ETV Bharat / international

ಹೆಚ್ಚಿನ ಮಾಹಿತಿಯಿಲ್ಲದೇ ಕೊರೊನಾ ಮೂಲ ಪತ್ತೆ ಅಸಾಧ್ಯ: ಅಮೆರಿಕ ಇಂಟೆಲಿಜೆನ್ಸ್ ಕಮ್ಯೂನಿಟಿ

author img

By

Published : Aug 28, 2021, 6:59 AM IST

Origins of COVID may never be definitively identified: US Intelligence Community assessment
ಹೆಚ್ಚಿನ ಮಾಹಿತಿಯಿಲ್ಲದೇ ಕೊರೊನಾ ಮೂಲ ಪತ್ತೆ ಅಸಾಧ್ಯ: ಅಮೆರಿಕ ಇಂಟೆಲಿಜೆನ್ಸ್ ಕಮ್ಯೂನಿಟಿ

ಅಮೆರಿಕದ ಇಂಟೆಲಿಜೆನ್ಸ್​​ ಕಮ್ಯೂನಿಟಿ ಕೋವಿಡ್​ ಮೂಲವನ್ನು ಪತ್ತೆಹಚ್ಚಲು ಈಗ ವಿಫಲವಾಗಿದೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ತಜ್ಞರು, ಕೋವಿಡ್ ಮೂಲದ ಬಗ್ಗೆ ಖಚಿತವಾದ ವಿವರಣೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ವಾಷಿಂಗ್ಟನ್(ಅಮೆರಿಕ): ಹೆಚ್ಚಿನ ಮಾಹಿತಿ ಇಲ್ಲದೇ ಕೊರೊನಾ ವೈರಸ್​ನ ಮೂಲವನ್ನು ಖಚಿತವಾಗಿ ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂದು ಅಮೆರಿಕದ ಇಂಟೆಲಿಜೆನ್ಸ್ ಕಮ್ಯೂನಿಟಿ (ಐಸಿ) ಶುಕ್ರವಾರ ಮಾಹಿತಿ ನೀಡಿದೆ.

ಜಗತ್ತಿನ ಹಲವು ರಾಷ್ಟ್ರಗಳು ಕೋವಿಡ್ ವೈರಸ್​​ನ ಮೂಲವನ್ನು ಪತ್ತೆಹಚ್ಚುವಲ್ಲಿ ನಿರತವಾಗಿವೆ. ವುಹಾನ್ ವೈರಾಲಜಿ ಲ್ಯಾಬ್‌ನಲ್ಲಿ ವೈರಸ್​ ಸೋರಿಕೆಯಾಗಿ ಜಗತ್ತಿಗೆ ಹರಡಿರಬಹುದು ಎಂಬ ಊಹಾಪೋಹಗಳನ್ನು ಚೀನಾ ನಿರಾಕರಿಸಿದೆ.

ಮೇ ತಿಂಗಳಲ್ಲಿ, ಕೋವಿಡ್ ವೈರಸ್​ ಮೂಲವನ್ನು ಪತ್ತೆ ಹಚ್ಚಲು ಇಂಟೆಲಿಜೆನ್ಸ್ ಕಮ್ಯೂನಿಟಿಯನ್ನು ಜೋ ಬೈಡನ್ ನೇಮಿಸಿದ್ದರು. ಇದಲ್ಲದೇ 90 ದಿನಗಳಲ್ಲಿ ಈ ಕುರಿತು ವರದಿ ನೀಡುವಂತೆ 17 ಪ್ರಮುಖ ಗುಪ್ತಚರ ಸಂಸ್ಥೆಗಳಿಗೆ ಬೈಡನ್ ನಿರ್ದೇಶನ ನೀಡಿದ್ದರು.

ಅಮೆರಿಕದ ಇಂಟೆಲಿಜೆನ್ಸ್​​ ಕಮ್ಯೂನಿಟಿ ಕೋವಿಡ್​ ಮೂಲವನ್ನು ಪತ್ತೆಹಚ್ಚಲು ಈಗ ವಿಫಲವಾಗಿದೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ತಜ್ಞರು, ಕೋವಿಡ್ ಮೂಲದ ಬಗ್ಗೆ ಖಚಿತವಾದ ವಿವರಣೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ಕೆಲವು ದಿನಗಳ ಹಿಂದೆ ನೇಚರ್ ಜರ್ನಲ್‌ನಲ್ಲಿ ಪ್ರಕಟವಾದ ವರದಿಯಲ್ಲಿ ಚೀನಾದ ಅಧಿಕಾರಿಗಳು ಮೂಲ ಮಾಹಿತಿಯನ್ನು (ಕಚ್ಚಾ ಮಾಹಿತಿ) ಹಂಚಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಈ ವೇಳೆ ತುರ್ತು ಸಹಯೋಗದ ಅಗತ್ಯವಿದೆ. ಆದರೆ ಚೀನಾ ಕಚ್ಚಾ ಮಾಹಿತಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಂಶೋಧನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವಿಜ್ಞಾನಿಗಳು ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: ಒಂದೇ ದಿನ 1 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆ: ಹೊಸ ದಾಖಲೆ ಬರೆದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.