ETV Bharat / sitara

ತಾಯಿಯ ಸಮಾಧಿ ಪಕ್ಕದಲ್ಲೇ ತಂದೆಯ ಅಂತ್ಯಕ್ರಿಯೆ ನಡೆಸಿದ ದುನಿಯಾ ವಿಜಯ್

author img

By

Published : Nov 19, 2021, 7:46 AM IST

duniya-vijay-father-funeral-in-anekal
ತಾಯಿಯ ಸಮಾಧಿ ಪಕ್ಕದಲ್ಲೇ ತಂದೆಯ ಅಂತ್ಯಕ್ರಿಯೆ ನಡೆಸಿದ ದುನಿಯಾ ವಿಜಯ್

ನಟ ದುನಿಯಾ ವಿಜಯ್ (Actor duniya vijay) ತಂದೆ ರುದ್ರಪ್ಪ (81) ಅವರ ಅಂತ್ಯಕ್ರಿಯೆಯು ಆನೇಕಲ್​ನ ಕುಂಬಾರನಹಳ್ಳಿಯಲ್ಲಿ ನಡೆಯಿತು.

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ನಿಧನರಾದ ನಟ ದುನಿಯಾ ವಿಜಯ್ (Actor duniya vijay) ತಂದೆ ರುದ್ರಪ್ಪ (81) ಅವರ ಅಂತ್ಯಕ್ರಿಯೆ ಆನೇಕಲ್​​​​​​ನ ಕುಂಬಾರನಹಳ್ಳಿಯಲ್ಲಿ ನೆರವೇರಿತು. ತಮ್ಮ ತಾಯಿಯ ಸಮಾಧಿ ಪಕ್ಕದಲ್ಲಿಯೇ ಅಂತ್ಯಕ್ರಿಯೆ ದುನಿಯಾ ವಿಜಿ ತಂದೆಯ ಅಂತ್ಯಸಂಸ್ಕಾರ (duniya vijay father funeral) ನಡೆಸಿದರು.

ತಂದೆಯ ಅಂತ್ಯಕ್ರಿಯೆ ನಡೆಸಿದ ದುನಿಯಾ ವಿಜಯ್

ರುದ್ರಪ್ಪ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ವಿಧಿವಶರಾಗಿದ್ದರು. ತೀವ್ರ ಅಸ್ವಸ್ಥರಾಗಿದ್ದ ಅವರನ್ನು 2 ದಿನದ ಹಿಂದೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ನಿಧನ ಹೊಂದಿದ್ದರು. ಕಳೆದ ಜುಲೈನಲ್ಲಿ ವಿಜಯ್​ ಅವರ ತಾಯಿ ನಾರಾಯಣಮ್ಮ ಕೂಡ ಕೊನೆಯುಸಿರೆಳೆದಿದ್ದರು.

duniya-vijay-father-funeral-in-anekal
ದುನಿಯಾ ವಿಜಯ್ ತಂದೆ-ತಾಯಿ

ಮೂಲತಃ ಆನೇಕಲ್​ನ(duniya vijay father funeral in Anekal) ಕುಂಬಾರನಹಳ್ಳಿಯವರೇ ಆದ ರುದ್ರಪ್ಪರ ಅಂತಿಮ ಯಾತ್ರೆ ವೇಳೆ ಮಳೆ ಅಡ್ಡಿಯುಂಟುಮಾಡಿತು. ದೂರದ ಸಂಬಂಧಿಕರಿಗೆ ಅಂತ್ಯಕ್ರಿಯೆಯು ಶುಕ್ರವಾರ ನಡೆಯಲಿದೆ ಎಂಬ ತಪ್ಪು ಮಾಹಿತಿ ಹಿನ್ನೆಲೆ ಅಂತಿಮ ದರ್ಶನ ಸಾಧ್ಯವಾಗಲಿಲ್ಲ.

ಇದನ್ನೂ ಓದಿ: ಭಾರಿ ಮಳೆ ಮುನ್ಸೂಚನೆ; ರಾಜ್ಯದ 7 ಜಿಲ್ಲೆಗಳಲ್ಲಿ ಇಂದು, ನಾಳೆ ಶಾಲಾ-ಕಾಲೇಜುಗಳಿಗೆ ರಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.