ETV Bharat / international

ಪ್ರವಾಸಿಗರ ಸ್ವರ್ಗ ಥಾಯ್ಲೆಂಡ್‌ನಲ್ಲಿಂದು ಸಾರ್ವತ್ರಿಕ ಚುನಾವಣೆ: ಯುವ ಮತದಾರರಿಂದ ಬದಲಾವಣೆಗೆ ಕರೆ

author img

By

Published : May 14, 2023, 11:59 AM IST

ಥಾಯ್ಲೆಂಡ್​ನಲ್ಲಿ ಇಂದು ಮತದಾನ ನಡೆಯುತ್ತಿದೆ. ಮಿಲಿಟರಿ ಪ್ರಾಬಲ್ಯದ ಸಾಮ್ರಾಜ್ಯದಲ್ಲಿ ಬದಲಾವಣೆಗೆ ಯುವ ಮತದಾರರು ಕರೆ ಕೊಟ್ಟಿದ್ಧಾರೆ.

Thailand elections
ಥಾಯ್ಲೆಂಡ್ ಚುನಾವಣೆ

ಬ್ಯಾಂಕಾಕ್ (ಥಾಯ್ಲೆಂಡ್): ಬಿಗಿ ಭದ್ರತೆಯ ನಡುವೆ ಥಾಯ್ಲೆಂಡ್‌ನ ಸಾರ್ವತ್ರಿಕ ಚುನಾವಣೆಗೆ ಇಂದು ಮತದಾನ ಆರಂಭಗೊಂಡಿದೆ. ಸುಮಾರು ಒಂದು ದಶಕದ ಅಧಿಕಾರದ ನಂತರ ಸೇನೆ ಬೆಂಬಲಿತ ಪ್ರಧಾನಿ ಪ್ರಯುತ್ ಚಾನ್-ಒ-ಚಾ ಅವರ ಸರ್ಕಾರವನ್ನು ವಿರೋಧ ಪಕ್ಷಗಳು ಸೋಲಿಸಲು ಮುಂದಾಗಿವೆ. ಯುವ ಮತದಾರರು ಮಿಲಿಟರಿ ಪ್ರಾಬಲ್ಯದ ಸಾಮ್ರಾಜ್ಯದಲ್ಲಿ ಬದಲಾವಣೆಗೆ ಮನವಿ ನೀಡಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಬದಲಾವಣೆಗಾಗಿ ಹಂಬಲಿಸುವ ಯುವ ಪೀಳಿಗೆ ಹಾಗೂ ಸಂಪ್ರದಾಯವಾದಿ, ರಾಜಪ್ರಭುತ್ವದ ಸ್ಥಾಪನೆಯ ನಡುವಿನ ಘರ್ಷಣೆ ನಡುವೆ ಭಾನುವಾರ ಬೆಳಗ್ಗೆ 8 ಗಂಟೆಗೆ (01:00 GMT) 95,000 ಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದೆ. ಸಂಜೆ 5 ಗಂಟೆಗೆ (10:00 GMT) ಮುಕ್ತಾಯವಾಗಲಿದೆ. ಸುಮಾರು 52 ಮಿಲಿಯನ್ ಮತದಾರರು ಮುಂದಿನ ನಾಲ್ಕು ವರ್ಷಗಳವರೆಗೆ 500 ಸ್ಥಾನಗಳ ಹೊಸ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸದಸ್ಯರನ್ನು ಆಯ್ಕೆ ಮಾಡುತ್ತಾರೆ.

ಬಿಲಿಯನೇರ್ ಮಾಜಿ ಪ್ರಧಾನಿ ತಕ್ಸಿನ್ ಶಿನವತ್ರಾ ಅವರ ಪುತ್ರಿ ನಾಯಕತ್ವದ ಪ್ರಮುಖ ವಿರೋಧ ಪಕ್ಷ 'ಫ್ಯೂ ಥಾಯ್' ಅಂತಿಮ ಅಭಿಪ್ರಾಯ ಸಂಗ್ರಹಣೆಯಲ್ಲಿ ಮುಂದಿದೆ. ಆದರೆ ಮತಪೆಟ್ಟಿಗೆಯಲ್ಲಿ ವಿಜಯ ಯಾರ ಪಾಲಾಗಬಹುದು? ಎಂಬ ನಿರೀಕ್ಷೆ ಹುಟ್ಟುಹಾಕಿದೆ. ಶುಕ್ರವಾರ ಫ್ಯೂ ಥಾಯ್‌ನ ಮುಕ್ತಾಯದ ರ್ಯಾಲಿಯಲ್ಲಿ ಮುಖ್ಯ ಅಭ್ಯರ್ಥಿ ಪೇಟೊಂಗ್ಟಾರ್ನ್ ಶಿನಾವತ್ರಾ ಅವರು, "ಥಾಯ್ಲೆಂಡ್ ಜುಂಟಾ ಆಡಳಿತದಿಂದ ಪ್ರಜಾಪ್ರಭುತ್ವದ ಆಡಳಿತಕ್ಕೆ ಬದಲಾಗುವ ಐತಿಹಾಸಿಕ ದಿನ" ಎಂದು ಹೇಳಿದ್ದರು.

ಕಳೆದ ಭಾನುವಾರದ ಆರಂಭಿಕ ಸುತ್ತಿನ ಮತದಾನದಲ್ಲಿ ಶೇ.90 ರಷ್ಟು ಮತದಾನವು ಬದಲಾವಣೆಯನ್ನು ಬಯಸುತ್ತಿರುವ ಮತದಾರರನ್ನು ಸೂಚಿಸುತ್ತದೆ. ಹೊಸ ಪ್ರಧಾನ ಮಂತ್ರಿಯನ್ನು 500 ಚುನಾಯಿತ ಸಂಸದರು ಮತ್ತು 250 ಸೆನೆಟ್ ಸದಸ್ಯರು ಪ್ರಯುತ್ ಅವರ ಜುಂಟಾದಿಂದ ನೇಮಕ ಮಾಡುತ್ತಾರೆ. 2019ರ ವಿವಾದಾತ್ಮಕ ಕೊನೆಯ ಚುನಾವಣೆಯಲ್ಲಿ, ಸಂಕೀರ್ಣ ಬಹು-ಪಕ್ಷೀಯ ಒಕ್ಕೂಟದ ಮುಖ್ಯಸ್ಥರಾಗಿ ಪ್ರಧಾನ ಮಂತ್ರಿಯಾಗಲು ಪ್ರಯುತ್ ಸೆನೆಟ್ ಬೆಂಬಲವನ್ನು ಪಡೆದಿದ್ದರು.

ಪ್ರಜಾಸತ್ತಾತ್ಮಕ ಮಿತ್ರ ಪಕ್ಷಗಳು ಮತ್ತು ಮಿಲಿಟರಿ ಪರ ಪಕ್ಷಗಳ ನಡುವೆ ಸಂಘರ್ಷ ನಡೆಯುತ್ತಿದೆ. ಈ ವರ್ಷದ ಚುನಾವಣೆಯಲ್ಲಿ ಯುವ ಪೀಳಿಗೆಯ ನೇತೃತ್ವದ ಹೋರಾಟವು ಥಾಯ್ಲೆಂಡ್‌ನ ಉತ್ತಮ ಆಡಳಿತ ಬಯಸುತ್ತಾರೆ. ಎರಡು ಪಕ್ಷಗಳು (ಪಾಪ್ಯುಲಿಸ್ಟ್ ಫ್ಯೂ ಥಾಯ್ ಮತ್ತು ಪ್ರಗತಿಪರ ಮೂವ್ ಫಾರ್ವರ್ಡ್) ರಾಜಕೀಯದಿಂದ ಮಿಲಿಟರಿಯನ್ನು ತೆಗೆದು ಹಾಕುವ ಭರವಸೆಯೊಂದಿಗೆ ಪ್ರಚಾರ ನಡೆಸಿ ಚುನಾವಣೆ ಎದುರಿಸುತ್ತಿವೆ.

ಪ್ರತಿಪಕ್ಷ ಫೀಯು ಥಾಯ್​ನ ಪೇಟೊಂಗ್ಟಾರ್ನ್ ಶಿನವತ್ರಾ ಅವರು ಪಕ್ಷದ ಮೂವರು ಪ್ರಧಾನ ಮಂತ್ರಿ ಅಭ್ಯರ್ಥಿಗಳಲ್ಲಿ ಒಬ್ಬರು. ಇವರು ರಾಜವಂಶದ ಸದಸ್ಯರಾಗಿದ್ದಾರೆ. ಈ ಚುನಾವಣೆಯು ದುಡಿಯುವ ವರ್ಗದ ಮತದಾರರನ್ನು ಓಲೈಸುವ ಮತ್ತು ಕಳೆದ ಎರಡು ದಶಕಗಳಲ್ಲಿ ಪ್ರತಿ ಚುನಾವಣೆಯನ್ನು ಗೆಲ್ಲುವ ದಾಖಲೆಯೊಂದಿಗೆ ರಾಜಪ್ರಭುತ್ವದ-ಮಿಲಿಟರಿ ಸ್ಥಾಪನೆ ಮತ್ತು ಪ್ರಗತಿಪರ, ವ್ಯಾಪಾರ-ಪರ ವಿರೋಧದಿಂದ ಬೆಂಬಲಿತವಾಗಿರುವ ಪಕ್ಷಗಳ ನಡುವಿನ ದೀರ್ಘಾವಧಿಯ ಹೋರಾಟವಾಗಿದೆ.

ಬಿಲಿಯನೇರ್ ಥಾಕ್ಸಿನ್ ಶಿನಾವತ್ರಾ ಅವರೊಂದಿಗೆ ಸಂಪರ್ಕ ಹೊಂದಿದ ಪಕ್ಷವಾದ ಫ್ಯೂ ಥಾಯ್, ಹಿಂದಿನ ಚುನಾವಣೆಗಳಲ್ಲಿ ಮಾಡಿದಂತೆ ಅಭಿಪ್ರಾಯ ಸಂಗ್ರಹಗಳಲ್ಲಿ ಮುನ್ನಡೆ ಹೊಂದಿದೆ. ಮತ್ತೊಂದು ವಿರೋಧ ಪಕ್ಷವಾದ ಮೂವ್ ಫಾರ್ವರ್ಡ್ ಯುವ ಮತದಾರರನ್ನು ಸಜ್ಜುಗೊಳಿಸಲು ಪ್ರಯತ್ನಿಸುತ್ತಿದೆ. 2014ರಲ್ಲಿ ದಂಗೆಯಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಪ್ರಯುತ್ ಚಾನ್-ಓಚಾ ಅವರು ಥಾಯ್ಲೆಂಡ್‌ನ ದೀರ್ಘಾವಧಿಯ ಪ್ರಧಾನ ಮಂತ್ರಿಗಳಲ್ಲಿ ಒಬ್ಬರು.

"ರಾಜಪ್ರಭುತ್ವ ನಿಷೇಧಿತ ವಿಷಯವಾಗಿರುವುದರಿಂದ ಥಾಯ್ಲೆಂಡ್‌ನಲ್ಲಿ ಭೂಮಿ ಅಲುಗಾಡುತ್ತಿದೆ" ಎಂದು ಚುಲಾಂಗ್‌ಕಾರ್ನ್ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನಿ ಥಿಟಿನಾನ್ ಪೊಂಗ್‌ಸುಧೀರಕ್ ಹೇಳಿದ್ದಾರೆ. ಅದಕ್ಕಾಗಿಯೇ ಈ ಚುನಾವಣೆಯು ಇತರ ಚುನಾವಣೆಗಳಿಗಿಂತ ಭಿನ್ನ ಮತ್ತು ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಇದು ಥಾಯ್ಲೆಂಡ್‌ನ ಸಮಸ್ಯೆಗಳ ತಿರುಳಿಗೆ ಕಾರ್ಯಸೂಚಿ ಎಂದಿದ್ಧಾರೆ.

ಇದನ್ನೂ ಓದಿ: ಜಾತಿ ತಾರತಮ್ಯ ನಿಷೇಧ ಮಸೂದೆ ಅಂಗೀಕರಿಸಿದ ಕ್ಯಾಲಿಫೋರ್ನಿಯಾ ಸೆನೆಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.