ETV Bharat / international

ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲೇ ಸ್ವೀಡನ್​ನ ಮೊದಲ ಮಹಿಳಾ ಪ್ರಧಾನಿ ರಾಜೀನಾಮೆ

author img

By

Published : Nov 25, 2021, 11:54 AM IST

Swedens first female PM resigns hours after appointment
Magdalena Andersson resign, ಅಧಿಕಾರ ಸ್ವೀಕರಿಸಿ ಕೆಲವೇ ಗಂಟೆಗಳಲ್ಲೇ ಸ್ವೀಡನ್​ನ ಮೊದಲ ಮಹಿಳಾ ಪ್ರಧಾನಿ ರಾಜೀನಾಮೆ

ಸ್ವೀಡನ್​​ನ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಮ್ಯಾಗ್ಡಲೇನಾ ಆಂಡರ್ಸನ್ ರಾಜಕೀಯ ಏರಿಳಿತಗಳಿಂದಾಗಿ ರಾಜೀನಾಮೆ ನೀಡಿದ್ದಾರೆ.

ಸ್ಟಾಕ್​ಹೋಂ, ಸ್ವೀಡನ್​​: ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದ್ದ ಸ್ವೀಡನ್​​ನ ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಮ್ಯಾಗ್ಡಲೇನಾ ಆಂಡರ್ಸನ್ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸ್ವೀಡನ್​ನ ಸಂಸತ್ ಆದ ರಿಕ್ಸ್​ಡಾಗ್​ನಲ್ಲಿ ಬಜೆಟ್ ಮಸೂದೆ ಅಂಗೀಕಾರಗೊಳ್ಳದ ಕಾರಣಕ್ಕೆ ಮ್ಯಾಗ್ಡಲೇನಾ ಆಂಡರ್ಸನ್ ಅವರ ಸಮ್ಮಿಶ್ರ ಸರ್ಕಾರದ ಪಕ್ಷವಾದ ಗ್ರೀನ್ ಪಾರ್ಟಿ ಬೆಂಬಲವನ್ನು ವಾಪಸ್ ಪಡೆದಿದೆ. ಇದರಿಂದ ಮ್ಯಾಗ್ಡಲೇನಾ ಆಂಡರ್ಸನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮ್ಯಾಗ್ಡಲೇನಾ ಆಂಡರ್ಸನ್ ಒಂದು ಪಕ್ಷವು ಬೆಂಬಲವನ್ನು ಹಿಂಪಡೆದರೆ, ಸಮ್ಮಿಶ್ರ ಸರ್ಕಾರವು ರಾಜೀನಾಮೆ ನೀಡಬೇಕು, ಪ್ರಧಾನಿಯಾಗಲು ಈಗಲೂ ಸಿದ್ಧವಿದ್ದೇನೆ ಎಂದಿದ್ದಾರೆ. ಗ್ರೀನ್ ಪಾರ್ಟಿ ಕೂಡಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಮುಂದಿನ ಮತದಾನದಲ್ಲಿ ಮ್ಯಾಗ್ಡಲೇನಾ ಆಂಡರ್ಸನ್ ಪರ ನಿಲ್ಲುವುದಾಗಿ ಹೇಳಿಕೊಂಡಿದೆ.

ಸ್ವೀಡನ್​ ಪಾರ್ಲಿಮೆಂಟ್​ನ ಸ್ಪೀಕರ್ ಆ್ಯಂಡಿಯಾಸ್ ನಾರ್ಲೆನ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ದೇಶದಲ್ಲಿರುವ ಎಂಟು ಪಕ್ಷಗಳ ಮುಖ್ಯಸ್ಥರನ್ನು ನಾಯಕರನ್ನು ಕರೆದು, ಈ ಸಂಬಂಧ ಚರ್ಚೆ ನಡೆಸುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ಸ್ವೀಡನ್‌ ಪ್ರಧಾನಿಯಾಗಿದ್ದ ಸ್ಟೀಫನ್ ಲ್ಫ್ವೆನ್ ರಾಜೀನಾಮೆ ನೀಡಿದ್ದ ಕಾರಣಕ್ಕೆ ಹಣಕಾಸು ಸಚಿವೆಯಾಗಿದ್ದ ಮ್ಯಾಗ್ಡಲೀನಾ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಈಗ ಗ್ರೀನ್ ಪಾರ್ಟಿ ಬೆಂಬಲ ವಾಪಸ್ ಪಡೆದ ಕಾರಣಕ್ಕೆ ಮ್ಯಾಗ್ಡಲೇನಾ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: 1 ಗಂಟೆ 25 ನಿಮಿಷಗಳ ಕಾಲ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದ ಕಮಲಾ ಹ್ಯಾರಿಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.