ETV Bharat / entertainment

ಬಹುನಿರೀಕ್ಷಿತ 'ಫೈಟರ್​' ಚಿತ್ರದ 'ಶೇರ್​ ಖುಲ್​ ಗಯೇ' ಹಾಡು ನಾಳೆ ಬಿಡುಗಡೆ

author img

By ETV Bharat Karnataka Team

Published : Dec 14, 2023, 11:02 PM IST

Hrithik Roshan Deepika Padukone starrer fighter first song Sher Khul Gaye out tomorrow
ಬಹುನಿರೀಕ್ಷಿತ 'ಫೈಟರ್​' ಚಿತ್ರದ 'ಶೇರ್​ ಖುಲ್​ ಗಯೇ' ಹಾಡು ನಾಳೆ ಬಿಡುಗಡೆ

Fighter First Song 'Sher Khul Gaye': ಹೃತಿಕ್​ ರೋಷನ್​ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯ 'ಫೈಟರ್​' ಚಿತ್ರದ 'ಶೇರ್​ ಖುಲ್​ ಗಯೇ' ಹಾಡು ನಾಳೆ ಬಿಡುಗಡೆಯಾಗಲಿದೆ.

ಬ್ಲಾಕ್​ಬಸ್ಟರ್ ಮೂವಿ 'ಪಠಾಣ್​​' ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಫೈಟರ್'. ದೀಪಿಕಾ ಪಡುಕೋಣೆ, ಹೃತಿಕ್ ರೋಷನ್ ಮತ್ತು ಅನಿಲ್ ಕಪೂರ್ ಮುಖ್ಯಭೂಮಿಕೆಯ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಚಿತ್ರತಂಡ ಕಳೆದ ವಾರ ಆ್ಯಕ್ಷನ್​ ಥ್ರಿಲ್ಲರ್ ಸಿನಿಮಾದ ಟೀಸರ್ ಅನ್ನು ಅನಾವರಣಗೊಳಿಸಿದ್ದು, ಮಾತ್ರವಲ್ಲದೇ ಪ್ರಮುಖ ತಾರೆಯರಾದ ದೀಪಿಕಾ, ಹೃತಿಕ್, ಅನಿಲ್, ಕರಣ್​ ಸಿಂಗ್​ ಗ್ರೋವರ್ ಅವರ ಕ್ಯಾರೆಕ್ಟರ್ ಪೋಸ್ಟರ್‌ಗಳನ್ನು ಸಹ ಹಂಚಿಕೊಂಡಿತ್ತು. ಇದೀಗ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್​ ಆಗಿದೆ.

ಇಂದು ದೀಪಿಕಾ ಪಡುಕೋಣೆ 'ಫೈಟರ್​' ಚಿತ್ರದ 'ಶೇರ್​ ಖುಲ್​ ಗಯೇ' ಹಾಡಿನ ಟೀಸರ್​ ಅನ್ನು ಹಂಚಿಕೊಂಡಿದ್ದಾರೆ. 'ನಾವು ಪಾರ್ಟಿಯನ್ನು ಆರಂಭಿಸೋಣ. 'ಶೇರ್​ ಖುಲ್​ ಗಯೇ' ಹಾಡು ನಾಳೆ ಬಿಡುಗಡೆಯಾಗಲಿದೆ' ಎಂದು ಬರೆದುಕೊಂಡಿದ್ದಾರೆ. ಹೃತಿಕ್​ ರೋಷನ್​ ಅವರ ನೃತ್ಯದಿಂದ ಹಾಡು ಪ್ರಾರಂಭವಾಗುತ್ತದೆ. ಅದರ ನಂತರ ದೀಪಿಕಾ ಅವರ ಒಂದು ನೋಟವನ್ನು ಹಾಡಿನಿಂದ ತೋರಿಸಲಾಗಿದೆ. ಇಬ್ಬರೂ ಸ್ಟಾರ್​ಗಳು ತಮ್ಮ ಪಾರ್ಟಿ ಲುಕ್​ನಲ್ಲಿ ಅದ್ಭುತವಾಗಿ ಕಾಣುತ್ತಿದ್ದಾರೆ. ಹೃತಿಕ್​-ದೀಪಿಕಾ ಪಾರ್ಟಿ ಸಾಂಗ್​ ನಾಳೆ ಬಿಡುಗಡೆ ಆಗಲಿದೆ.

ಇತ್ತೀಚೆಗೆ ಅನಾವರಣಗೊಂಡಿರುವ ಟೀಸರ್​ ಸಖತ್​ ಸದ್ದು ಮಾಡುತ್ತಿದೆ. ಸ್ಕ್ವಾಡ್ರನ್ ಲೀಡರ್ ಶಂಶೇರ್ ಪಠಾನಿಯಾ (ಪ್ಯಾಟಿ) ಆಗಿ ಹೃತಿಕ್ ರೋಷನ್, ಸ್ಕ್ವಾಡ್ರನ್ ಲೀಡರ್ ಮಿನಲ್ ರಾಥೋರ್ (ಮಿನ್ನಿ) ಆಗಿ ದೀಪಿಕಾ ಪಡುಕೋಣೆ ಮತ್ತು ಕಮಾಂಡಿಂಗ್ ಆಫೀಸರ್ ಆಗಿ ಅನಿಲ್​ ಕಪೂರ್​​, ಗ್ರೂಪ್ ಕ್ಯಾಪ್ಟನ್ ಆಗಿ ರಾಕೇಶ್ ಜೈ ಸಿಂಗ್​​ ನಟಿಸಿದ್ದಾರೆ. ಇವರೆಲ್ಲರ ಪಾತ್ರ ಪರಿಚಯ ಟೀಸರ್​ನಲ್ಲಿದೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ಫೈಟರ್ ಸಿನಿಮಾವನ್ನು ಮಾರ್ಫ್ಲಿಕ್ಸ್ ಪಿಕ್ಚರ್ಸ್ ಸಹಯೋಗದೊಂದಿಗೆ ವಯಾಕಾಮ್ 18 ಸ್ಟುಡಿಯೋಸ್ ಪ್ರಸ್ತುತಪಡಿಸಲಿದೆ. ಸಿನಿಮಾ ಬಿಗ್ ಸ್ಟಾರ್ ಕಾಸ್ಟ್ ಮತ್ತು ಆಕರ್ಷಕ ಕಥಾಹಂದರದೊಂದಿಗೆ ಗಮನ ಸೆಳೆಯುತ್ತಿದೆ. ಈ ಹಿಂದೆ ಬ್ಯಾಂಗ್ ಬ್ಯಾಂಗ್ (2014) ಮತ್ತು ವಾರ್ (2019) ನಂತಹ ಬ್ಲಾಕ್‌ಬಸ್ಟರ್‌ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಸಿದ್ಧಾರ್ಥ್ ಆನಂದ್​ ಮತ್ತು ಹೃತಿಕ್ ರೋಷನ್​ ಕಾಂಬೋದ ಮೂರನೇ ಸಿನಿಮಾವಾಗಿದೆ. ಹೃತಿಕ್ ಮತ್ತು ದೀಪಿಕಾ ಮುಖ್ಯಭೂಮಿಕೆಯ ಚೊಚ್ಚಲ ಚಿತ್ರವಿದು. ಅನಿಲ್ ಕಪೂರ್ ಕೂಡ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.

ವರದಿಗಳ ಪ್ರಕಾರ, ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರ 3D ಫಾರ್ಮ್ಯಾಟ್​ನಲ್ಲಿ ಬಿಡುಗಡೆ ಆಗಲಿದೆ. ಅದ್ಭುತ ಸಿನಿಮೀಯ ಅನುಭವ ನೀಡುವ ಗುರಿಯನ್ನು ಚಿತ್ರತಂಡ ಹೊಂದಿದೆ. 2024ರ ಜನವರಿ 25 ರಂದು ಚಿತ್ರ ತೆರೆಕಾಣಲಿದೆ.

ಇದನ್ನೂ ಓದಿ: ದೀಪಿಕಾ, ಹೃತಿಕ್​ 'ಫೈಟರ್' ಪ್ರಚಾರ ಪ್ರಾರಂಭ: ಪೋಸ್ಟರ್ ಅನಾವರಣ; ಡಿಸೆಂಬರ್​ನಲ್ಲಿ ಟೀಸರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.