ETV Bharat / city

ಇಂಧನ ದರ ಸ್ಥಿರ: ದೇಶಾದ್ಯಂತ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ

author img

By

Published : Jul 31, 2022, 10:21 AM IST

ಇಂಧನ ದರ
petrol

ದೇಶದಲ್ಲಿ ಇಂಧನ ದರಗಳು ನಿತ್ಯವೂ ಪರಿಷ್ಕರಿಸಲ್ಪಡುತ್ತವೆ. ತೈಲ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಒಳಗೊಂಡಿರುತ್ತದೆ. ವ್ಯಾಟ್‌ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ.

ನವದೆಹಲಿ/ಬೆಂಗಳೂರು: ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 96.72 ರೂ.ಗೆ ಇದ್ದು, ಡೀಸೆಲ್ ಬೆಲೆ 89.62 ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 106.31 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 94.27 ರೂ. ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 106.03 ರೂ. ಆಗಿದ್ದರೆ, ಡೀಸೆಲ್ ಬೆಲೆ 92.76 ರೂ. ಗೆ ದೊರೆಯುತ್ತಿದೆ.

ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ 102.65 ರೂ.ಗೆ ಮತ್ತು ಡೀಸೆಲ್‌ಗೆ 94.25 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ.

ರಾಜ್ಯದಲ್ಲಿ ತೈಲ ದರ ಇಂತಿದೆ:

ನಗರ ಪೆಟ್ರೋಲ್ (ಲೀ. ದರ) ಡೀಸೆಲ್ (ಲೀ. ದರ)
ಬೆಂಗಳೂರು 101.96 ರೂ. 87.91 ರೂ
ಶಿವಮೊಗ್ಗ 103.82 ರೂ. 89.48 ರೂ.
ಹುಬ್ಬಳ್ಳಿ 101.65 ರೂ. 87.65 ರೂ.
ಮೈಸೂರು 101.44 ರೂ. 87.43 ರೂ.
ಮಂಗಳೂರು 101.82 ( 69 ಪೈಸೆ ಹೆಚ್ಚಳ) 87.75 (62 ಪೈಸೆ ಹೆಚ್ಚಳ)
ದಾವಣಗೆರೆ103.95 ರೂ. 89.52 ರೂ.

ಇದನ್ನೂ ಓದಿ: ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೆ ಇಂದು ಕೊನೆ ದಿನ: ಗಡುವು ತಪ್ಪಿದರೆ ಏನಾಗುತ್ತೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.