ETV Bharat / entertainment

ಬೇಷರಮ್​ ರಂಗ್ ವಿವಾದ: 'ಪಠಾಣ್​' ಬಾಯ್ಕಾಟ್​ ಬಗ್ಗೆ ಮೌನ ಮುರಿದ ಶಾರುಖ್ ಖಾನ್

author img

By

Published : Dec 15, 2022, 8:13 PM IST

ಸಾಮಾಜಿಕ ಜಾಲತಾಣವು ಒಂದು ನಿರ್ದಿಷ್ಟ ಸಂಕುಚಿತ ದೃಷ್ಟಿಕೋನದಿಂದ ನಡೆಸಲ್ಪಡುತ್ತಿದೆ. ಅದು ಮಾನವ ಸ್ವಭಾವವನ್ನು ಅದರ ಕೀಳು ಸ್ವಭಾವಕ್ಕೆ ಸೀಮಿತಗೊಳಿಸುತ್ತಿದೆ ಎಂದು ಬಾಲಿವುಡ್​ ನಟ ಶಾರುಖ್ ಖಾನ್ ಹೇಳಿದ್ದಾರೆ.

besharam-rang-song-row-shah-rukh-khan-breaks-silence-on-boycott-pathaan
ಬೇಷರಮ್​ ರಂಗ್ ವಿವಾದ: 'ಪಠಾಣ್​' ಬಾಯ್ಕಾಟ್​ ಬಗ್ಗೆ ಮೌನ ಮುರಿದ ಶಾರುಖ್ ಖಾನ್

ಕೋಲ್ಕತ್ತಾ(ಪಶ್ಚಿಮ ಬಂಗಾಳ): 'ಪಠಾಣ್​' ಚಿತ್ರದ ಬೇಷರಮ್​ ರಂಗ್ ಹಾಡು ವಿವಾದಕ್ಕೆ ಸಿಲುಕಿರುವುದರೊಂದಿಗೆ ಚಿತ್ರವನ್ನು ಬಾಯ್ಕಾಟ್ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಚಿತ್ರದ ನಾಯಕ ಶಾರುಖ್ ಖಾನ್ ಮೊದಲ ಬಾರಿಗೆ ಈ ವಿವಾದದ ಬಗ್ಗೆ ಮಾತನಾಡಿದ್ದು, ಸಾಮಾಜಿಕ ಜಾಲತಾಣಗಳ ಬಳಕೆ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

ಡಿ.12ರಂದು 'ಪಠಾಣ್​' ಚಿತ್ರದ ಮೊದಲ ಹಾಡು 'ಬೇಷರಮ್​​ ರಂಗ್' ಆನ್‌ಲೈನ್‌ನಲ್ಲಿ ಬಿಡುಗಡೆಯಾಗಿದೆ. ಹಾಡಿನಲ್ಲಿ ನಾಯಕಿ ದೀಪಿಕಾ ಪಡುಕೋಣೆ ಧರಿಸಿರುವ ಕೇಸರಿ ಬಿಕಿನಿ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಿವೆ. ಅಷ್ಟೇ ಅಲ್ಲ, ಚಿತ್ರವನ್ನು ಬಾಯ್ಕಾಟ್​ ಅರ್ಥಾತ್ ಬಹಿಷ್ಕರಿಸಬೇಕೆಂದು​ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯವೂ ಕೇಳಿ ಬರುತ್ತಿದೆ.

  • #WATCH | Social media often driven by a certain narrowness of view that limits human nature to its baser self...I read somewhere-negativity increases social media consumption...Such pursuits enclose collective narrative making it divisive & destructive: Shah Rukh Khan at Kolkata pic.twitter.com/LO1X5YUXh4

    — ANI (@ANI) December 15, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಇನ್ನೂ ಎಷ್ಟು ದಿನ ಅಂಧಭಕ್ತರನ್ನು ಸಹಿಸಿಕೊಳ್ಳಬೇಕು?: ಪ್ರಕಾಶ್​ ರಾಜ್​ ಟ್ವೀಟ್

ಈ ಬಗ್ಗೆ ಕೋಲ್ಕತ್ತಾದಲ್ಲಿ ಮಾತನಾಡಿರುವ ಶಾರುಖ್, ಸಾಮಾಜಿಕ ಜಾಲತಾಣವು ಒಂದು ನಿರ್ದಿಷ್ಟ ಸಂಕುಚಿತ ದೃಷ್ಟಿಕೋನದಿಂದ ನಡೆಸಲ್ಪಡುತ್ತಿದೆ. ಅದು ಮಾನವ ಸ್ವಭಾವವನ್ನು ಅದರ ಕೀಳು ಸ್ವಭಾವಕ್ಕೆ ಸೀಮಿತಗೊಳಿಸುತ್ತಿದೆ. ನಕಾರಾತ್ಮಕತೆಯನ್ನೂ ಹೆಚ್ಚಿಸುತ್ತದೆ. ಜಗತ್ತು ಏನೇ ಮಾಡಿದರೂ ನಮ್ಮಂತಹ ಜನರು ಸಕಾರಾತ್ಮಕವಾಗಿಯೇ ಉಳಿಯುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ಗೆ ಶಾಕ್​ ಮೇಲೆ ಶಾಕ್​.. ಉತ್ತರ ಪ್ರದೇಶದಲ್ಲೂ ಪಠಾಣ್​​ ಸಿನಿಮಾಗೆ ಬಾಯ್ಕಾಟ್​ ಬಿಸಿ!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.