ಹೈದರಾಬಾದ್: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್. ದೇಶದ ಜನಮಾನಸದ ಹೆಸರು. ಈ ಕಂಪನಿ ದೇಶದ ನಂಬರ್ ಒನ್ ಕಂಪನಿ. ಈ ಕಂಪನಿಯ ನಿರ್ದೇಶಕಿ ಇಶಾ ಅಂಬಾನಿ ಆ ಒಂದು ಹೇಳಿಕೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಭಾರತವು ಅಭಿವೃದ್ಧಿ ಹೊಂದಬೇಕಾದರೆ ಹುಡುಗಿಯರು, ಅಂದರೆ ಯುವ ವಲಯ ವಿಜ್ಞಾನ ಮತ್ತು ತಂತ್ರಜ್ಞಾನ (STEM) ಕ್ಷೇತ್ರದಲ್ಲಿ ದುಡಿಯಬೇಕು. ವಿಜ್ಞಾನ ತಂತ್ರಜ್ಞಾನವನ್ನು ಕಲಿತು ಅದರ ಶ್ರೇಯಸ್ಸಿಗೆ ದುಡಿಯಬೇಕು ಎಂದು ಅವರು ಸಲಹೆ ನೀಡಿದ್ದಾರೆ. ನವ ಯುವತಿಯರು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡರೆ ದೇಶದ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆ ನೀಡಬಹುದು ಎಂದು ಅವರು ಸಲಹೆ ನೀಡಿದ್ದಾರೆ. 'ಗರ್ಲ್ಸ್ ಆನ್ ಇನ್ಫರ್ಮೇಷನ್ ಅಂಡ್ ಕಮ್ಯುನಿಕೇಷನ್ಸ್ ಟೆಕ್ನಾಲಜಿ ಡೇ 2024' ಎಂಬ ಕಾರ್ಯಕ್ರಮದಲ್ಲಿ ಬುಧವಾರ ಪಾಲ್ಗೊಂಡ ಅವರು ಈ ಎಲ್ಲ ಸಲಹೆಗಳನ್ನು ನೀಡಿದ್ದಾರೆ.
'ನಿಮ್ಮ ಕನಸಿನ ಭಾರತ ಕಟ್ಟಲು ನೀವು ಮಾಡಬೇಕಾಗಿರುವು ಇದನ್ನೇ' : ನಮ್ಮ ಕನಸಿನ ಭಾರತವನ್ನು ನಿರ್ಮಿಸಲು, ಪುರುಷರು ಮತ್ತು ಮಹಿಳೆಯರು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಇದು ಲಿಂಗ ಪಕ್ಷಪಾತವನ್ನು ಸೂಚಿಸುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ಭಾಗಿಯಾಗಿರುವುದು ಈಗಿನ ತುರ್ತು ಅಗತ್ಯವಾಗಿದೆ. ಇದು ಉದ್ಯಮಕ್ಕೂ ಬಹಳ ಅವಶ್ಯಕವಾಗಿದೆ. ಭಾರತದಲ್ಲಿ ಶೇಕಡಾ 36 ರಷ್ಟು ಮಹಿಳೆಯರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇದೀಗ ಕೆಲಸ ಮಾಡುತ್ತಿದ್ದಾರೆ, ಆದರೆ ಅವರೆಲ್ಲ ಕೇವಲ ಎಕ್ಸಿಕ್ಯೂಟಿವ್ ಹಂತದ ಹುದ್ದೆಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಶೇಕಡಾ 17 ರಷ್ಟು ಮಂದಿ ನಿರ್ದೇಶಕರ ಹುದ್ದೆಯಲ್ಲಿದ್ದಾರೆ. ಇದೆಲ್ಲ ಬದಲಾಗಬೇಕು. ಪುರಷರಿಗೆ ಸರಿಸಮಾನವಾಗಿ ನೀವು ಆ ಕ್ಷೇತ್ರದಲ್ಲಿ ಅವಕಾಶ ಪಡೆದುಕೊಂಡು ಮಿಂಚಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಮಹಿಳೆಯರು ಜನ್ಮತಃ ನಾಯಕರು!: ಭಾರತದಲ್ಲಿ ಶೇ 43ರಷ್ಟು STEM ನಲ್ಲಿ ಪದವೀಧರರಾಗಿದ್ದಾರೆ. ಅವರಲ್ಲಿ ಕೇವಲ 14 ಪ್ರತಿಶತದಷ್ಟು ವಿಜ್ಞಾನಿಗಳು, ಎಂಜಿನಿಯರ್‌ಗಳು ಮತ್ತು ತಂತ್ರಜ್ಞರಿದ್ದಾರೆ. ಈ ತಾಂತ್ರಿಕ ಯುಗದಲ್ಲಿ ಸ್ಟಾರ್ಟ್‌ಅಪ್‌ಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಕೊರತೆಯಿದೆ. ಮಹಿಳೆಯರು ಪುರುಷರಿಗಿಂತ ಕಡಿಮೆ ಏನಿಲ್ಲ. ಅವರು ಕಂಪನಿಗಳನ್ನು ಮುನ್ನಡೆಸಬಹುದು. ಆದರೆ ಪುರುಷನ ಬೆಳವಣಿಗೆಗಿಂತ ಮಹಿಳೆಯ ಬೆಳವಣಿಗೆ ಹೆಚ್ಚು ಕಷ್ಟಕರವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಅವರು, ಮಹಿಳೆಯರು ಹುಟ್ಟುತ್ತಲೇ ನಾಯಕರು ಎಂದು ಹೇಳಿದ್ದು, ಮಹಿಳಾ ಯುವ ವಲಯಕ್ಕೆ ಸ್ಪೂರ್ತಿಯ ಮಾತುಗಳನ್ನು ಆಡಿದ್ದಾರೆ.