ETV Bharat / entertainment

ದೀಪಿಕಾ, ಹೃತಿಕ್​ 'ಫೈಟರ್' ಪ್ರಚಾರ ಪ್ರಾರಂಭ: ಪೋಸ್ಟರ್ ಅನಾವರಣ; ಡಿಸೆಂಬರ್​ನಲ್ಲಿ ಟೀಸರ್

author img

By ETV Bharat Karnataka Team

Published : Nov 25, 2023, 6:48 PM IST

2024ರ ಜನವರಿ 25ರಂದು ಬಿಡುಗಡೆಯಾಗಲು ಸಜ್ಜಾಗಿರುವ 'ಫೈಟರ್' ಸಿನಿಮಾ ಈಗಲೇ ಪ್ರಚಾರ ಪ್ರಾರಂಭಿಸಿದೆ.

fighter poster
ಫೈಟರ್ ಪೋಸ್ಟರ್

ಬ್ಲಾಕ್​ಬಸ್ಟರ್ ಪಠಾಣ್​​ ನಿರ್ದೇಶಕ ಸಿದ್ಧಾರ್ಥ್ ಆನಂದ್ ನಿರ್ದೇಶನದ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಫೈಟರ್'. ಬಹುಬೇಡಿಕೆ ತಾರೆಯರಾದ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಪ್ರಮುಖ ಪಾತ್ರ ನಿರ್ವಹಿಸಿರುವ ವೈಮಾನಿಕ ಆ್ಯಕ್ಷನ್ ಸಿನಿಮಾ ಸಿನಿಪ್ರಿಯರ ಗಮನ ಸೆಳೆದಿದೆ. ಸಿನಿಮಾ ಬಿಡುಗಡೆಗೆ ಎರಡು ತಿಂಗಳಿದ್ದು, ಪ್ರಚಾರ ಪ್ರಾರಂಭವಾಗಿದೆ. ಪೋಸ್ಟರ್ ಹಂಚಿಕೊಂಡು ನಾಯಕ ನಟ ಹೃತಿಕ್ ರೋಷನ್​​ ಗಮನ ಸೆಳೆದಿದ್ದಾರೆ. ಸುಧೀರ್ಘ ಪ್ರಚಾರದ ತಂತ್ರ ರೂಪಿಸಿರುವ ತಂಡ, ಡಿಸೆಂಬರ್​ನಲ್ಲಿ ಟೀಸರ್​ ಅನಾವರಣಗೊಳಿಸಲು ಸಿದ್ಧತೆ ನಡೆಸಿದೆ.

ಫೈಟರ್ ಪೋಸ್ಟರ್ ಅನಾವರಣ: ಇಂದು ನಟ ಹೃತಿಕ್ ರೋಷನ್ ತಮ್ಮ ಇನ್​ಸ್ಟಾಗ್ರಾಮ್​​ ಸ್ಟೋರೀಸ್‌ನಲ್ಲಿ ಫೈಟರ್‌ನ ಪೋಸ್ಟರ್​ ಹಂಚಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಗೆ ಎರಡು ತಿಂಗಳಿರುವುದನ್ನು ಪೋಸ್ಟರ್ ಸೂಚಿಸಿದೆ. ಪೋಸ್ಟರ್‌ನಲ್ಲಿ, ಯುದ್ಧ ವಿಮಾನಗಳು ನಿಂತಿವೆ. ಮೇಲೆ 'ಎರಡು ತಿಂಗಳು' ಎಂದು ಬರೆಯಲಾಗಿದೆ. ಜೊತೆಗೆ "ಹಾರಲು ಹುಟ್ಟಿದ್ದೇನೆ. ರಕ್ಷಿಸುವುದಾಗಿ ಪ್ರಮಾಣ ಮಾಡಿದ್ದೇನೆ" ("Born to fly. Sworn to protect") ಎಂಬ ಬರಹ ಸಿನಿಪ್ರಿಯರ ಗಮನ ಸೆಳೆದಿದೆ. ನಿರ್ದೇಶಕ ಸಿದ್ಧಾರ್ಥ್ ಆನಂದ್ ಮತ್ತು ನಟ ಅನಿಲ್ ಕಪೂರ್ ಕೂಡ ಇದೇ ಪೋಸ್ಟರ್ ಅನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಅಕ್ಟೋಬರ್ 4 ರಂದು ನಿರ್ದೇಶಕ ಸಿದ್ಧಾರ್ಥ್ ಆನಂದ್ ತಮ್ಮ ಫೈಟರ್ ಸಿನಿಮಾದ ಇಟಲಿ ಶೂಟಿಂಗ್​​ ಶೆಡ್ಯೂಲ್​ ಪೂರ್ಣಗೊಂಡಿರುವುದಾಗಿ ಸೋಷಿಯಲ್​ ಮಿಡಿಯಾ ಪ್ಲಾಟ್​ಪಾರ್ಮ್​ ಎಕ್ಸ್​ನಲ್ಲಿ ತಿಳಿಸಿದ್ದರು. ನಂತರ ವಾಯುಪಡೆ ಅಧಿಕಾರಿ ಪಾತ್ರಗಳನ್ನು ನಿರ್ವಹಿಸುತ್ತಿರುವವರನ್ನು ಒಳಗೊಂಡ ತೆರೆಮರೆಯ ಫೋಟೋವನ್ನೂ ಹಂಚಿಕೊಂಡಿದ್ದರು.

fighter poster
ಫೈಟರ್ ಪೋಸ್ಟರ್

ಇದನ್ನೂ ಓದಿ: ಬಿಗ್​ ಬಾಸ್: 'ಅಂದು ಕಾರ್ತಿಕ್​​, ಇಂದು ವಿನಯ್'​​; ಸಂಗೀತಾಗೆ ಕಿಚ್ಚನಿಂದ ಗೆಳೆತನದ ಪಾಠ?!

ಗಣರಾಜ್ಯೋತ್ಸವ ಸಂದರ್ಭ ಸಿನಿಮಾ ಬಿಡುಗಡೆ: ಫೈಟರ್ ಕಥೆಗೆ ನಿರ್ದೇಶಕ ಸಿದ್ಧಾರ್ಥ್ ಆನಂದ್ ಸಹ ಬರಹಗಾರರಾಗಿಯೂ ಕೆಲಸ ಮಾಡಿದ್ದಾರೆ. ಅವರು ಶಾರುಖ್ ಖಾನ್ ಅವರ ಸೂಪರ್​ ಹಿಟ್ ಸಿನಿಮಾ ಪಠಾಣ್​ಗೆ ಹೆಸರುವಾಸಿಯಾಗಿದ್ದಾರೆ. ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಅವರನ್ನೊಳಗೊಂಡ ಈ ಸಿನಿಮಾ ವೈಮಾನಿಕ ಆ್ಯಕ್ಷನ್ ಸರಣಿಯ ಭಾಗ. 2024ರ ಗಣರಾಜ್ಯೋತ್ಸವ ಸಂದರ್ಭ ಸಿನಿಮಾ ಬಿಡುಗಡೆ ಆಗಲಿದೆ. ಮೊದಲು ಇದೇ ಸಾಲಿನ ಸೆಪ್ಟೆಂಬರ್​ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕಾರಣಗಳಿಂದ ಚಿತ್ರಿಕರಣ ವಿಳಂಬವಾಗಿ 2024ಕ್ಕೆ ಮುಂದೂಡಲಾಗಿದೆ. ಜನವರಿ 25 ರಂದು ಸಿನಿಮಾ ಬಿಡುಗಡೆ ಆಗಲಿದೆ. ಡಿಸೆಂಬರ್ ಆರಂಭದಲ್ಲಿ ಟೀಸರ್ ಬಿಡುಗಡೆಯಾಗುವ ಸಾಧ್ಯತೆಗಳಿವೆ..

ಇದನ್ನೂ ಓದಿ: 7 ಭಾಷೆಗಳಲ್ಲಿ 'ಕಾಂತಾರ' ದರ್ಶನ: 100 ಕೋಟಿ ಬಜೆಟ್​ ಸಿನಿಮಾದ ಫಸ್ಟ್ ಲುಕ್​ ರಿಲೀಸ್​ಗೆ ಕಾತರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.