ETV Bharat / international

ಉಕ್ರೇನ್‌ಗೆ ಅಮೆರಿಕ ಶಸ್ತ್ರಾಸ್ತ್ರ ನೆರವು; ವಿಮಾನ ಹೊಡೆದುರುಳಿಸುವ ಸ್ಟಿಂಗರ್‌ ಕ್ಷಿಪಣಿ ಪೂರೈಕೆಗೆ ಒಪ್ಪಿಗೆ

author img

By

Published : Feb 28, 2022, 6:44 AM IST

ರಷ್ಯಾದ ಭೀಕರ ದಾಳಿಯಿಂದ ತನ್ನನ್ನು ಉಳಿಸಿಕೊಳ್ಳಲು ಶಸ್ತ್ರಾಸ್ತ್ರಗಳನ್ನು ಪೂರೈಸಿ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದ ಉಕ್ರೇನ್​ ಅಧ್ಯಕ್ಷರ ಮನವಿಯಂತೆ ಅಮೆರಿಕ ತನ್ನ ಶಕ್ತಿಶಾಲಿ ಸ್ಟಿಂಗರ್​ ಕ್ಷಿಪಣಿಗಳನ್ನು ಸರಬರಾಜು ಮಾಡಲು ಮುಂದಾಗಿದೆ. ಹೀಗಾಗಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುವ ಸಾಧ್ಯತೆ ಕಾಣುತ್ತಿದೆ.

Stingers
ಶಸ್ತ್ರಾಸ್ತ್ರ ನೆರವು

ವಾಷಿಂಗ್ಟನ್: ರಷ್ಯಾದ ಭೀಕರ ದಾಳಿಯಿಂದ ತನ್ನನ್ನು ಉಳಿಸಿಕೊಳ್ಳಲು ಶಸ್ತ್ರ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದ ಉಕ್ರೇನ್​ ಅಧ್ಯಕ್ಷರ ಮನವಿಯಂತೆ ಅಮೆರಿಕ ತನ್ನ ಶಕ್ತಿಶಾಲಿ ಸ್ಟಿಂಗರ್​ ಕ್ಷಿಪಣಿಗಳನ್ನು ಪೂರೈಕೆ ಮಾಡಲು ಮುಂದಾಗಿದೆ.

ಇದೇ ಮೊದಲ ಬಾರಿಗೆ ಅಮೆರಿಕ ಉಕ್ರೇನ್​ಗೆ ತನ್ನ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿದೆ. ಇದಕ್ಕೆ ನಿನ್ನೆಯೇ ಅಮೆರಿಕ ಸರ್ಕಾರ ಅನುಮೋದನೆ ನೀಡಿದೆ. ಎಷ್ಟು ಪ್ರಮಾಣದಲ್ಲಿ ಸ್ಟಿಂಗರ್​ ಕ್ಷಿಪಣಿಗಳನ್ನು ನೀಡುತ್ತಿದೆ ಎಂಬುದು ತಿಳಿದು ಬಂದಿಲ್ಲ.

ಈ ಮಧ್ಯೆ ಉಕ್ರೇನ್​ಗೆ 500 ಸ್ಟಿಂಗರ್​ ಕ್ಷಿಪಣಿಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವುದಾಗಿ ಜರ್ಮನಿ ಘೋಷಿಸಿದ್ದು, ಅಮೆರಿಕ ಕೂಡ ಈ ನಿರ್ಧಾರ ಕೈಗೊಂಡಿದೆ.

ಸ್ಟಿಂಗರ್​ ಕ್ಷಿಪಣಿಗಳೆಂದರೇನು? ಹೆಗಲ ಮೇಲೆ ಹೊತ್ತು ಸಿಡಿಸುವ ಈ ಹೈ-ಸ್ಪೀಡ್ ಸ್ಟಿಂಗರ್‌ಗಳು ಅತ್ಯಂತ ನಿಖರವಾಗಿರುತ್ತವೆ. ಹೆಲಿಕಾಪ್ಟರ್‌ಗಳು ಮತ್ತು ಇತರೆ ವಿಮಾನಗಳನ್ನು ಹೊಡೆದುರುಳಿಸಲು ಇದನ್ನು ಬಳಕೆ ಮಾಡಲಾಗುತ್ತದೆ. ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಉಕ್ರೇನ್​ ಅಧ್ಯಕ್ಷರು ಹೆಚ್ಚು ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಲು ಕೇಳಿಕೊಂಡಿದ್ದರು.

ಇದನ್ನೂ ಓದಿ: ರಷ್ಯಾದ ಪರಮಾಣು ಬೆದರಿಕೆಗೆ ಬೆಚ್ಚಿತಾ ಉಕ್ರೇನ್​ : ಕೊನೆಗೂ ಶಾಂತಿ ಮಾತುಕತೆಗೆ ಒಪ್ಪಿದ ಝೆಲೆನ್ಸ್ಕಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.