಆನಂದ್​ ಸಿಂಗ್​ ಮಾತು
  • ಅಣ್ಣಾವ್ರ ಕುಟುಂಬದ ಜತೆ ನನಗೆ ಬಹಳ ವರ್ಷಗಳ ಸಂಬಂಧವಿದೆ
  • ಆಸ್ಪತ್ರೆಗೆ ಬಂದು ನೋಡಿದಾಗ ಏನೂ ಮಾತನಾಡಲು ದಿಕ್ಕು ತೋಚಲಿಲ್ಲ
  • ನಿಮ್ಮ ಮೂವರು ಅಣ್ಣ-ತಮ್ಮಂದಿರಿಗೆ ಯಾರದ್ದೋ ದೃಷ್ಟಿ ತಗುಲಿದೆ  
  • ಮನುಷ್ಯ ಹುಟ್ಟಿದ ಮೇಲೆ ಸಾಯೋದು ಖಂಡಿತ, ಆದರೆ ಅದರ ನಡುವೆ ಸಮಾಜಕ್ಕೆ ಏನು ಬಿಟ್ಟು ಹೋಗ್ತಾನೋ ಅದು ಶಾಶ್ವತ
  • ಇದನ್ನು ಪುನೀತ್​ ರಾಜ್​ಕುಮಾರ್​ ನಮಗೆ ಹೇಳಿಹೋಗಿದ್ದಾರೆ
  • ಶಾಸಕ ಆನಂದ್​ ಸಿಂಗ್​ ನುಡಿ ನಮನ

18:43 November 16

20-23 ವರ್ಷದ ಬಳಿಕ ದೊಡ್ಡ ನಟನಾಗಿ ಪುನೀತ್​ ಮತ್ತೆ ಹುಟ್ಟಿ​ ಬರುತ್ತಾನೆ: ಹಿರಿಯ ನಟ ಜಗ್ಗೇಶ್

  • ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ 'ಪುನೀತ್​ ನಮನ' ಕಾರ್ಯಕ್ರಮ  
  • ಕಾರ್ಯಕ್ರಮದಲ್ಲಿ ಹಿರಿಯ ನಟ ಜಗ್ಗೇಶ್​​ ಮಾತು
  • ಆತ ನಮ್ಮನ್ನು ಕಳುಹಿಸಿ ಕೊಡಬೇಕಿತ್ತು, ಆದರೆ ದೌರ್ಭಾಗ್ಯ ನಾವು ಅವನನ್ನು ಕಳುಹಿಸಿ ಕೊಡಬೇಕಾಯಿತು
  • ಪುನೀತ್​ ಎಲ್ಲೂ ಹೋಗಿಲ್ಲ, ರಾಜ್​ಕುಮಾರ್​ ಮಗನೆಂಬ ಬಟ್ಟೆ ಕಳಚಿದ್ದಾನೆ, ಮತ್ತೆ ಹುಟ್ಟಿ​ ಬರುತ್ತಾನೆ
  • 20-23 ವರ್ಷದ ಬಳಿಕ ರಾಜ್​ಕುಮಾರ್​ ಕುಟುಂಬದಲ್ಲಿ ಒಬ್ಬ ಅದ್ಭುತ ನಟ ಬರುತ್ತಾನೆ, ಆಗ ನಾವಿರುತ್ತೇವಿಲ್ಲೋ ಗೊತ್ತಿಲ್ಲ
  • ನೆನಪಿಟ್ಕೊಳ್ಳಿ ಆಗ ಬರುವ ಆ ಪವರ್​ ಸ್ಟಾರ್​ ನಮ್ಮ ಪುನೀತ್​ ಆಗಿರುತ್ತಾನೆ
  • ದೊಡ್ಡ ನಟನಾಗಿ ಪುನೀತ್​ ವಾಪಸ್​ ಬರುತ್ತಾನೆ
  • ಆತ ಹೋಗುವ ಮೊದಲು ಯಾವುದೂ ಶಾಶ್ವತವಲ್ಲ ಎಂಬ ಸಂದೇಶ ಬಿಟ್ಟು ಹೋದ
  • ಹಿರಿಯ ನಟ ಜಗ್ಗೇಶ್ ನುಡಿನಮನ 

18:35 November 16

ಅಪ್ಪುಗೆ ದೇಶದ ಅತ್ಯುನ್ನತ ಪ್ರಶಸ್ತಿ 'ಭಾರತ ರತ್ನ' ನೀಡಬೇಕು: ತಮಿಳು ನಟ ಶರತ್​ ಕುಮಾರ್​

  • ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ 'ಪುನೀತ್​ ನಮನ' ಕಾರ್ಯಕ್ರಮ  
  • ಕಾರ್ಯಕ್ರಮದಲ್ಲಿ  ತಮಿಳು ನಟ ಶರತ್​ ಕುಮಾರ್​  ಮಾತು
  • ನಾನು ಯಾವತ್ತು ಪುನೀತ್​ ಶ್ರದ್ಧಾಂಜಲಿಗೆ ಬರುತ್ತೇನೆ ಎಂದು ಕೊಂಡಿರಲಿಲ್ಲ
  • ಪುನೀತ್​ ನನ್ನ ಶ್ರದ್ಧಾಂಜಲಿಗೆ ಬರುತ್ತಾರೆ ಎಂದುಕೊಂಡಿದ್ದೆ
  • ಪುನೀತ್​ ಈಗಲೂ ಎಂದೆಂದಿಗೂ ನಮ್ಮ ಮನದಲ್ಲಿ ಜೀವಂತ
  • ರಾಜ್ಯ ಸರ್ಕಾರ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಿ ಗೌರವ ಸಲ್ಲಿಸಿದೆ
  • ಅವರಿಗೆ  'ಭಾರತ ರತ್ನ' ಪ್ರಶಸ್ತಿ ನೀಡಬೇಕು
  • ಕಾರ್ಯಕ್ರಮದಲ್ಲಿ  ತಮಿಳು ನಟ ಶರತ್​ ಕುಮಾರ್​ ನುಡಿ ನಮನ

18:28 November 16

ಮುತ್ತುರಾಜನ ಕುಟುಂಬದಲ್ಲಿ ಮುತ್ತಾಗಿ ಹುಟ್ಟಿದ್ದರು ಅಪ್ಪು: ಆರ್​.ಅಶೋಕ್​ ನುಡಿ ನಮನ

  • ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ 'ಪುನೀತ್​ ನಮನ' ಕಾರ್ಯಕ್ರಮ  
  • ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ್​ ಮಾತು
  • ಪುನೀತ್​ ತೀರಿ ಹೋಗಿದ್ದಾರೆ ಎಂದು ಸಿಎಂ ಅವರು ನನಗೆ ಹೇಳಿದರು, ನಾನು ಸುಮ್ನೆ ಜೋಕ್​ ಮಾಡ್ತಿದಿರಾ ಎಂದು ಹೊರಟೆ
  • ಆಗ ಅಲ್ಲಿದ್ದ ಎಸ್ಪಿ ಅವರನ್ನು ಕರೆದು ನೀನಾದರು ಹೇಳು ಅಂದರು, ಅದನ್ನು ಕೇಳಿ ನನಗೆ ಶಾಕ್​ ಆಯ್ತು  
  • ಮುತ್ತುರಾಜನ ಕುಟುಂಬದಲ್ಲಿ ಮುತ್ತಾಗಿ ಹುಟ್ಟಿದ್ದರು ಅಪ್ಪು
  • ಅವರನ್ನು ನೋಡುತ್ತಿದ್ದರೆ ಮಗುವನ್ನು ನೋಡಿದ ಹಾಗೆ ಆಗ್ತಿತ್ತು, ಅವರ ಮನಸ್ಸು, ನಗು ಎಲ್ಲವೂ ಮಗು  
  • ವ್ಯಕ್ತಿ ಸತ್ತಾಗ ಆತನ ನಡೆ, ನುಡಿ ಮಾಡಿದ ಕೆಲಸ ಕಾಣುತ್ತೆ ಅಂತಾರೆ, ಅದು ಅಪ್ಪು ನೋಡಿದಾಗ ಸತ್ಯ ಎನಿಸಿತು
  • ಅಪ್ಪು ಎಂಬ ಜ್ಯೋತಿ ಯಾವತ್ತೂ ಆರಲ್ಲ, ಕನ್ನಡ ಜನರ ಮನೆ, ಮನದಲ್ಲಿ ಯಾವತ್ತಿಗೂ ಇರುತ್ತದೆ
  • ತಮಿಳಿನ ನಟ ಒಬ್ಬರು ಬಂದು ಅಪ್ಪು ಜವಾಬ್ದಾರಿಯನ್ನು ನಾನು ಹೊರುತ್ತೇನೆ ಅಂದಿದ್ದು ಕೇಳಿ ಕಣ್ಣಲ್ಲಿ ನೀರು ಬಂತು
  • ಅದನ್ನು ಪ್ರತಿಯೊಬ್ಬ ರಾಜಕಾರಣಿಗಳು, ನಟರು ಮಾಡಬೇಕು
  • ಅಪ್ಪು ನಮನ ಕಾರ್ಯಕ್ರಮದಲ್ಲಿ ಆರ್​.ಅಶೋಕ್​ ನುಡಿ ನಮನ 

18:17 November 16

ಅಪ್ಪು ಬಿಟ್ಟು ಹೋಗಿರುವ ಸಾಮಾಜಿಕ ಕೆಲಸವನ್ನು ನಾವೆಲ್ಲರೂ ಮಾಡೋಣ: ಆರಗ ಜ್ಞಾನೇಂದ್ರ ನುಡಿನಮನ

  • ಪುನೀತ್ ನಮನ ಕಾರ್ಯಕ್ರಮ ಉದ್ದೇಶಿಸಿ ಗೃಹಸಚಿವ ಆರಗ ಜ್ಞಾನೇಂದ್ರ ನುಡಿನಮನ
  • ನಾವು, ಇಡೀ ಸರ್ಕಾರ 2 ಹಗಲು 2 ರಾತ್ರಿ ಪುನೀತ್‌ ಜೊತೆಗೆ ಆ ವೇದಿಕೆಯಲ್ಲೇ ಇದ್ದೆವು. ಅಪ್ಪು ಪಾರ್ಥಿವ ಶರೀರವನ್ನು ಗೌರವಪೂರ್ವಕವಾಗಿ ಕಳುಹಿಸಿಕೊಡುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿತ್ತು.
  • ಈ ನಿಟ್ಟಿನಲ್ಲಿ ನಾನು ನಮ್ಮ ಪೊಲೀಸ್ ಸಿಬ್ಬಂದಿಯನ್ನು ನಾನು ಗೌರವಿಸುತ್ತೇನೆ.
  • ಅಪ್ಪು ಬಿಟ್ಟು ಹೋಗಿರುವ ಸಾಮಾಜಿಕ ಕೆಲಸವನ್ನು ನಾವೆಲ್ಲರೂ ಮಾಡೋಣ, ಅದು ಅಪ್ಪು ಅವರಿಗೆ ಸಲ್ಲಿಸುವ ದೊಡ್ಡ ಶ್ರದ್ಧಾಂಜಲಿಯಾಗಬಲ್ಲದು- ಗೃಹ ಸಚಿವ ಆರಗ ಜ್ಞಾನೇಂದ್ರ

18:05 November 16

ನಮ್ಮಿಂದ ವ್ಯಕ್ತಿ ದೂರ ಹೋಗಿಲ್ಲ, ಶಕ್ತಿ ದೂರ ಹೋಗಿದೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

  • 'ಪುನೀತ್ ನಮನ' ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನುಡಿನಮನ
  • ಪುನೀತ್ ಅವರ ಸಾವು ನನಗೆ ನಂಬೋಕೆ ಸಾಧ್ಯವಾಗಲಿಲ್ಲ
  • 'ಮನುಷ್ಯ ಹುಟ್ಟಬೇಕಾದ್ರೆ ಉಸಿರು ಇರುತ್ತದೆ, ಹೆಸರು ಇರೋದಿಲ್ಲ; ಆದರೆ ಸಾವಿನ ಸಂದರ್ಭದಲ್ಲಿ ಉಸಿರು ಇರೋಲ್ಲ, ಹೆಸರು ಉಳಿಯುತ್ತದೆ. ಇದಕ್ಕೆ ಪುನೀತ್ ರಾಜ್‌ಕುಮಾರ್ ಉದಾಹರಣೆ'
  • 'ಪುನೀತ್ ರೀತಿಯ ಸಾಮಾಜಿಕ ಬದ್ಧತೆ ಎಲ್ಲರಿಗೂ ಇರೋಕೆ ಸಾಧ್ಯವಿಲ್ಲ. ನಮ್ಮಿಂದ ಒಂದು ವ್ಯಕ್ತಿ ದೂರ ಹೋಗಿಲ್ಲ, ಶಕ್ತಿ ದೂರಹೋಗಿದೆ ಎಂದು ನಾನು ಭಾವಿಸುತ್ತೇನೆ'.
  • 'ಪುನೀತ್ ಹೆಸರಲ್ಲಿ ಹೊಸ ಕಲಾವಿದರನ್ನು ಸೃಷ್ಟಿಸುವ ಒಂದು ಸಂಸ್ಥೆಯನ್ನು ಪ್ರಾರಂಭಿಸಬೇಕು ಎಂದು ನಾನು ಸಿಎಂಗೆ ಮನವಿ ಮಾಡುತ್ತೇನೆ'
  • 'ಭಗವಂತ ಎಷ್ಟು ಕ್ರೂರಿ ಅನ್ನೋದಕ್ಕೆ ಪುನೀತ್ ಸಾವು ಸಾಕ್ಷಿ'- ಡಿಕೆಶಿ

17:51 November 16

ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಗುರುಕಿರಣ್‌ ತಂಡದಿಂದ ಗೀತ ನಮನ

  • ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಗುರುಕಿರಣ್ ತಂಡದಿಂದ ವಿಶೇಷ ಗೀತನಮನ
  • 'ಕಾಣದಂತೆ ಮಾಯವಾದರು ನಮ್ಮ ಅಪ್ಪು, ಕೈಲಾಸ ಸೇರಿಕೊಂಡರು.. ನಟನೆಯಲ್ಲಿ ಸಾರ್ವಭೌಮನು ನಮ್ಮ ಅಪ್ಪು ನೀತಿಯಲ್ಲಿ ವಿನಯವಂತನು..'

17:47 November 16

ಅಪ್ಪು ಹೆಸರಲ್ಲಿ ರಜತ ನಾಣ್ಯ ಬಿಡುಗಡೆ

  • ಅಪ್ಪು ಗೌರವಾರ್ಥವಾಗಿ ರಜತ ನಾಣ್ಯ ಬಿಡುಗಡೆ
  • ಶ್ರೀ ಸಾಯಿ ಗೋಲ್ಡ್‌ ಪ್ಯಾಲೇಸ್ ಅವರಿಂದ ನಾಣ್ಯ ಬಿಡುಗಡೆೆಗೆ ವ್ಯವಸ್ಥೆ
  • ನಾಣ್ಯ ಬಿಡುಗಡೆಗೊಳಿಸಿದ ಸಚಿವ ಆರ್‌. ಅಶೋಕ್‌, ಡಿ.ಕೆ.ಶಿವಕುಮಾರ್ ಮತ್ತಿತರ ಗಣ್ಯರು

17:38 November 16

ಮೈಸೂರಿನ ಶಕ್ತಿಧಾಮದ ಮಕ್ಕಳಿಂದ 'ಗಾನ ನಮನ'

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ 'ಪುನೀತ್​ ನಮನ' ಕಾರ್ಯಕ್ರಮದಲ್ಲಿ ಡಾ.ರಾಜ್​ಕುಮಾರ್​ ಮತ್ತು ಪಾರ್ವತಮ್ಮ ರಾಜ್​ಕುಮಾರ್​ ನಡೆಸುತ್ತಿದ್ದ ಮೈಸೂರಿನ ಶಕ್ತಿಧಾಮ ಆಶ್ರಮದ ಮಕ್ಕಳು ಭಾಗಿಯಾಗಿದ್ದಾರೆ. ಈ ಮಕ್ಕಳ ಹೊಣೆಯನ್ನು ಅಪ್ಪು ಹೊತ್ತಿದ್ದರು. ವೇದಿಕೆಯ ಮೇಲೆ ಒಟ್ಟಾಗಿ ಹಾಡುವ ಮೂಲಕ ಅಪ್ಪುಗೆ 'ಗೀತ ನಮನ' ಸಲ್ಲಿಸಿದರು. 'ಶಕ್ತಿಧಾಮದ ಹೆಸರು ಎಷ್ಟು ಸುಂದರ' ಹಾಡಿನ ಮೂಲಕ ಮಕ್ಕಳಿಂದ ಗಾನ ನಮನ. 

17:34 November 16

ಪುನೀತ್ ರಾಜ್​​ಕುಮಾರ್ ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರುವೆ: ತಮಿಳು ನಟ ವಿಶಾಲ್

  • ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ 'ಪುನೀತ್​ ನಮನ' ಕಾರ್ಯಕ್ರಮ  
  • ಕಾರ್ಯಕ್ರಮದಲ್ಲಿ ತಮಿಳು ನಟ ವಿಶಾಲ್ ಮಾತು
  • ಸ್ವಲ್ಪ ಸ್ವಲ್ಪ ಕನ್ನಡ ಗೊತ್ತು, ನಮ್ಮ ಅಪ್ಪ ಕನ್ನಡಿಗ  
  • ಪುನೀತ್​ ನಮ್ಮಣ್ಣ, ಅವನ ಮುಖ ಇನ್ನು ನನ್ನ ಮುಂದೆ ಕಾಣುತ್ತಿದೆ  
  • ಕನ್ನಡದಲ್ಲಿಯೇ ಮಾತು ಆರಂಭಿಸಿದ ತಮಿಳು ನಟ ವಿಶಾಲ್
  • ಅಪ್ಪು ಇಲ್ಲದ ನೋವು ಎಲ್ಲರಲ್ಲಿಯೂ ಕಾಣಿಸುತ್ತಿದೆ
  • ಅಪ್ಪು ನಿಧನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ
  • ಒಳ್ಳೆಯದು ಮಾಡಬೇಕೆಂದು ಎಲ್ಲರಿಗೂ ಅನಿಸುವುದಿಲ್ಲ
  • ನನ್ನ ಹುಟ್ಟುಹಬ್ಬದಂದೇ ಪುನೀತ್​ ನಿಧನರಾದರು
  • ಅವರ ಜನಪರ ಕಾರ್ಯಗಳನ್ನು ಮುಂದುವರೆಸಬೇಕಿದೆ
  • ಪುನೀತ್ ರಾಜ್​​ಕುಮಾರ್ ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರುವೆ
  • ತಮಿಳು ನಟ ವಿಶಾಲ್ ನುಡಿ ನಮನ 

17:24 November 16

ವಿಪಕ್ಷ ನಾಯಕ ಸಿದ್ದರಾಮಯ್ಯ ನುಡಿ ನಮನ

  • ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ 'ಪುನೀತ್​ ನಮನ' ಕಾರ್ಯಕ್ರಮ  
  • ಕಾರ್ಯಕ್ರಮದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ​ ಮಾತು
  • ನಾವು ಯಾರೂ ಇಷ್ಟು ಬೇಗ ಇಂತಹ ದುಃಖದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇವೆ ಅಂದುಕೊಂಡಿರಲಿಲ್ಲ
  • ಪುನೀತ್​ ರಾಜ್​ಕುಮಾರ್​ ನಿಧನದ ಬಳಿಕ ರಾಜ್ಯದ ಜನ ತಮ್ಮ ಮನೆಯ ವ್ಯಕ್ತಿಯನ್ನು ಕಳೆದುಕೊಂಡ ನೋವನ್ನು ಅನುಭವಿಸಿದರು
  • ಇದನ್ನ ನೋಡಿದಾಗ ಪುನೀತ್​ ಹೇಗೆ ಕನ್ನಡನಾಡಿನ ಜನರ ಹೃದಯ ಸಿಂಹಾಸನದಲ್ಲಿ ಸೇರಿದ್ದರು ಎಂದು ತಿಳಿಯುತ್ತದೆ
  • ಅವರು ಕೇವಲ ಒಬ್ಬ ನಟನಾಗಿ ಸಮಾಜದಲ್ಲಿ ಜನಪ್ರಿಯರಾಗಿರಲಿಲ್ಲ
  • ಒಬ್ಬ ನಯ, ವಿನಯ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದ ವ್ಯಕ್ತಿ
  • ಇದರಿಂದಲೇ ಅವರು ಕರ್ನಾಟಕದ ಎಲ್ಲ ಜನರ ಮನಸ್ಸು ಗೆದ್ದಿದ್ದಾರೆ
  • ಅವರು ನಿಧನರಾದಾಗ ನಾನು ಬಹಳ ದೂರದಲ್ಲಿದ್ದೆ, ನಾನು ಆ ಸುದ್ದಿ ನಂಬಲಿಲ್ಲ
  • ಆದರೆ ಆ ಸುದ್ದಿ ಸತ್ಯವಾದಾಗ ನಮ್ಮ ಮನೆಯವರೇ ದೂರವಾದಾಗ ಬರುವ ದುಃಖ ನನ್ನನ್ನು ಆವರಿಸಿತು
  • ಡಾ.ರಾಜ್​ಕುಮಾರ್​ ಕುಟುಂಬದ ಜತೆ ನನಗೆ ಮೊದಲಿನಿಂದಲೂ ಆತ್ಮೀಯತೆ ಇತ್ತು
  • ಅಣ್ಣಾವ್ರಲ್ಲಿದ್ದ ಮಾನವೀಯತೆ, ವಿನಯ, ಸಜ್ಜನಿಕೆ, ಅಭಿಮಾನಿಗಳನ್ನು ಪ್ರೀತಿಸುವ ಗುಣ ರಾಜ್​ ಕುಟುಂಬದ ಎಲ್ಲರಲ್ಲೂ ಕಾಣುತ್ತೇವೆ
  • ಆದರೆ ಪುನೀತ್​ ಆ ನಗು, ವಿನಯ, ಸರಳತೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ
  • ಪುನೀತ್​ ನನಗೆ ಯಾವಾಗಲೂ ಮಾಮಾ ಎಂದು ಕರೆಯುತ್ತಿದ್ದರು
  • ನನಗೆ ಮೈಸೂರಿನಲ್ಲಿ ಭೇಟಿಯಾದಾಗ ಆಗ ಬಿಡುಗಡೆಯಾಗಿದ್ದ ಅವರ 'ರಾಜಕುಮಾರ' ಸಿನಿಮಾ ನೋಡಲು ಹೇಳಿದರು
  • ನಾನು ಅದನ್ನು ಮೈಸೂರಿನ ಸರಸ್ವತಿ ಚಿತ್ರಮಂದಿರದಲ್ಲಿ ವೀಕ್ಷಿಸಿದೆ
  • ಸರ್ಕಾರದ ಅನೇಕ ಇಲಾಖೆಗಳಲ್ಲಿ ಸಕ್ರಿಯರಾಗಿ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡ್ತಿದ್ದರು
  • ನನ್ನ ರಾಜಕೀಯ ಜೀವನದಲ್ಲಿ ಓರ್ವ ಯುವನಟ ಅಗಲಿದಾಗ ಇಷ್ಟೊಂದು ಕೋಟಿಗಟ್ಟಲೆ ಜನ ಕಣ್ಣೀರು ಹಾಕಿದ್ದನ್ನು ನಾನು ನೋಡಿರಲಿಲ್ಲ
  • ಅವರು ಇಷ್ಟು ಬೇಗ ನಮ್ಮನ್ನು ಅಗಲಬಾರದಿತ್ತು, ಆದರೆ ವಿಧಿಯಾಟ ಅವರು ನಮ್ಮೊಂದಿಗಿಲ್ಲ
  • ಆದರೆ ಅವರ ಬದುಕಿನ ಆದರ್ಶ ಯುವ ಜನಾಂಗಕ್ಕೆ ದಾರಿದೀಪ, ದೊಡ್ಡ ಹೆಜ್ಜೆಗುರುತನ್ನು ಬಿಟ್ಟುಹೋಗಿದ್ದಾರೆ
  • ಅವರ ನಯ, ವಿನಯ, ಸರಳತೆ, ಸಮಾಜ ಸೇವೆಯನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ನಾವು ಸಲ್ಲಿಸುವ ಗೌರವ
  • ಸರ್ಕಾರ ಮರಣೋತ್ತರ 'ಕರ್ನಾಟಕ ರತ್ನ' ಕೊಡಲು ನಿರ್ಧರಿಸಿರುವುದಕ್ಕೆ ಅಭಿನಂದನೆ  
  • ವಿಪಕ್ಷ ನಾಯಕ ಸಿದ್ದರಾಮಯ್ಯ ನುಡಿ ನಮನ
  • ಇದೇ ವೇಳೆ ಪುನೀತ್​ಗೆ ಮರಣೋತ್ತರ  ಪದ್ಮಶ್ರೀ ಪ್ರಶಸ್ತಿ ನೀಡಲು ಒತ್ತಾಯಿಸಿದರು

17:09 November 16

ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ 'ನುಡಿ ನಮನ'

  • ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ 'ಪುನೀತ್​ ನಮನ' ಕಾರ್ಯಕ್ರಮ  
  • ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ​ ಮಾತು
  • ಅಪ್ಪು ನಿಧನದಿಂದ ಕರುನಾಡಿಗೆ ದೊಡ್ಡ ಆಘಾತವಾಗಿದೆ
  • ಅವರ ಹಲವು ಚಿತ್ರಗಳನ್ನು ನೋಡಿರುವೆ
  • ದೇಶದ ದೊಡ್ಡ ದೊಡ್ಡ ಗಣ್ಯರು ನೋವು ತೋಡಿಕೊಂಡಿದ್ದಾರೆ  
  • ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ದೇವರು ನೋವು ಭರಿಸುವ ಶಕ್ತಿ ನೀಡಲಿ
  • ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ​ ಭಾವುಕ ನುಡಿ

16:57 November 16

'ಗೊಂಬೆಯ ಮಾಡಿ ಪ್ರಾಣವ ನೀಡಿ' ಹಾಡಿನ ಮೂಲಕ 'ಗೀತ ನಮನ' ಸಲ್ಲಿಸಿದ ಸಚಿವ ಮುನಿರತ್ನ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ 'ಪುನೀತ್​ ನಮನ' ಕಾರ್ಯಕ್ರಮದಲ್ಲಿ 'ಗೊಂಬೆಯ ಮಾಡಿ ಪ್ರಾಣವ ನೀಡಿ' ಹಾಡಿನ ಮೂಲಕ ಅಪ್ಪುಗೆ 'ಗೀತ ನಮನ' ಸಲ್ಲಿಸಲಾಯಿತು. ಸಚಿವ ಮುನಿರತ್ನ ಅವರು ಈ ಗೀತೆಯನ್ನು ನಿರ್ಮಾಣ ಮಾಡಿದ್ದಾರೆ. 'ಪುನೀತ್​ ನಮನ' ಕಾರ್ಯಕ್ರಮದಲ್ಲಿ ಡಾ.ರಾಜ್​ಕುಮಾರ್​ ಮತ್ತು ಪಾರ್ವತಮ್ಮ ರಾಜ್​ಕುಮಾರ್​ ನಡೆಸುತ್ತಿದ್ದ ಶಕ್ತಿಧಾಮ ಆಶ್ರಮದ ಮಕ್ಕಳು ಭಾಗಿಯಾಗಿದ್ದಾರೆ. 

16:56 November 16

ಅಪ್ಪು ಅಗಲಿದ ಸುದ್ದಿ ನಮ್ಮ ಅರಮನೆಗೆ ತುಂಬಾ ದುಃಖ ತಂದಿತು: ರಾಜವಂಶಸ್ಥ ಯದುವೀರ್​ ಒಡೆಯರ್​

  • ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ 'ಪುನೀತ್​ ನಮನ' ಕಾರ್ಯಕ್ರಮ  
  • ಮೈಸೂರು ರಾಜವಂಶಸ್ಥರಾದ ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್​ ಮಾತು
  • ಅಪ್ಪು ಅಗಲಿದ ಸುದ್ದಿ ನಮ್ಮ ಅರಮನೆಗೆ ತುಂಬಾ ದುಃಖ ತಂದಿತು
  • ಪುನೀತ್​ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ತಾಯಿ ಚಾಮುಂಡೇಶ್ವರಿಯಲ್ಲಿಕೋರುತ್ತೇನೆ
  • ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ

16:43 November 16

ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸ್ಮಾರಕ ನಿರ್ಮಾಣ

  • ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಪುನೀತ್​ ನಮನ' ಕಾರ್ಯಕ್ರಮ  
  • ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ  
  • ನೆರೆದಿರುವ ಗಣ್ಯರಿಗೆ ನಮಸ್ಕಾರ ಸಲ್ಲಿಸುತ್ತಾ ಮಾತು ಆರಂಭಿಸಿದ ಸಿಎಂ
  • ಇಂತಹ ಕಾರ್ಯಕ್ರಮ ಮಾಡುತ್ತೇವೆ ಅಂದುಕೊಂಡಿರಲಿಲ್ಲ
  • ಅಪ್ಪು ಬಾಲ್ಯದಲ್ಲಿಯೇ ಪ್ರತಿಭೆಯ ಚಿಲುಮೆ ಹೊಂದಿದ್ದವರು
  • ಬಾಲ್ಯದಲ್ಲಿಯೇ ಅಭಿನಯದ ಮೂಲಕ ರಾಷ್ಟ್ರಪ್ರಶಸ್ತಿ ಪಡೆದುಕೊಂಡ ನಟ ಅಪ್ಪು
  • ನಾನು ಸಹ ಬಾಲ್ಯದಲ್ಲಿ ಅವರು ನಟಿಸಿದ ಸಿನಿಮಾಗಳನ್ನು ನೋಡುತ್ತಿದ್ದೆ
  • ಅವರ ಅಭಿನಯ, ಯಶಸ್ಸಿಗೆ ಅವರ ನಡೆ, ನುಡಿ, ವಿನಯ ಕಿರೀಟ ಪ್ರಾಯವಾಗಿತ್ತು
  • ಡಾ.ರಾಜ್​ಕುಮಾರ್​ ಅವರಲ್ಲಿದ್ದ ಆ ನಡೆ, ನುಡಿಯನ್ನು ಅವರಲ್ಲಿ ಕಾಣುತ್ತಿದ್ದೆವು 
  • ಇದೆಲ್ಲದರ ನಡುವೆ ಅವರ ಪರೋಪಕಾರಿ ಕೆಲಸಗಳು ಸಮಾಜಕ್ಕೆ ಮಾದರಿ
  • ಶರಣರನ್ನು ಮರಣದಲ್ಲಿ ನೋಡಿ ಎಂದು ನಮ್ಮ ಹಿರಿಯರು ಹೇಳ್ತಿದ್ರು
  • ಅಪ್ಪು ನಮ್ಮನ್ನು ಅಗಲಿದ ಮೇಲೆ ಪ್ರತಿಯೊಬ್ಬರು ಆಡಿದ ಮಾತು ಮುತ್ತುಗಳು
  • ಅವರ ಪರಿಪೂರ್ಣ ವ್ಯಕ್ತಿತ್ವ ಇಡೀ ಕನ್ನಡನಾಡಿಗೆ ಪರಿಚಯವಾಗಿದೆ
  • ಅವರ ಅಗಲಿಕೆ ಸುದ್ದಿಯನ್ನು ನಾನು ಅರ್ಧ ಗಂಟೆಯ ವರೆಗೂ ನಂಬಿರಲಿಲ್ಲ
  • ಆದರೆ ಅಂದು ಕರುನಾಡಿಗೆ ಆದ ದುರ್ಘಟನೆ ನಾವೆಂದೂ ಮರೆಯಲು ಸಾಧ್ಯವಿಲ್ಲ
  • ರಾಜ್​ಕುಮಾರ್​ ಕುಟುಂಬ, ಅಭಿಮಾನಿಗಳು, ಸರ್ಕಾರದ ಅಧಿಕಾರಿಗಳಿಗೆ ಧನ್ಯವಾದಗಳು
  • ಪುನೀತ್​ ರಾಜ್​ಕುಮಾರ್​ ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಿಸುತ್ತೇನೆ  
  • 'ಪುನೀತ್​ ನಮನ' ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್​ ಬೊಮ್ಮಾಯಿ ಮಾತು
  • ಇದೇ ವೇಳೆ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸ್ಮಾರಕ ನಿರ್ಮಾಣ ಮಾಡುವುದಾಗಿ ಸಿಎಂ ಘೋಷಿಸಿದರು

16:33 November 16

ಪುನೀತ್​ ರಾಜ್​ಕುಮಾರ್​ ಭಾವಚಿತ್ರಕ್ಕೆ ಪುಷ್ಟಾರ್ಪಣೆ ಮಾಡುವ ಮೂಲಕ 'ಪುಷ್ಪ ನಮನ'

ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಹಿರಿಯ ನಟಿ ಉಮಾಶ್ರೀ, ನಟಿ ತಾರಾ, ಅಪ್ಪು ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​, ಪುತ್ರಿ ವಂದಿತಾ, ರಾಜವಂಶಸ್ಥರಾದ ಯದುವೀರ್​ ಒಡೆಯರ್, ನಟ ದರ್ಶನ್​, ತೆಲುಗು ನಟ ವಿಶಾಲ್​​ ಸೇರಿದಂತೆ ಕಾರ್ಯಕ್ರಮದ ವೇದಿಕೆಯ ಪ್ರಥಮ ಸಾಲಿನಲ್ಲಿದ್ದ ಸಿನಿರಂಗದ ಹಾಗೂ ರಾಜಕೀಯ ಗಣ್ಯರು ಪುನೀತ್​ ರಾಜ್​ಕುಮಾರ್​ ಭಾವಚಿತ್ರಕ್ಕೆ 'ಪುಷ್ಪ ನಮನ' ಸಲ್ಲಿಸಿದರು. 

16:24 November 16

ಮೌನಾಚರಣೆ ಮೂಲಕ ಪುನೀತ್​ ರಾಜ್​ಕುಮಾರ್​ ಅವರಿಗೆ ಶ್ರದ್ಧಾಂಜಲಿ

'ದೀಪ ನಮನ' ಹಾಗೂ 'ಗೀತ ನಮನ'ದ ಬಳಿಕ 1 ನಿ. ಮೌನಾಚರಣೆ ಮೂಲಕ ಪುನೀತ್​ ರಾಜ್​ಕುಮಾರ್​ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಒಂದು ನಿಮಿಷದ ಬಳಿಕ ಪರದೆಯ ಮೇಲೆ ಬಂದ ಅಪ್ಪು ಆಡಿದ ಮಾತು, ಕಾರ್ಯಕ್ರಮದಲ್ಲಿ ನೆರೆದವರನ್ನು ಭಾವುಕರನ್ನಾಗಿಸಿತು. 

16:23 November 16

'ಮುತ್ತುರಾಜ ಹೆತ್ತ ಮುತ್ತೇ ಎತ್ತ ಹೋದೆಯೋ' - ಅಗಲಿದ ಅಪ್ಪುಗೆ 'ಗೀತ ನಮನ'

ಪುನೀತ್​ ರಾಜ್​ಕುಮಾರ್​ ಅಗಲಿಕೆಯ ನೋವಿನಲ್ಲಿ 'ಮುತ್ತುರಾಜ ಹೆತ್ತ ಮುತ್ತೇ ಎತ್ತ ಹೋದೆಯೋ'  ಎಂಬ ಹಾಡನ್ನು ಸಾಹಿತಿ ನಾಗೇಂದ್ರ ಪ್ರಸಾದ್​ ರಚಿಸಿದ್ದಾರೆ. ಇದಕ್ಕೆ ಗಾಯಕ ವಿಜಯ್​ ಪ್ರಕಾಶ್​ ಈ ಹಾಡನ್ನು ಹಾಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ನಡೆಯುತ್ತಿರುವ 'ಪುನೀತ್​ ನಮನ' ಕಾರ್ಯಕ್ರಮದಲ್ಲಿ ಈ ಹಾಡು ಪ್ಲೇ ಮಾಡುವ ಮೂಲಕ ಅಪ್ಪುಗೆ 'ಗೀತ ನಮನ' ಸಲ್ಲಿಸಲಾಯಿತು. 

16:17 November 16

'ಪರಮಾತ್ಮ'ನಿಗೆ 'ದೀಪ ನಮನ'ದ ಜತೆ ಜತೆಗೆ 'ಗೀತ ನಮನ'

ಮೊಂಬತ್ತಿ ಬೆಳಗಿಸುವ ಮೂಲಕ ಅಗಲಿದ ಅಪ್ಪುಗೆ ಶ್ರದ್ಧಾಂಜಲಿ

16:10 November 16

ನಟ ಪುನೀತ್​ ಜೀವನ ಬಿಂಬಿಸುವ ಕಿರುಚಿತ್ರ ಪ್ರದರ್ಶನ

  • ಬೆಂಗಳೂರಿನಲ್ಲಿ 'ಪುನೀತ್​ ನಮನ' ಕಾರ್ಯಕ್ರಮ
  • ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಕಾರ್ಯಕ್ರಮ
  • ನಟ ಪುನೀತ್​ ಜೀವನ ಬಿಂಬಿಸುವ ಕಿರುಚಿತ್ರ ಪ್ರದರ್ಶನ
  • ಕಿರುಚಿತ್ರಕ್ಕೆ ನಟ ಸುದೀಪ್​ ಹಿನ್ನೆಲೆ ಧ್ವನಿ

15:56 November 16

'ಪುನೀತ್​ ನಮನ' ಕಾರ್ಯಕ್ರಮಕ್ಕೆ ತಮಿಳು ನಟ ವಿಶಾಲ್ ಆಗಮನ

ಬೆಂಗಳೂರಿನಲ್ಲಿ 'ಪುನೀತ್​ ನಮನ' ಕಾರ್ಯಕ್ರಮ ಆರಂಭವಾಗಿದೆ. ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಕಾರ್ಯಕ್ರಮ ಆರಂಭವಾಗಿದೆ. ಇದೀಗ ತಮಿಳು ನಟ ವಿಶಾಲ್ ಆಗಮಿಸಿದ್ದು, ಪುನೀತ್​ ಮಾಡಿದ ಸಮಾಜ ಸೇವೆ ನೆನೆದು ಭಾವುಕರಾದರು. 

15:46 November 16

ಕಣ್ಣೀರಿಟ್ಟ ಅಪ್ಪು ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್

ಕಣ್ಣೀರಿಟ್ಟ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್
ಕಣ್ಣೀರಿಟ್ಟ ಅಶ್ವಿನಿ ಪುನೀತ್​ ರಾಜ್​ಕುಮಾರ್

'ಪುನೀತ್​ ನಮನ' ಕಾರ್ಯಕ್ರಮಕ್ಕೆ ಅಪ್ಪು ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್ ಮತ್ತು ಪುತ್ರಿ ವಂದಿತಾ​ ಆಗಮಿಸಿದ್ದಾರೆ. ಕಾರ್ಯಕ್ರಮದ ವೇದಿಕೆಯ ಮುಂದೆ ಆಸೀನರಾದ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್ ಕಣ್ಣೀರಿಟ್ಟು, ಭಾವುಕರಾದರು. 

15:38 November 16

'ಪುನೀತ್​ ನಮನ' ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮನ

ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮನ
ರಾಜವಶಂಸ್ಥ ಯದುವೀರ್​, ಸಚಿವ ಮುನಿರತ್ನ, ಸಿಎಂ ಬಸವರಾಜ ಬೊಮ್ಮಾಯಿ

 'ಪುನೀತ್​ ನಮನ' ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ್ದಾರೆ. ನಿರೂಪಕಿ ಅಪರ್ಣಾ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಹಿರಿಯ ನಟಿ ಪ್ರೇಮಾ, ಹಿರಿಯ ನಟ ರವಿಚಂದ್ರನ್ ಸೇರಿದಂತೆ ಗಣ್ಯರು ಆಗಮಿಸಿದ್ದಾರೆ. 

15:33 November 16

ಅರಮನೆ ಮೈದಾನದ ಸುತ್ತ ಬಿಗಿ ಪೊಲೀಸ್​ ಬಂದೋಬಸ್ತ್

ಬಿಗಿ ಪೊಲೀಸ್​ ಬಂದೋಬಸ್ತ್​
ಬಿಗಿ ಪೊಲೀಸ್​ ಬಂದೋಬಸ್ತ್​

 'ಪುನೀತ್​ ನಮನ' ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದ ಸುತ್ತ ಬಿಗಿ ಪೊಲೀಸ್​ ಬಂದೋಬಸ್ತ್​ ವ್ಯವಸ್ಥೆ ಕಲ್ಪಿಸಲಾಗಿದೆ. ಗಣ್ಯರಿಗೆ ತಪಾಸಣೆ ಬಳಿಕವೇ ಕಾರ್ಯಕ್ರಮಕ್ಕೆ ಎಂಟ್ರಿ ನೀಡಲಾಗುತ್ತಿದೆ. 

15:28 November 16

ಮಾಜಿ ಸಿಎಂ ಯಡಿಯೂರಪ್ಪ, ರಾಜವಂಶಸ್ಥ ಯದುವೀರ್​ ಒಡೆಯರ್​ ಆಗಮನ

ಮಾಜಿ ಸಿಎಂ ಯಡಿಯೂರಪ್ಪ
ಮಾಜಿ ಸಿಎಂ ಯಡಿಯೂರಪ್ಪ

ಇನ್ನೇನು ಕೆಲವೇ ಕ್ಷಣಗಳಲ್ಲಿ 'ಪುನೀತ್​ ನಮನ' ಕಾರ್ಯಕ್ರಮ ಆರಂಭವಾಗಲಿದ್ದು, ಈಗಾಗಲೇ ಕುಟುಂಬ ಸದಸ್ಯರು ಸೇರಿದಂತೆ ಹಲವಾರು ಗಣ್ಯಾತಿ ಗಣ್ಯರು ಆಗಮಿಸುತ್ತಿದ್ದಾರೆ. ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ, ಮೈಸೂರು ರಾಜವಂಶಸ್ಥ ಯದುವೀರ್​ ಒಡೆಯರ್​ ಆಗಮಿಸಿದ್ದಾರೆ. ದಕ್ಷಿಣ ಭಾರತದ ಸಿನಿರಂಗದ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ. 

15:17 November 16

ದೀಪಾಂಜಲಿ, ಪುಷ್ಪಾಂಜಲಿ ಮತ್ತು ಗೀತಾಂಜಲಿ ಮೂಲಕ ಅಪ್ಪುಗೆ ನಮನ

ಜಗ್ಗೇಶ್ ಭಾಗಿ
ಕಾರ್ಯಕ್ರಮದಲ್ಲಿ ಹಿರಿಯ ನಟ ಜಗ್ಗೇಶ್ ಭಾಗಿ

ಪುನೀತ್ ರಾಜ್​ಕುಮಾರ್ ಅವರಿಗೆ ನಮನ ಕಾರ್ಯಕ್ರಮವನ್ನು ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಗಾಯಿತ್ರಿ ವಿಹಾರ ಅಂಗಣದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚಿತ್ರರಂಗ ಹಾಗೂ ರಾಜಕೀಯ ರಂಗದ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಪುನೀತ್​ ಕುಟುಂಬ ಸದಸ್ಯರು ಸಹ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ದೀಪಾಂಜಲಿ, ಪುಷ್ಪಾಂಜಲಿ ಮತ್ತು ಗೀತಾಂಜಲಿ ಎಂಬ ಮೂರು ಕಾನ್ಸೆಪ್ಟ್​ನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

15:09 November 16

ಗಾಯಿತ್ರಿ ವಿಹಾರದತ್ತ ಗಣ್ಯರ ದಂಡು

ಚಿತ್ರರಂಗದ ಗಣ್ಯರು
ಚಿತ್ರರಂಗದ ಗಣ್ಯರು

ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಪುನೀತ್ ನಮನ' ಕಾರ್ಯಕ್ರಮ ನಡೆಯುತ್ತಿದ್ದು, ನಟ ಶಿವರಾಜ್​ಕುಮಾರ್ ಹಾಗೂ ಕುಟುಂಬದವರು​ ಆಗಮಿಸಿದ್ದಾರೆ. ಅಲ್ಲದೇ ಅಪ್ಪು ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್ ಮತ್ತು ಪುತ್ರಿ​ ಸಹ ಆಗಮಿಸಿದ್ದಾರೆ. ನಟಿ ಸುಧಾರಾಣಿ, ಗಾಯಕ ವಿಜಯ್​ ಪ್ರಕಾಶ್ ಸೇರಿದಂತೆ ಹಲವಾರು ಗಣ್ಯಾತಿ ಗಣ್ಯರು ಗಾಯಿತ್ರಿ ವಿಹಾರಕ್ಕೆ ಆಗಮಿಸುತ್ತಿದ್ದಾರೆ. 

14:40 November 16

ಪುನೀತ್​ ನುಡಿ ನಮನ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ

'ಪುನೀತ್ ನಮನ' ಕಾರ್ಯಕ್ರಮ
'ಪುನೀತ್ ನಮನ' ಕಾರ್ಯಕ್ರಮ

ಬೆಂಗಳೂರು : ಇತ್ತೀಚೆಗೆ ಹೃದಯಸ್ತಂಭನದಿಂದ ನಿಧನರಾದ ಪವರ್‌ಸ್ಟಾರ್ ಪುನೀತ್ ರಾಜ್​ಕುಮಾರ್ ಅವರಿಗೆ ಗೀತ ನಮನ ಕಾರ್ಯಕ್ರಮವನ್ನು ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಗಾಯಿತ್ರಿ ವಿಹಾರ ಅಂಗಣದಲ್ಲಿ ಸಕಲ ಸಿದ್ಧತೆ ನಡೆದಿದೆ.  

ಕಾರ್ಯಕ್ರಮದಲ್ಲಿ ಭಾಗಿಯಾಗಲು ಅರಮನೆ ಮೈದಾನಕ್ಕೆ ಡಾ.ರಾಜ್‌ಕುಮಾರ್‌ ಕುಟುಂಬ, ಬಹುಭಾಷಾ ನಟ ಪ್ರಕಾಶ್ ರೈ, ನಟ ಶರಣ್ ಹಾಗು ನಿರ್ದೇಶಕ ತರುಣ್ ಸುಧೀರ್, ನಟ ಹಾಗು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಮತ್ತು ತಮಿಳು ನಟ ಶರತ್ ಕುಮಾರ್ ಆಗಮಿಸಿದ್ದಾರೆ.

Last Updated :Nov 16, 2021, 9:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.