ETV Bharat / international

ಒಳ ಹೋರಾಟ.. ಜರ್ಮನಿ, ಅಮೆರಿಕ ಬಳಿಕ ಬೆಲ್ಜಿಯಂನಿಂದ ಉಕ್ರೇನ್​ಗೆ ಶಸ್ತ್ರಾಸ್ತ್ರ ನೆರವು

author img

By

Published : Feb 28, 2022, 11:39 AM IST

european-union
ಶಸ್ತ್ರಾಸ್ತ್ರ ನೆರವು

ಯುದ್ಧದಲ್ಲಿ ರಷ್ಯಾದ ವಿರುದ್ಧ ಸಮರ್ಥವಾಗಿ ಹೋರಾಡಲು ಇಂತಹ ಫೈಟರ್​ ಜೆಟ್​ ವಿಮಾನಗಳು ನಮ್ಮ ಸೈನಿಕರಿಗೆ ಅಗತ್ಯವಿದೆ. ಇತರೆ ರಾಷ್ಟ್ರಗಳು ಶಕ್ತಿಶಾಲಿ ಜೆಟ್​ ಯುದ್ಧ ವಿಮಾನಗಳನ್ನು ಹೊಂದಿದ್ದು, ನೆರವು ನೀಡಬೇಕು ಎಂದು ಉಕ್ರೇನ್​ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಕೋರಿದ್ದಾರೆ..

ಬ್ರಸೆಲ್ಸ್​ (ಬೆಲ್ಜಿಯಂ) : ಉಕ್ರೇನ್​ ಅಧ್ಯಕ್ಷರ ಕೋರಿಕೆಯ ಮೇರೆಗೆ ಅಮೆರಿಕಾ, ಜರ್ಮನಿ ಸ್ಟಿಂಗರ್​ ಮಿಸೈಲ್​ ಸರಬರಾಜು ಮಾಡುವುದಕ್ಕೆ ಒಪ್ಪಿದ ಬಳಿಕ, ಇದೀಗ ಬೆಲ್ಜಿಯಂ ಕೂಡ ಉಕ್ರೇನ್​ಗೆ ತನ್ನ 'ಫೈಟರ್​ ಜೆಟ್'​ಗಳನ್ನು ರಷ್ಯಾ ವಿರುದ್ಧದ ಹೋರಾಟಕ್ಕೆ ಕಳುಹಿಸಲು ಮುಂದಾಗಿದೆ.

ರಷ್ಯಾ ವಿರುದ್ಧ ಉಕ್ರೇನ್​ ಹೋರಾಡಲು ನಮ್ಮ ಫೈಟರ್​ ಜೆಟ್​ಗಳನ್ನು ಕಳುಹಿಸುತ್ತಿದ್ದೇವೆ. ನಾವು ಮದ್ದು ಗುಂಡುಗಳನ್ನು ನೀಡುವ ಬಗ್ಗೆ ಹೇಳಿಲ್ಲ. ಉಕ್ರೇನ್​ ಯುದ್ಧಕ್ಕೆ ಹೋಗಲು ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ನೀಡಲು ಬಯಸಿದ್ದೇವೆ ಎಂದು ವಿದೇಶಾಂಗ ಇಲಾಖೆ ಮುಖ್ಯಸ್ಥ ಜೋಸೆಫ್​ ಬೊರೆಲ್​ ಹೇಳಿದ್ದಾರೆ.

ಯುದ್ಧದಲ್ಲಿ ರಷ್ಯಾದ ವಿರುದ್ಧ ಸಮರ್ಥವಾಗಿ ಹೋರಾಡಲು ಇಂತಹ ಫೈಟರ್​ ಜೆಟ್​ ವಿಮಾನಗಳು ನಮ್ಮ ಸೈನಿಕರಿಗೆ ಅಗತ್ಯವಿದೆ. ಇತರೆ ರಾಷ್ಟ್ರಗಳು ಶಕ್ತಿಶಾಲಿ ಜೆಟ್​ ಯುದ್ಧ ವಿಮಾನಗಳನ್ನು ಹೊಂದಿದ್ದು, ನೆರವು ನೀಡಬೇಕು ಎಂದು ಉಕ್ರೇನ್​ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಕೋರಿದ್ದಾರೆ.

ಓದಿ: ಉಕ್ರೇನ್​ ಮೇಲೆ ರಷ್ಯಾ ಬಾಂಬ್​ ಹಾಕ್ತಿದ್ರೆ, ರಷ್ಯಾ ಮೇಲೆ ವಿಶ್ವದ ರಾಷ್ಟ್ರಗಳಿಂದ ಆರ್ಥಿಕ ಯುದ್ಧ

ಓದಿ: ಉಕ್ರೇನ್‌ಗೆ ಅಮೆರಿಕ ಶಸ್ತ್ರಾಸ್ತ್ರ ನೆರವು; ವಿಮಾನ ಹೊಡೆದುರುಳಿಸುವ ಸ್ಟಿಂಗರ್‌ ಕ್ಷಿಪಣಿ ಪೂರೈಕೆಗೆ ಒಪ್ಪಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.