ETV Bharat / entertainment

'ಸಲಾರ್'​ ಗಳಿಕೆಯಲ್ಲಿ ಇಳಿಕೆ: ಪ್ರಶಾಂತ್​ ನೀಲ್​ ಸಿನಿಮಾ ಗಳಿಸಿದ್ದಿಷ್ಟು!

author img

By ETV Bharat Karnataka Team

Published : Dec 27, 2023, 1:34 PM IST

Salaar collection
ಸಲಾರ್​ ಕಲೆಕ್ಷನ್​​

Salaar collection: ಸಲಾರ್​ ಸಿನಿಮಾ ಕೇವಲ ಐದೇ ದಿನಗಳಲ್ಲಿ ಭಾರತದಲ್ಲಿ 278.90 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸ್​ ಪ್ರಮುಖ ಪಾತ್ರ ನಿರ್ವಹಿಸಿರುವ ಸಲಾರ್​​ ಸಿನಿಮಾ ಕಳೆದ ಶುಕ್ರವಾರ ತೆರೆಗಪ್ಪಳಿಸಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಬಹುತೇಕ ಸಕಾರಾತ್ಮಕ ಪ್ರತಿಕ್ರಿಯೆ ಸ್ವೀಕರಿಸಿದೆ. ಗಲ್ಲಾಪೆಟ್ಟಿಗೆಯಲ್ಲಿ ಅದ್ಭುತ ಅಂಕಿ ಅಂಶಗಳೊಂದಿಗೆ ಪ್ರಯಾಣ ಆರಂಭಿಸಿತ್ತು. ಅದಾಗ್ಯೂ, ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಸಲಾರ್​ ತನ್ನ ಮೊದಲ ಮಂಗಳವಾರ ಬಾಕ್ಸ್ ಆಫೀಸ್​ನಲ್ಲಿ ಕೊಂಚ ಕುಸಿತ ಕಂಡಿದೆ. ವಾರದ ದಿನಗಳಾದ ಹಿನ್ನೆಲೆ ಸಿನಿಮಾ ಗಳಿಕೆ ಇಳಿಕೆಯಾಗಿದೆ.

ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಸಲಾರ್ ಡಿಸೆಂಬರ್ 22 ರಂದು ಅಂದರೆ ಕಳೆದ ಶುಕ್ರವಾರ ಚಿತ್ರಮಂದಿರ ಪ್ರವೇಶಿಸಿದೆ. ಅಂದಿನಿಂದಲೂ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ವಾರಾಂತ್ಯದಲ್ಲಿ ಉತ್ತಮ ವ್ಯವಹಾರ ನಡೆಸಿದ್ದಲ್ಲದೇ, ಕ್ರಿಸ್ಮಸ್​​ ರಜಾದಿನದ ಸದುಪಯೋಗ ಪಡೆದುಕೊಂಡಿದೆ. ಸಿನಿಮಾ ತನ್ನ ಸೋಮವಾರವೂ ಅದ್ಭುತ ಪ್ರದರ್ಶನ ನೀಡಿದೆ. ಆದರೆ ಮಂಗಳವಾರದ ಗಳಿಕೆಯಲ್ಲಿ ಕೊಂಚ ಹಿನ್ನೆಡೆ ಕಂಡಿದೆ. ಸಲಾರ್​ ಕಳೆದ ದಿನ ಭಾರತದಲ್ಲಿ ಎಲ್ಲಾ ಭಾಷೆಯೂ ಸೇರಿ ಸರಿಸುಮಾರು 23.50 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಈವರೆಗೆ 278.90 ಕೋಟಿ ರೂಪಾಯಿ ಸಂಪಾದಿಸಿದೆ.

ಸಲಾರ್​ ಸಿನಿಮಾ ತೆರೆಕಂಡ ದಿನವೇ ಭಾರತೀಯ ಬಾಕ್ಸ್ ಆಫೀಸ್​ನಲ್ಲಿ 90.07 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತು. ಈ ಮೂಲಕ 2023ರಲ್ಲಿ ಮೊದಲ ದಿನವೇ ಅತಿ ಹೆಚ್ಚು ಕಲೆಕ್ಷನ್​​ ಮಾಡಿದ ಸಿನಿಮಾವಾಗಿ ಹೊರಹೊಮ್ಮಿತು. ಎರಡನೇ ದಿನ 56.35 ಕೋಟಿ ರೂ., ಮೂರನೇ ದಿನ 62.05 ಕೋಟಿ ರೂ., ನಾಲ್ಕನೇ ದಿನ 41.24 ಕೋಟಿ ರೂ. ಗಳಿಸಿದ್ದ ಸಲಾರ್​ ಐದನೇ ದಿನ 23.50 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

ಇದನ್ನೂ ಓದಿ: ಬಿಗ್​ ಬಾಸ್​ಗೆ ಅಮ್ಮ ಬಂದ್ರೂ ಮಾತುಕತೆಯಿಲ್ಲ; ಬಿಕ್ಕಿ ಬಿಕ್ಕಿ ಅತ್ತ ಕಾರ್ತಿಕ್!

ಬಾಹುಬಲಿ 1 ಮತ್ತು​ 2 ಸಿನಿಮಾಗಳ ಬಳಿಕ ಬಂದ ಪ್ರಭಾಸ್ ಅವರ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣಲಿಲ್ಲ. ಸಲಾರ್ ಮೇಲೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಳ್ಳಲಾಗಿತ್ತು. ಸಿನಿಮಾ ಯಶ ಕಂಡಿದ್ದು, ಪ್ರಶಾಂತ್​ ನೀಲ್​ ಮತ್ತು ಪ್ರಭಾಸ್​ ಸೇರಿದಂತೆ ಚಿತ್ರತಂಡ ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ. ರಾಜ್‌ಕುಮಾರ್ ಹಿರಾನಿಯವರ ಡಂಕಿ ಸಿನಿಮಾ ಸಲಾರ್​ಗೂ ಒಂದು ದಿನ ಮುನ್ನ ತೆರೆಕಂಡಿದ್ದು, ಬಾಕ್ಸ್​ ಆಫೀಸ್​ ಪೈಪೋಟಿ ಏರ್ಪಟ್ಟಿದೆ. ಅದಾಗ್ಯೂ ಸಲಾರ್​​ ಭರ್ಜರಿ ಅಂಕಿ ಅಂಶಗಳೊಂದಿಗೆ ಮುನ್ನುಗ್ಗುತ್ತಿದೆ. ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿ ರೂಪಾಯಿಯ ಗಡಿ ಮೀರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಬರ್ತ್​​ಡೇ ಬಾಯ್​​​ ಸಲ್ಲುಗೆ ಕಿಚ್ಚನ ಸ್ಪೆಷಲ್​ ವಿಶ್​​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.