ETV Bharat / entertainment

Actor Ganesh: 'ಕೃಷ್ಣಂ ಪ್ರಣಯ ಸಖಿ' ಬೆನ್ನಲ್ಲೇ 42ನೇ ಸಿನಿಮಾ ಘೋಷಿಸಿದ ಗೋಲ್ಡನ್​ ಸ್ಟಾರ್ ಗಣೇಶ್

author img

By

Published : Jul 2, 2023, 4:34 PM IST

ganesh upcoming movie
ಗೋಲ್ಡನ್ ಸ್ಟಾರ್ ಗಣೇಶ್ ಮುಂಬರುವ ಸಿನಿಮಾಗಳು

ಗೋಲ್ಡನ್​ ಸ್ಟಾರ್ ಗಣೇಶ್ ಅಭಿನಯದ 42ನೇ ಸಿನಿಮಾ ಘೋಷಣೆ ಆಗಿದೆ.

ಬಹು ಸಮಯದಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಬೇಡಿಕೆ ನಟ ಗೋಲ್ಡನ್​ ಸ್ಟಾರ್ ಗಣೇಶ್​. ಕಿರುತೆರೆಯಲ್ಲೇ ಕಾಮಿಡಿ ಟೈಮ್​ ಮೂಲಕ ಸಾಕಷ್ಟು ಜನಪ್ರಿಯರಾಗಿದ್ದ ಇವರು ಹಿರಿತೆರೆಯಲ್ಲೂ ಮೋಡಿ ಮಾಡಿ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ. ನಗು ಮೊಗದ ನಟ ಗಣೇಶ್​ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅವರ ಮುಂದಿನ ಮತ್ತೊಂದು ಸಿನಿಮಾ ಘೋಷಣೆ ಆಗಿದೆ.

ಗೋಲ್ಡನ್​ ಸ್ಟಾರ್ ಗಣೇಶ್ ಅವರಿಗಿಂದು 43ನೇ ಹುಟ್ಟುಹಬ್ಬದ ಸಂಭ್ರಮ. ಕುಟುಂಬಸ್ಥರು, ಸ್ನೇಹಿತರು, ಸಿನಿ ಉದ್ಯಮದ ಸಹುದ್ಯೋಗಿಗಳೂ ಸೇರಿದಂತೆ ಅಭಿಮಾನಿಗಳಿಂದ ಶುಭಾಶಯಗಳ ಸಂದೇಶ ಹರಿದುಬರುತ್ತಿದೆ. ನಟ ಗಣೇಶ್ ಅವರಿಗೆ ಈ ಸಾಲಿನ ಹುಟ್ಟುಹಬ್ಬ ವಿಶೇಷ ಅಂತಾನೇ ಹೇಳಬಹುದು. ಏಕೆ ಅಂತೀರಾ?. ನಿನ್ನೆಯಷ್ಟೇ ನಟನ ಮುಂದಿನ ಸಿನಿಮಾ ಘೋಷಣೆ ಆಗಿ ಪೋಸ್ಟರ್ ಬಿಡುಗಡೆ ಆಯಿತು. ಇಂದು ಆ ಸಿನಿಮಾದ ಮತ್ತೊಂದು ಪೋಸ್ಟರ್ ರಿಲೀಸ್​ ಆಯಿತು. ಇದರ ಬೆನ್ನಲ್ಲೇ ಗೋಲ್ಡನ್​ ಸ್ಟಾರ್ ಗಣೇಶ್ ಮುಖ್ಯಭೂಮಿಕೆಯ ಮತ್ತೊಂದು ಸಿನಿಮಾ ಘೋಷಣೆ ಆಗಿದೆ. ಈ ಹಿನ್ನೆಲೆ ದೊಡ್ಡ ಸಂಖ್ಯೆಯ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

43ನೇ ಹುಟ್ಟುಹಬ್ಬ ಸೆಲೆಬ್ರೇಟ್​ ಮಾಡಿಕೊಳ್ಳುತ್ತಿರುವ ಕನ್ನಡ ಚಿತ್ರರಂಗದ ಗಣಿ ಅವರ 42ನೇ ಸಿನಿಮಾ ಘೋಷಣೆ ಆಗಿದೆ. ಸ್ವತಃ ನಟ ಗಣೇಶ್​ ಸೋಷಿಯಲ್​ ಮೀಡಿಯಾದಲ್ಲಿ ಸಿನಿಮಾದ ಪೋಸ್ಟ್ ಶೇರ್ ಮಾಡಿದ್ದಾರೆ. ವಿಖ್ಯಾತ್​ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. #GOLDENSTAR42 ಎಂದು ಬರೆದಿರುವ ಪೋಸ್ಟರ್ ನೋಡುಗರ ಗಮನ ಸೆಳೆದಿದೆ. ಮತ್ತೊಂದು ಗಮನಾರ್ಹ ವಿಷಯವೆಂದರೆ ಇದು ಪ್ಯಾನ್​ ಇಂಡಿಯಾ ಸಿನಿಮಾವಂತೆ. ಬಹುಭಾಷೆಗಳಲ್ಲಿ ಬಿಗ್​ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಆಗಲಿದೆ ಎಂಬ ವರದಿಗಳಿದ್ದು, ಸಿನಿಮಾಗೆ ಸಂಬಂಧಿಸಿದ ಹೆಚ್ಚಿನ ಅಧಿಕೃತ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: Sudeep 46: 'ನಾನು ಮನುಷ್ಯ ಅಲ್ಲ ರಾಕ್ಷಸ' - ಕಿಚ್ಚ ಸುದೀಪ್‌ ಹೊಸ ಸಿನಿಮಾದ ಟೀಸರ್ ರಿಲೀಸ್‌, ರಗಡ್ ಲುಕ್‌ನಲ್ಲಿ ಅಬ್ಬರ!

'ಕೃಷ್ಣಂ ಪ್ರಣಯ ಸಖಿ' ನಟನ 42ನೇ ಚಿತ್ರ. ನಿನ್ನೆಯಷ್ಟೇ ಗಣಿ ಸಿನಿಮಾ ಕುರಿತು ಘೋಷಣೆ ಆಗಿತ್ತು. ಅಲ್ಲದೇ ಪೋಸ್ಟರ್ ಅನಾವರಣಗೊಳಿಸಿ ಚಿತ್ರತಂಡ ಅಡ್ವಾನ್ಸ್ ವಿಶ್​ ತಿಳಿಸಿತ್ತು. ಇಂದು ಗಣೇಶ್​ ಅವರ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡ ವಿಶೇಷವಾಗಿ ಶುಭ ಕೋರಿದೆ. ಸೂಟು ಬೂಟು ಧರಿಸಿ ಸಖತ್​ ಸ್ಟೈಲಿಶ್​​ ಆಗಿ ರೆಡಿಯಾಗಿರುವ ನಟ ಗಣೇಶ್​ ಕೈಯಲ್ಲಿ ಬಕೆಟ್​, ನೆಲ ಒರೆಸುವ ಸ್ಟಿಕ್ ಹಿಡಿದಿದ್ದಾರೆ. ಶ್ರೀನಿವಾಸರಾಜು ಆ್ಯಕ್ಷನ್​ ಕಟ್​ ಹೇಳುತ್ತಿರುವ ಈ ಸಿನಿಮಾಗೆ ಮಲಯಾಳಂ ಚಿತ್ರರಂಗದ ಮಾಳವಿಕ ನಾಯರ್ ನಾಯಕ ನಟಿ. ಸಿನಿಮಾದ ಚಿತ್ರೀಕರಣ ಚುರುಕುಗೊಂಡಿದೆ. ಪ್ರೇಮಮಥೆಯ ಸಿನಿಮಾ ಘೋಷಣೆ ಆಗಿ, ಪೋಸ್ಟರ್ ಬಿಡುಗಡೆಗೊಂಡ ಬೆನ್ನಲ್ಲೇ ನಟನ ಮತ್ತೊಂದು ಚಿತ್ರ ಅನೌನ್ಸ್​ ಆಗಿದೆ. #GOLDENSTAR42 ಕುರಿತು ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಗಣೇಶ್ ಅಭಿನಯದ 'ಬಾನದಾರಿಯಲ್ಲಿ' ಬಿಡುಗಡೆಗೆ ಸಜ್ಜಾಗಿದೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ 'ಗಣಿ' ಜನ್ಮದಿನ: ಕೃಷ್ಣಂ ಪ್ರಣಯ ಸಖಿ ಪೋಸ್ಟರ್ ಅನಾವರಣ ಹೊಸ ಅವತಾರದಲ್ಲಿ 'ಮುಂಗಾರು ಮಳೆ' ಗಣೇಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.