ETV Bharat / science-and-technology

ರಾಜಸ್ಥಾನದಲ್ಲಿ 'ಆಕಾಶ್'​ ಕ್ಷಿಪಣಿ ಪರೀಕ್ಷೆ ಯಶಸ್ವಿ

author img

By

Published : Mar 26, 2021, 2:30 PM IST

India tests new generation Akash-NG missile
ರಾಜಸ್ಥಾನದಲ್ಲಿ 'ಆಕಾಶ್'​ ಕ್ಷಿಪಣಿ ಪರೀಕ್ಷೆ ಯಶಸ್ವಿ

ರಾಜಸ್ಥಾನದ ಜೈಸಲ್ಮೇರ್​ನಲ್ಲಿ ಹೊಸ ತಲೆಮಾರಿನ ಆಕಾಶ್ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ.

ಜೈಸಲ್ಮೇರ್ (ರಾಜಸ್ಥಾನ): ಭಾರತೀಯ ಸೇನೆ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹೊಸ ತಲೆಮಾರಿನ ಆಕಾಶ್ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.

ಆತ್ಮನಿರ್ಭರ ಭಾರತದ ಮಹತ್ತರ ಮೈಲಿಗಲ್ಲು, ದೇಶೀ ನಿರ್ಮಿತ ಕ್ಷಿಪಣಿ ಇದಾಗಿದ್ದು, ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಪೋಖ್ರಾನ್ ಪ್ರದೇಶದಲ್ಲಿ ಮಂಗಳವಾರ ಪರೀಕ್ಷೆ ನಡೆಸಲಾಗಿದೆ. ಈ ಕ್ಷಿಪಣಿಯನ್ನು ಭಾರತೀಯ ವಾಯುಪಡೆ (ಐಎಎಫ್) ಬಳಸಲಿದೆ. 40 ಕಿ.ಮೀ ದೂರದಲ್ಲೇ ದೊಡ್ಡ ವೈಮಾನಿಕ ದಾಳಿಯನ್ನು ತಡೆಯುವ ಸಾಮರ್ಥ್ಯದೊಂದಿಗೆ ಇದನ್ನು ನಿರ್ಮಿಸಲಾಗಿದೆ.

ರಾಜಸ್ಥಾನದಲ್ಲಿ 'ಆಕಾಶ್'​ ಕ್ಷಿಪಣಿ ಪರೀಕ್ಷೆ ಯಶಸ್ವಿ

ಇದನ್ನೂ ಓದಿ: ಬಾಂಗ್ಲಾದೇಶಕ್ಕೆ 50ನೇ ವರ್ಷದ ಸ್ವಾತಂತ್ರ್ಯ ಸಂಭ್ರಮ.. ‘ಸ್ವರ್ಣ ಅಧ್ಯಾಯ’ ಆರಂಭಕ್ಕೆ ಭಾರತ ಸಹಾಯ ಹಸ್ತ

ಶತ್ರು ಸೈನ್ಯದ ಅತಿ ವೇಗದ ವೈಮಾನಿಕ ದಾಳಿಯ ಗುರಿಯನ್ನು ಇದು ನಾಶಪಡಿಸುತ್ತದೆ. ವಾಯು ಕ್ಷಿಪಣಿ ವ್ಯವಸ್ಥೆಯಲ್ಲಿ ಅತ್ಯಂತ ಪ್ರಬಲವಾದ ಮತ್ತೊಂದು ಮೈಲಿಗಲ್ಲು ಇದಾಗಿದೆ ಎಂದು ಭಾರತೀಯ ಸೈನ್ಯದ ಸೌತ್ ವೆಸ್ಟರ್ನ್ ಕಮಾಂಡ್‌ ತನ್ನ ಅಧಿಕೃತ ಟ್ವಿಟರ್​ನಲ್ಲಿ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.