ETV Bharat / crime

ಪತ್ನಿ ಜೊತೆ ಸೇರಿ ನೌಕರನಿಂದಲೇ ಬ್ಯಾಂಕ್ ಲೂಟಿ.. ಲಾಕರ್​ನಲ್ಲಿದ್ದ 48 ಲಕ್ಷ ಮೌಲ್ಯದ ನಗದು, ವಸ್ತು ಕಳ್ಳತನ

author img

By

Published : Dec 19, 2022, 5:48 PM IST

ನೌಕರನಿಂದಲೇ ಬ್ಯಾಂಕ್ ಲೂಟಿ: ಲಾಕರ್​ನಲ್ಲಿದ್ದ 48 ಲಕ್ಷ ಮೌಲ್ಯದ ನಗದು, ವಸ್ತು ಕಳ್ಳತನ
bank-robbery-by-the-employee-48-lakhs-worth-of-cash-and-material-stolen-from-the-locker

ಎಲ್ಲಿಸ್‌ಬ್ರಿಡ್ಜ್ ಠಾಣೆ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಯುವಕ ಚಿರಾಗ್ ದತನಿಯಾ ಎಂಬಾತನ ಬಳಿ ಚಿನ್ನಾಭರಣ ಮತ್ತು ವಿದೇಶಿ ಕರೆನ್ಸಿ ನೋಟುಗಳ ಜೊತೆಗೆ ಇನ್ನಿತರ ಬೆಲೆಬಾಳುವ ವಸ್ತುಗಳು ದೊರಕಿವೆ. ಪೊಲೀಸರ ಪ್ರಕಾರ, ಆರೋಪಿಯು ಎಲ್ಲಿಸ್‌ಬ್ರಿಡ್ಜ್ ಪ್ರೀತಮ್ ನಗರ ಬಳಿಯಿರುವ ಬ್ಯಾಂಕ್ ಆಫ್ ಬರೋಡಾದಲ್ಲಿ ಗುತ್ತಿಗೆ ಆಧಾರದ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾನೆ.

ಅಹಮದಾಬಾದ್(ಗುಜರಾತ್): ಬ್ಯಾಂಕ್​ ನೌಕರನೊಬ್ಬ ತಾನು ಕೆಲಸ ಮಾಡುವ ಬ್ಯಾಂಕಿನಲ್ಲೇ ಲೂಟಿ ಮಾಡಿದ ಘಟನೆ ಜರುಗಿದೆ. ಬ್ಯಾಂಕ್ ಗುತ್ತಿಗೆ ಆಧಾರದ ಸಿಬ್ಬಂದಿಯೋರ್ವ​ ತನ್ನ ಪತ್ನಿಯ ಜೊತೆಗೂಡಿ ಬ್ಯಾಂಕಿನ ಲಾಕರ್ ಒಡೆದು ಲಕ್ಷಾಂತರ ರೂಪಾಯಿ ಲೂಟಿ ಮಾಡಿದ್ದಾನೆ.

ಅನುಮಾನದ ಮೇಲೆ ಪೊಲೀಸರು ಯುವಕನೊಬ್ಬನನ್ನು ವಿಚಾರಣೆಗೆ ಒಳಪಡಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ಯುವಕನೊಬ್ಬನನ್ನು ತಡೆದು ವಿಚಾರಿಸಿದಾಗ ಆತನ ಬಳಿ ಚಿನ್ನಾಭರಣ ತುಂಬಿದ್ದ ಬ್ಯಾಗ್ ಸಿಕ್ಕಿದೆ. ಇದೇ ವೇಳೆ ಬ್ಯಾಂಕ್ ಲಾಕರ್​ನಲ್ಲಿ ಕಳ್ಳತನ ನಡೆದಿರುವುದು ಬಯಲಾಗಿದೆ. ಎಲ್ಲಿಸ್‌ಬ್ರಿಡ್ಜ್ ಪೊಲೀಸ್ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿರುವ ದಂಪತಿ. ಬ್ಯಾಂಕ್ ಲಾಕರ್‌ನಿಂದ 47.88 ಲಕ್ಷ ಮೌಲ್ಯದ ಮೌಲ್ಯದ ವಸ್ತುಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. ಕಳ್ಳತನಕ್ಕೆ ಯೋಜಿಸಿದ್ದ ಈ ದಂಪತಿ ಪಕ್ಕಾ ಪ್ಲಾನ್ ಮಾಡಿಯೇ ಕಳ್ಳತನದ ಕೃತ್ಯ ಎಸಗಿರುವುದು ತಿಳಿದು ಬಂದಿದೆ.

ಎಲ್ಲಿಸ್‌ಬ್ರಿಡ್ಜ್ ಠಾಣೆ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಯುವಕ ಚಿರಾಗ್ ದತನಿಯಾ ಎಂಬಾತನ ಬಳಿ ಚಿನ್ನಾಭರಣ ಮತ್ತು ವಿದೇಶಿ ಕರೆನ್ಸಿ ನೋಟುಗಳ ಜೊತೆಗೆ ಇನ್ನಿತರ ಬೆಲೆಬಾಳುವ ವಸ್ತುಗಳು ದೊರಕಿವೆ. ಪೊಲೀಸರ ಪ್ರಕಾರ, ಆರೋಪಿಯು ಎಲ್ಲಿಸ್‌ಬ್ರಿಡ್ಜ್ ಪ್ರೀತಮ್ ನಗರ ಬಳಿಯಿರುವ ಬ್ಯಾಂಕ್ ಆಫ್ ಬರೋಡಾದಲ್ಲಿ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ಆಗಿ ಕೆಲಸ ಮಾಡುತ್ತಿದ್ದಾನೆ. ತಾನು ಕೆಲಸ ಮಾಡುವ ಬ್ಯಾಂಕ್​​ನಲ್ಲಿದ್ದ ಲಾಕರ್ ಒಡೆದು ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಪೊಲೀಸರು ಬ್ಯಾಂಕಿನ ಎರಡು ಲಾಕರ್‌ಗಳನ್ನು ತೆರೆದು ನೋಡಿದಾಗ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತುಗಳು ಕಳ್ಳತನವಾಗಿರುವುದು ಪತ್ತೆಯಾಗಿದೆ. ಬಳಿಕ ಬ್ಯಾಂಕ್‌ನ ಮ್ಯಾನೇಜರ್ ಎಲ್ಲಿಸ್‌ಬ್ರಿಡ್ಜ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ದರೋಡೆಗೆ ಬಂದು ಯಮನ ಪಾದ ಸೇರಿದ.. ಪಂಜಾಬ್​ ಬಂಕ್​ನಲ್ಲಿ ಲೂಟಿಕೋರನ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.