ETV Bharat / entertainment

ರಿಷಭ್​ ಪಂತ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ಸೆ ಫೋಟೋ ಹಂಚಿಕೊಂಡ ಊರ್ವಶಿ ರೌಟೇಲಾ

author img

By

Published : Jan 6, 2023, 3:52 PM IST

ರಿಷಭ್​ ಪಂತ್ ಚಿಕಿತ್ಸೆ ಪಡೆಯುತ್ತಿರುವ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಫೋಟೋವನ್ನು ನಟಿ ಊರ್ವಶಿ ರೌಟೇಲಾ ಹಂಚಿಕೊಂಡಿದ್ದಾರೆ.

Urvashi Rautela
ಊರ್ವಶಿ ರೌಟೇಲಾ ಪೋಸ್ಟ್

ಡಿಸೆಂಬರ್​ 30ರಂದು ಕಾರು ಅಪಘಾತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡಿರುವ ಕ್ರಿಕೆಟಿಗ ರಿಷಭ್​ ಪಂತ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉತ್ತರಾಖಂಡದ ಡೆಹ್ರಾಡೂನ್​ನಿಂದ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ 4 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದರು. ಇದೀಗ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಫೋಟೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಿಷಭ್ ಪಂತ್ ಅವರು ಕಾರು ಅಪಘಾತಕ್ಕೀಡಾದ ನಂತರ ಮಾಡೆಲ್, ನಟಿ ಊರ್ವಶಿ ರೌಟೇಲಾ ಸಾಮಾಜಿಕ ಮಾಧ್ಯಮದಲ್ಲಿ ರಹಸ್ಯ ಪೋಸ್ಟ್‌ಗಳನ್ನು ಹಂಚಿಕೊಳ್ಳುವುದನ್ನು ಮುಂದುವರೆಸಿದ್ದಾರೆ. ಅಪಘಾತದ ಸುದ್ದಿ ಹೊರ ಬರುತ್ತಿದ್ದಂತೆ "ಪ್ರೇಯಿಂಗ್" ಎಂದು ತಮ್ಮ ಫೋಟೋವೊಂದನ್ನು ಹಂಚಿಕೊಂಡಿದ್ದರು. ಪ್ರಾರ್ಥನೆ ಎಂಬ ಒಂದು ಪದದ ಸಂದೇಶವನ್ನು ಹಂಚಿಕೊಳ್ಳುವುದರಿಂದ ಹಿಡಿದು ಕ್ರಿಕೆಟಿಗ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಚಿತ್ರವನ್ನು ಹಂಚಿಕೊಳ್ಳುವವರೆಗೆ, ಊರ್ವಶಿ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೂ ರಿಷಭ್​​ಗೂ ಏನಾದರೂ ಸಂಬಂಧವಿದೆಯೇ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಆದರೆ ಯಾವುದಕ್ಕೂ ಸ್ಪಷ್ಟತೆ ಸಿಕ್ಕಿಲ್ಲ.

ಊರ್ವಶಿ ರೌಟೇಲಾ ಪೋಸ್ಟ್: ಗುರುವಾರದಂದು ಊರ್ವಶಿ ರೌಟೇಲಾ ಅವರು ಕ್ರಿಕೆಟಿಗನನ್ನು ದಾಖಲಿಸಿರುವ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಯ ಚಿತ್ರವನ್ನು ತಮ್ಮ ಇನ್​ಸ್ಟಾಗ್ರಾಮ್​​ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದಾರೆ. ತಾವು ಕ್ರಿಕೆಟಿಗ ರಿಷಭ್​ ಪಂತ್ ಅವರನ್ನು ಭೇಟಿ ಮಾಡಿದ್ದಾರೆಯೇ ಎಂಬುದನ್ನು ಊರ್ವಶಿ ಸ್ಪಷ್ಟಪಡಿಸಿಲ್ಲ. ಆದರೆ, ಅವರು ಪೋಸ್ಟ್ ಅನ್ನು ಹಂಚಿಕೊಂಡ ಕೂಡಲೇ ಅದು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪಂತ್ ಅವರನ್ನು ಆಸ್ಪತ್ರೆಯಲ್ಲಿ ನಟಿ ಭೇಟಿಯಾಗಿರಬಹುದು ಎಂದು ಅಭಿಮಾನಿಗಳು ಊಹಿಸಲು ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ: ಡೆಹ್ರಾಡೂನ್​ನಿಂದ ಮುಂಬೈಗೆ ರಿಷಭ್​ ಏರ್​ಲಿಫ್ಟ್: ಅಂಬಾನಿ ಆಸ್ಪತ್ರೆಗೆ ಪಂತ್​ ದಾಖಲು

ನಟಿಯ ಈ ಮೊದಲ ಪೋಸ್ಟ್ ಏನಿತ್ತು?: ದೆಹಲಿಯಿಂದ ರೂರ್ಕಿಗೆ ಹೋಗುವ ರಸ್ತೆಯಲ್ಲಿ ಡಿಸೆಂಬರ್ 30ರ ಮುಂಜಾನೆ ಕ್ರಿಕೆಟಿಗ ರಿಷಭ್​​​ ಪಂತ್ ಕಾರು ಅಪಘಾತಕ್ಕೊಳಗಾಗಿದೆ. ಪಂತ್​ ಗಂಭೀರ ಅಪಘಾತಕ್ಕೊಳಗಾದ ಸುದ್ದಿ ಹೊರಬರುತ್ತಿದ್ದಂತೆ ನಟಿ ಊರ್ವಶಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ಸುಂದರ ಫೋಟೋವೊಂದನ್ನು ಹಂಚಿಕೊಂಡಿದ್ದರು. ಆ ಚಿತ್ರಕ್ಕೆ "ಪ್ರಾರ್ಥನೆ" ಎಂದು ಬರೆದುಕೊಂಡಿದ್ದ ನಟಿ ಬಿಳಿ ಹೃದಯದ ಇಮೋಜಿ, ಬಿಳಿ ಪಾರಿವಾಳ ಇಮೋಜಿ ಮತ್ತು 8 ನಕ್ಷತ್ರಗಳ ಸಿಂಬಲ್​ ಹಾಕಿಕೊಂಡಿದ್ದರು.

ಆ ಪೋಸ್ಟ್ ಯಾರಿಗೆ ಎಂದು ನಟಿ ತಿಳಿಸದಿದ್ದರೂ ಕೂಡ, ರಿಷಭ್ ಪಂತ್​ ಅವರಿಗಾಗಿಯೇ ಹಾಕಿರೋದು ಎಂದು ಊಹಿಸಲಾಗಿತ್ತು. ಅಭಿಮಾನಿಗಳು ಊರ್ವಶಿ ಅವರ ಪೋಸ್ಟ್​ನ ಕಾಮೆಂಟ್ ವಿಭಾಗಕ್ಕೆ ಹೋಗಿ ಚಿಕಿತ್ಸೆಯಲ್ಲಿರುವ ರಿಷಭ್​​​ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುವ ಸಂದೇಶಗಳನ್ನು ಬರೆದಿದ್ದರು. ಇದೀಗ ಹೊಸ ಫೋಟೋ ಇವರಿಬ್ಬರ ನಡುವಿನ ವದಂತಿಗಳಿಗೆ ಪುಷ್ಠಿ ನೀಡುವಂತಿದೆ.

ಇದನ್ನೂ ಓದಿ: ರಿಷಭ್​​ ಪಂತ್ ಕಾರು ಅಪಘಾತ: ನಟಿ ಊರ್ವಶಿ ರೌಟೇಲಾ ಪೋಸ್ಟ್ ಏನಿತ್ತು?

ರಿಷಭ್​ ಪಂತ್​ ಚಿಕಿತ್ಸೆ: ದೆಹಲಿ - ಡೆಹ್ರಾಡೂನ್​ ಹೆದ್ದಾರಿಯಲ್ಲಿ​ ಕಾರು ಅಪಘಾತಕ್ಕೊಳಗಾದ ರಿಷಭ್​ ಪಂತ್​ ಅವರಿಗೆ ಅಂದಿನಿಂದ 6 ದಿನಗಳ ಕಾಲ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಜನವರಿ 4ರಂದು ಮುಂಬೈನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.