ETV Bharat / international

ಜ್ವಾಲಾಮುಖಿ ಆಯ್ತು.. ಈಗ ಟೊಂಗಾದಲ್ಲಿ 6.2 ತೀವ್ರತೆಯ ಭೂಕಂಪ

author img

By

Published : Jan 27, 2022, 2:21 PM IST

ಟೊಂಗಾದ ಪಂಗೈನಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ 6.2 ರಷ್ಟು ತೀವ್ರತೆ ದಾಖಲಾಗಿದೆ.

6.2 magnitude quake hits Pangai
ಟೊಂಗಾದಲ್ಲಿ 6.2 ತೀವ್ರತೆಯ ಭೂಕಂಪ

ಟೊಂಗಾ: ಇತ್ತೀಚೆಗಷ್ಟೇ ಭೀಕರ ಜ್ವಾಲಾಮುಖಿ ಸ್ಫೋಟದಿಂದ ತತ್ತರಿಸಿದ್ದ ಟೊಂಗಾ ರಾಷ್ಟ್ರದಲ್ಲಿ ಇದೀಗ ಭೂಕಂಪ ಸಂಭವಿಸಿದೆ. ಟೊಂಗಾದ ಪಂಗೈನಲ್ಲಿ ರಿಕ್ಟರ್​ ಮಾಪಕದಲ್ಲಿ 6.2 ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದೆ.

ಪಂಗೈನಿಂದ ಪಶ್ಚಿಮ - ವಾಯುವ್ಯದೆಡೆ 219 ಕಿಲೋ ಮೀಟರ್​ ದೂರ ಹಾಗೂ 14.5 ಕಿಮೀ ಆಳದಲ್ಲಿ ಭೂಕಂಪನ ಕೇಂದ್ರ ಬಿಂದು ದಾಖಲಾಗಿದೆ ಎಂದು ಅಮೆರಿಕ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.

ಇದನ್ನೂ ಓದಿ: ಟೊಂಗಾ ಸಾಗರದಾಳದಲ್ಲಿ ಜ್ವಾಲಾಮುಖಿ ಸ್ಫೋಟ: ಸುನಾಮಿ ಭೀತಿಯಿಂದ ರಾಷ್ಟ್ರಗಳು ಪಾರು

ಇನ್ನು ಘಟನೆಯಲ್ಲಿ ಯಾವುದೇ ಸಾವು - ನೋವು ವರದಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.