ETV Bharat / entertainment

ಡಾಲಿ ಅಭಿನಯದ ಪ್ಯಾನ್ ಇಂಡಿಯಾ ಚಿತ್ರಕ್ಕೆ ಟೈಟಲ್ ಫಿಕ್ಸ್

author img

By

Published : Jan 26, 2023, 5:54 PM IST

zebra movie
ಝೀಬ್ರಾ ಸಿನಿಮಾ

ಕನ್ನಡ ನಟ ಡಾಲಿ ಧನಂಜಯ್ ಮತ್ತು ತೆಲುಗಿನ ಸತ್ಯದೇವ್ ಜೊತೆಯಾಗಿ ನಟಿಸುತ್ತಿರುವ ಚಿತ್ರಕ್ಕೆ ಝೀಬ್ರಾ (zebra) ಎಂದು ಹೆಸರಿಡಲಾಗಿದೆ.

ಕನ್ನಡ ಚಿತ್ರರಂಗ ಯಶಸ್ಸಿನ ಹುಮ್ಮಸ್ಸಿನೊಂದಿಗೆ ಹೆಜ್ಜೆ ಇಡುತ್ತಿದೆ. ಉತ್ತಮ ಕಥಾಹಂದರದ ಜೊತೆಗೆ ಅತ್ಯುತ್ತಮ ಮೇಕಿಂಗ್​ನಲ್ಲಿ ಚಿತ್ರಗಳು ಮೂಡಿಬರುತ್ತಿವೆ. 2022ರಲ್ಲಿ ತೆರೆಕಂಡ ಕೆಜಿಎಫ್​ 2, ಕಾಂತಾರದಂತಹ ಚಿತ್ರಗಳು ಸ್ಯಾಂಡಲ್​ವುಡ್​ನ ಲೆವೆಲ್​ ಅನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ. ಇಡೀ ಭಾರತೀಯ ಚಿತ್ರರಂಗದ ಕಣ್ಣು ಸ್ಯಾಂಡಲ್​ವುಡ್​ ಮೇಲೆ ನೆಟ್ಟಿದೆ. ಯಶಸ್ಸಿನ ಮಾರ್ಗದಲ್ಲಿರುವ ನಮ್ಮ ಚಿತ್ರರಂಗ ಅತ್ಯುತ್ತಮ ಚಿತ್ರಗಳನ್ನೇ ಕೊಡಲು ಪೂರ್ಣ ಪ್ರಮಾಣದಲ್ಲಿ ಪರಿಶ್ರಮ ಹಾಕುತ್ತಿದೆ.

ಕೇವಲ ಕರ್ನಾಟಕಕ್ಕೆ ಸೀಮಿತವಾಗಿದ್ದ ನಮ್ಮ ಸಿನಿಮಾ ರಂಗವೀಗ ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ತನ್ನ ಛಾಪು ಮೂಡಿಸಿದೆ. ಪ್ಯಾನ್​ ಇಂಡಿಯಾ ಮಟ್ಟಿಗೆ ಹಲವು ಸಿನಿಮಾಗಳು ಮೂಡಿಬಂದಿವೆ. ಇದೀಗ ಮತ್ತೊಬ್ಬ ಬಹುಬೇಡಿಕೆ ನಟನ ಪ್ಯಾನ್ ಇಂಡಿಯಾ ಚಿತ್ರದ ಶೂಟಿಂಗ್​ ಭರದಿಂದ ಸಾಗಿದೆ.

ಡಾಲಿ ಪ್ಯಾನ್​ ಇಂಡಿಯಾ ಸಿನಿಮಾ: ಕನ್ನಡ ಚಿತ್ರರಂಗದ ನಟ ರಾಕ್ಷಸ ಎಂದು ಖ್ಯಾತಿ ಪಡೆದಿರುವ ಡಾಲಿ ಧನಂಜಯ್ ಕೆಲ ಹಿಟ್​ ಸಿನಿಮಾಗಳನ್ನು ಪ್ರೇಕ್ಷಕರಿಗೆ ತಲುಪಿಸಿದ್ದಾರೆ. ಅಮೋಘ ನಟನೆಗೆ ಹೆಸರುವಾಸಿ ಆಗಿರುವ ಅವರು ಮಾಡಿದ ಇತ್ತೀಚಿನ ಸಿನಿಮಾಗಳೆಲ್ಲವೂ ಒಂದು ಮಟ್ಟಿನ ಯಶಸ್ಸು ಕಂಡಿವೆ. ತನ್ನ ಪರಿಶ್ರಮದ ಮೂಲಕ ಬಹುಬೇಡಿಕೆ ನಟನಾಗಿ ಗುರುತಿಕೊಂಡಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಮಾಡುತ್ತಿರುವ ಅವರು ಇದೀಗ ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ಬ್ಯುಸಿ ಆಗಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

ಝೀಬ್ರಾ ಸಿನಿಮಾ: ನಟ ಡಾಲಿ ಧನಂಜಯ್ ಮತ್ತು ತೆಲುಗಿನ ಸತ್ಯದೇವ್ ಜೊತೆಯಾಗಿ ನಟಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಚಿತ್ರಕ್ಕೆ ಝೀಬ್ರಾ (zebra) ಎಂಬ ಶೀರ್ಷಿಕೆ ಇಡಲಾಗಿದ್ದು ಈ ಚಿತ್ರದ ಪೋಸ್ಟರ್ ಅನ್ನು ಚಿತ್ರತಂಡ ಅನಾವರಣ ಮಾಡಿದೆ.

ರವಿ ಬಸ್ರೂರು ಸಂಗೀತ: ಓಲ್ಡ್​ ಟೌನ್ ಪಿಕ್ಚರ್ಸ್ ಎಲ್ಎಲ್ಪಿ ಮತ್ತು ಪದ್ಮಜಾ ಫಿಲ್ಮ್ಸ್​ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ನಿರ್ಮಿಸುತ್ತಿರುವ ಈ ಚಿತ್ರವನ್ನು ಪೆಂಗ್ವಿನ್ ಖ್ಯಾತಿಯ ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ. ಝೀಬ್ರಾ ಚಿತ್ರತಂಡಕ್ಕೆ ಇದೀಗ ಕೆಜಿಎಫ್ 1 ಮತ್ತು ಕೆಜಿಎಫ್​​ 2 ಸೇರಿದಂತೆ ಮುಂತಾದ ಹಿಟ್ ಚಿತ್ರಗಳ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಆಗಮನವಾಗಿದೆ. ಇತ್ತೀಚೆಗಷ್ಟೇ ಅಜಯ್ ದೇವಗನ್ ನಿರ್ದೇಶನದ ಭೋಲಾ ಚಿತ್ರಕ್ಕೆ ಹಿನ್ನೆಲೆ ಸಂಗೀತ ಸಂಯೋಜಿಸಿರುವ ರವಿ ಬಸ್ರೂರು ಅವರೀಗ ಝೀಬ್ರಾ ಚಿತ್ರಕ್ಕೂ ಸಂಗೀತ ಸಂಯೋಜಿಸುತ್ತಿದ್ದಾರೆ.

ಇದನ್ನೂ ಓದಿ: ಹಸೆಮಣೆ ಏರಿದ 'ಸಿಂಹಪ್ರಿಯಾ'...ಫೋಟೋ ಹಂಚಿಕೊಂಡ ಡಾಲಿ

ಚಿತ್ರತಂಡಕ್ಕೆ ರವಿ ಬಸ್ರೂರು ಸೇರ್ಪಡೆ ಆಗಿರುವ ವಿಷಯ ಕುರಿತು ಮಾತನಾಡಿರುವ ನಿರ್ಮಾಪಕರಾದ ಬಾಲಸುಂದರಂ ಮತ್ತು ಪದ್ಮಜಾ ರೆಡ್ಡಿ ಅವರು, 'ರವಿ ಬಸ್ರೂರು ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತವು ಈ ಚಿತ್ರದ ಹೈಲೈಟ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅವರು ಚಿತ್ರದ ಆತ್ಮವನ್ನು ತಮ್ಮ ಸಂಗೀತದ ಮೂಲಕ ಅದ್ಭುತವಾಗಿ ಎತ್ತಿಹಿಡಿಯಲಿದ್ದಾರೆ' ಎಂದು ಹೇಳಿದ್ದಾರೆ.

ಮೊದಲ ಹಂತದ ಶೂಟಿಂಗ್​ ಕಂಪ್ಲೀಟ್: ಇನ್ನೂ ಝೀಬ್ರಾ ಚಿತ್ರದಲ್ಲಿ ಧನಂಜಯ್​ ಮತ್ತು ಸತ್ಯದೇವ್ ಜೊತೆಗೆ ಕಟ್ಟಪ್ಪ ಖ್ಯಾತಿಯ ಸತ್ಯರಾಜ್, ಸುನೀಲ್ ಮುಂತಾದವರು ನಟಿಸುತ್ತಿದ್ದಾರೆ. ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣ ಮತ್ತು ಅನಿಲ್ ಕ್ರಿಶ್ ಅವರ ಸಂಕಲನ ಈ ಚಿತ್ರಕ್ಕಿದೆ. ಮೀರಾಕ್ ಅವರ ಸಂಭಾಷಣೆ‌ ಇದ್ದು, ರಾಬಿನ್ ಸುಬ್ಬು ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಲಿದ್ದಾರೆ .ಈಗಾಗಲೇ 50 ದಿನಗಳ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಬಾಕಿ ಉಳಿದಿರುವ ಚಿತ್ರೀಕರಣವನ್ನು ಹೈದರಾಬಾದ್, ಕೊಲ್ಕತ್ತಾ, ಮುಂಬೈ ಸೇರಿದಂತೆ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿದೆ.

ಇದನ್ನೂ ಓದಿ: ಕೆಜಿಎಫ್​ 2 ದಾಖಲೆ ಮುರಿದ ಪಠಾಣ್​: ಮೊದಲ ದಿನವೇ ಕೋಟಿ ಕೋಟಿ ಬಾಚಿಕೊಂಡ ಶಾರುಖ್ ಸಿನಿಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.