ETV Bharat / entertainment

'ಸ್ಯಾಮ್​​ ಬಹದ್ದೂರ್': ಪ್ರೇಕ್ಷಕರಿಗೆ ರೋಮಾಂಚಕ ಅನುಭವ ನೀಡಿದ ದೇಶದ ಮೊದಲ ಫೀಲ್ಡ್‌ ಮಾರ್ಷಲ್ ಕಹಾನಿ

author img

By ETV Bharat Karnataka Team

Published : Dec 1, 2023, 12:44 PM IST

Sam Bahadur reviews: ವಿಕ್ಕಿ ಕೌಶಲ್​​ ಮುಖ್ಯಭೂಮಿಕೆಯ 'ಸ್ಯಾಮ್​​ ಬಹದ್ದೂರ್' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Sam Bahadur X reviews
'ಸ್ಯಾಮ್​​ ಬಹದ್ದೂರ್' ವಿಮರ್ಷೆ

ಇಂದು ಬಾಲಿವುಡ್​ನ ಎರಡು ಬಹುನಿರೀಕ್ಷಿತ ಚಿತ್ರಗಳಾದ 'ಸ್ಯಾಮ್​​ ಬಹದ್ದೂರ್' ಮತ್ತು 'ಅನಿಮಲ್​​' ತೆರೆಗಪ್ಪಳಿಸಿದ್ದು, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿವೆ. ಚಿತ್ರಮಂದಿರಗಳಲ್ಲಿ ಶಿಳ್ಳೆ, ಚಪ್ಪಾಳೆಗಳ ಸದ್ದಿನಿಂದಾಗಿ ಹಬ್ಬದ ವಾತಾವರಣ ಕಂಡುಬಂತು. ಎರಡೂ ಸಿನಿಮಾಗಳಿಗೆ ಸಿನಿಪ್ರಿಯರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಇನ್ನೇನಿದ್ದರೂ ಬಾಕ್ಸ್ ಆಫೀಸ್ ಅಂಕಿಅಂಶಗಳ ಮೇಲೆ ಸೋಲು, ಗೆಲುವು ನಿರ್ಧಾರವಾಗಲಿದೆ.

ಭಾರತದ ಮೊದಲ ಫೀಲ್ಡ್‌ ಮಾರ್ಷಲ್ ಸ್ಯಾಮ್​ ಮಾಣೆಕ್‌ ಶಾ ಜೀವನಾಧಾರಿತ ಕಥೆ 'ಸ್ಯಾಮ್​​ ಬಹದ್ದೂರ್'ನಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಕ್ಕಿ ಕೌಶಲ್​​ ಅಭಿನಯಿಸಿದ್ದಾರೆ. 1971ರ ಇಂಡೋ-ಪಾಕ್​​ ಯುದ್ಧದ ಸಮಯದಲ್ಲಿ ಸೇನಾ ಮುಖ್ಯಸ್ಥರಾಗಿದ್ದ ಸ್ಯಾಮ್ ಮಾಣೆಕ್‌ ಶಾ ತಮ್ಮ ನಾಲ್ಕು ದಶಕಗಳ ವೃತ್ತಿಜೀವನದಲ್ಲಿ ಐದು ಪ್ರಮುಖ ಯುದ್ಧಗಳಲ್ಲಿ ಭಾಗಿಯಾಗಿದ್ದರು. ಈ ರೋಚಕ ಕಹಾನಿಯನ್ನು ಮೇಘನಾ ಗುಲ್ಜಾರ್ ನಿರ್ದೇಶಿಸಿದ್ದಾರೆ.

ಮಿಶ್ರ ಪ್ರತಿಕ್ರಿಯೆ: ವಿಕ್ಕಿ ಕೌಶಲ್ ಅವರು ಸ್ಯಾಮ್ ಮಾಣೆಕ್​​ ಶಾ ಅವರ ಪಾತ್ರವನ್ನು ನಿಭಾಯಿಸಿರುವ ರೀತಿಗೆ ಪ್ರಶಂಸೆ ವ್ಯಕ್ತವಾಗಿದೆ. ಆದಾಗ್ಯೂ, ನಿರ್ದೇಶನದ ಶೈಲಿಗೆ ಕೆಲವರಿಂದ ಟೀಕೆಯೂ ಕೇಳಿಬಂದಿದೆ.

'ಸ್ಯಾಮ್​​ ಬಹದ್ದೂರ್' ಬಿಡುಗಡೆಗೂ ಮುನ್ನ ನಿರ್ಮಾಪಕರು ಮುಂಬೈನಲ್ಲಿ ಸ್ಪೆಷಲ್​ ಶೋ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಕೌಶಲ್​ ಕುಟುಂಬ ಹಾಜರಿತ್ತು.

ಇದನ್ನೂ ಓದಿ: ಚೆಂದಕ್ಕಿಂತ ಚೆಂದ ತಮನ್ನಾ ಅಂದ; ಅಭಿಮಾನಿಗಳನ್ನು ಆಕರ್ಷಿಸಿದ ಹೊಸ ಫೋಟೋಗಳಿವು

ಸಿನಿ ಕ್ಷೇತ್ರದ ಗಣ್ಯರು ಸಿನಿಮಾ ವಿಮರ್ಶೆ ಮಾಡಿದ್ದಾರೆ. ಜರಾ ಹಟ್ಕೆ ಜರಾ ಬಚ್ಕೆ ಚಿತ್ರದಲ್ಲಿ ವಿಕ್ಕಿ ಕೌಶಲ್ ಅವರೊಂದಿಗೆ ತೆರೆ ಹಂಚಿಕೊಂಡ ಸಾರಾ ಅಲಿ ಖಾನ್ ಸೋಷಿಯಲ್​ ಮೀಡಿಯಾ ಅಕೌಂಟ್​​ಗಳಲ್ಲಿ ವಿಕ್ಕಿ ಅವರ ಪೋಸ್ಟರ್ ಹಂಚಿಕೊಂಡು, ಚಿತ್ರತಂಡವನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಸ್ಯಾಮ್ ಬಹದ್ದೂರ್ ಸ್ಪೆಷಲ್​ ಶೋನಲ್ಲಿ ವಿಕ್ಯಾಟ್: ಮ್ಯಾಚಿಂಗ್​ ಡ್ರೆಸ್​ನಲ್ಲಿ ಕಂಗೊಳಿಸಿದ ಸ್ಟಾರ್ ಕಪಲ್

ಬಾಲಿವುಡ್​ನ ಖ್ಯಾತ ಚಿತ್ರ ನಿರ್ಮಾಪಕ ಕರಣ್ ಜೋಹರ್ ಸಿನಿಮಾ ಕುರಿತು ಪ್ರತಿಕ್ರಿಯಿಸಿ, ವಿಕ್ಕಿ ಕೌಶಲ್​​ ನಟನೆ ಮತ್ತು ಇಂಥ ಪ್ರಾಜೆಕ್ಟ್​ ನೀಡಿದ ಚಿತ್ರ ನಿರ್ಮಾಪಕರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಸಂಶೋಧನೆ ಕೈಗೊಂಡು ಮತ್ತು ನಿಖರತೆಯುಳ್ಳ ಕಥೆಗಳನ್ನು ಹೇಳುವ ಶೈಲಿಗೆ ನಿರ್ದೇಶಕಿ ಮೇಘನಾ ಗುಲ್ಜಾರ್ ಅವರನ್ನು ಕರಣ್ ಮೆಚ್ಚಿಕೊಂಡಿದ್ದಾರೆ.

  • Had high hopes from movie Sam bahadur watched it on thursday,Vicky Kaushal haa given his best but direction is not upto mark, movie feels like Documentary not stitched properly,lot of things are left for audience to understand.

    — Sunil (@imsunilvn) December 1, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಅನಿಮಲ್ ಬಿಡುಗಡೆ: ಪ್ರೇಕ್ಷಕರ ಮನ ಗೆದ್ದ ರಣಬೀರ್​ ಕಪೂರ್​; ನೆಟ್ಟಿಗರು ಹೇಳಿದ್ದೇನು?

ಹಿರಿಯ ನಿರ್ಮಾಪಕ ಸುಭಾಷ್ ಘಾಯ್ ಅವರು ವಿಕ್ಕಿ ಕೌಶಲ್ ಅಭಿನಯಕ್ಕೆ ಫುಲ್ ಮಾರ್ಕ್ಸ್‌ ಕೊಟ್ಟಿದ್ದಾರೆ. ಸಿನಿಮಾ ವ್ಯವಹಾರ ವಿಶ್ಲೇಷಕ ಸುಮಿತ್ ಕಡೀಲ್ ಸ್ಯಾಮ್ ಬಹದ್ದೂರ್ ಕಲೆಕ್ಷನ್​ ಕುರಿತು ಸುಳಿವು ಬಿಟ್ಟುಕೊಟ್ಟಿದ್ದಾರೆ. ಮೊದಲ ದಿನದ ಮುಂಗಡ ಟಿಕೆಟ್ ಬುಕಿಂಗ್ ವ್ಯವಹಾರ ಸುಮಾರು 8 ಕೋಟಿ ರೂ.ನಷ್ಟು ನಡೆದಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.