ETV Bharat / entertainment

ಕೇನ್ಸ್​​ ಫೆಸ್ಟಿವಲ್​​ಗೆ ತೆರಳಿದ ಕಿಯಾರಾ: ಏರ್​ಪೋರ್ಟ್​​​​ನಲ್ಲೇ ಅದ್ಭುತ ನೋಟ, ವಿಡಿಯೋ - Kiara Advani

author img

By ETV Bharat Karnataka Team

Published : May 16, 2024, 9:38 AM IST

ಪ್ರತಿಷ್ಠಿತ 'ಕೇನ್ಸ್ ಫಿಲ್ಮ್ ಫೆಸ್ಟಿವಲ್‌'ನಲ್ಲಿ ಪಾಲ್ಗೊಳ್ಳಲು ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ ನ್ಯೂಯಾರ್ಕ್‌ಗೆ ತೆರಳಿದ್ದಾರೆ.

Kiara Advani
ಕಿಯಾರಾ ಅಡ್ವಾಣಿ (IANS)

ಬಾಲಿವುಡ್​ ಬೆಡಗಿ ಕಿಯಾರಾ ಅಡ್ವಾಣಿ ಪ್ರತಿಷ್ಠಿತ 'ಕೇನ್ಸ್ ಫಿಲ್ಮ್ ಫೆಸ್ಟಿವಲ್‌'ಗೆ ಪಾದಾರ್ಪಣೆ ಮಾಡುವ ಖುಷಿಯಲ್ಲಿದ್ದಾರೆ. ತಮ್ಮ ಚೊಚ್ಚಲ ಪ್ರಯತ್ನಕ್ಕಾಗಿ ಸಾಕಷ್ಟು ಉತ್ಸುಕರಾಗಿದ್ದು, ಅವರ ಅಭಿಮಾನಿಗಳಿಗೂ ಸಾಕಷ್ಟು ನಿರೀಕ್ಷೆ ಇದೆ. ಸೌಂದರ್ಯ ಮತ್ತು ಫಿಟ್ನೆಸ್​ಗೆ ಹೆಸರುವಾಸಿಯಾಗಿರುವ ಕಿಯಾರಾ ತಮ್ಮ ಮೋಹಕ ನೋಟ ಬೀರಲು ನ್ಯೂಯಾರ್ಕ್​ಗೆ ಪ್ರಯಾಣಿಸಿದ್ದಾರೆ. ಬುಧವಾರ ಮಧ್ಯರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ನಟಿ ಕಾಣಿಸಿಕೊಂಡಿದ್ದು, ಏರ್​ಪೋರ್ಟ್ ಲುಕ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಪಾಪರಾಜಿಗಳು ತಡರಾತ್ರಿ ಕಿಯಾರಾ ಅವರ ವಿಡಿಯೋವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್​ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ಈ ವಿಡಿಯೋದಲ್ಲಿ 'ಶೆರ್ಷಾ' ನಟಿ ಮೊದಲು ತಮ್ಮ ಮಿನುಗುವ ಕಾರಿನಿಂದ ಇಳಿಯುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ಕ್ರೀಮ್​ ಕಲರ್​ ಓವರ್​ಕೋಟ್​, ಪ್ಯಾಂಟ್​, ಸ್ವೆಟ್‌ಟಾಪ್​ನಲ್ಲಿ ಸುಂದರವಾಗಿ ಕಾಣಿಸಿಕೊಂಡರು. ಯೆಲ್ಲೋ ಪರ್ಸ್, ಮಿನಿಮಮ್​​ ಮೇಕ್ಅಪ್, ಬ್ರೌನ್​​ ಸನ್​ಗ್ಲಾಸ್​​​ ಮತ್ತು ಬನ್​​ ಹೇರ್​ಸ್ಟೈಲ್​ನೊಂದಿಗೆ ತಮ್ಮ ನೋಟ ಬೀರಿದರು. ವಿಮಾನ ನಿಲ್ದಾಣ ಪ್ರವೇಶಿಸುವ ಮೊದಲು ನಟಿ ನಗು ನಗುತ್ತಾ ಪಾಪರಾಜಿಗಳ ಕ್ಯಾಮರಾಗಳಿಗೆ ಪೋಸ್ ಕೊಟ್ಟರು.

'ಕೇನ್ಸ್ ಫಿಲ್ಮ್ ಫೆಸ್ಟಿವಲ್‌' ಪ್ರಪಂಚದ ಗಮನ ಸೆಳೆಯುವ ಕಾರ್ಯಕ್ರಮ. ತಾರೆಗಳು ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕುತ್ತಾ ತಮ್ಮ ಸೌಂದರ್ಯ ಪ್ರದರ್ಶಿಸುತ್ತಾರೆ. ಆದರೆ ಕಿಯಾರಾ ಅಡ್ವಾಣಿ ಏರ್​ಪೋರ್ಟ್‌ನಲ್ಲೇ ಧೂಳೆಬ್ಬಿಸಿದ್ದಾರೆ. ಲೇಡಿ ಬಾಸ್​​ ಲುಕ್​ನಲ್ಲಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಇಲ್ಲಿಯೇ ಹೀಗೆ, ಇನ್ನು ನ್ಯೂಯಾರ್ಕ್​ನ ಕೇನ್ಸ್ ಈವೆಂಟ್​ನಲ್ಲಿ ಹೇಗೆ? ಅಂತಿದ್ದಾರೆ ಫ್ಯಾನ್ಸ್. ಒಟ್ಟಾರೆ, ಚೆಂದುಳ್ಳಿ ಚೆಲುವೆಯ ಏರ್​ಪೋರ್ಟ್ ಲುಕ್​ ಅಭಿಮಾನಿಗಳ ಗಮನ ಸೆಳೆದಿದೆ.

ಇದನ್ನೂ ಓದಿ: ಐಶ್ವರ್ಯಾ ರೈ ಕೈಗೆ ಗಾಯ: ಮಗಳೊಂದಿಗೆ ಏರ್​​ಪೋರ್ಟ್​​​ನಲ್ಲಿ ಕಾಣಿಸಿಕೊಂಡ ಚೆಲುವೆ - Aishwarya Rai Injured

ಸತ್ಯಪ್ರೇಮ್​ ಕಿ ಕಥಾ ನಟಿ ಕಿಯಾರಾ ಅಡ್ವಾಣಿ ಅಲ್ಲದೇ, ಐಶ್ವರ್ಯಾ ರೈ ಬಚ್ಚನ್, ಶೋಭಿತಾ ಧೂಳಿಪಾಲ, ಅದಿತಿ ರಾವ್ ಹೈದರಿ ಸೇರಿದಂತೆ ಹಲವರು ಈ ವರ್ಷ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವರು. ಊರ್ವಶಿ ರೌಟೇಲಾ ಈಗಾಗಲೇ ರೆಡ್​ ಕಾರ್ಪೆಟ್​​ ಮೇಲೆ ಹೆಜ್ಜೆ ಹಾಕಿದ್ದಾರೆ. ಬುಧವಾರ ತಡರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಐಶ್ವರ್ಯಾ ಕೂಡ ಕಾಣಿಸಿಕೊಂಡರು. ಮಗಳು ಆರಾಧ್ಯ ಜೊತೆಗಿನ ನಟಿಯ ಏರ್​​ಪೋರ್ಟ್ ಲುಕ್​​ ವೈರಲ್​ ಆಗಿದೆ. ಆದ್ರೆ, ನಟಿಯ ಬಲಗೈಗೆ ಗಾಯವಾಗಿದ್ದು ಆರ್ಮ್ ಸ್ಲಿಂಗ್​ ಧರಿಸಿದ್ದರು. ಅಭಿಮಾನಿಗಳು ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ: ಲೋಕ ಸಮರದಲ್ಲಿ ಕಂಗನಾ ಫುಲ್ ಬ್ಯುಸಿ: 'ಎಮರ್ಜೆನ್ಸಿ' ಬಿಡುಗಡೆ ಮತ್ತೆ ಮುಂದೂಡಿಕೆ - Emergency Movie

ಕಿಯಾರಾ ಸಿನಿಮಾ ವಿಚಾರ ಗಮನಿಸುವುದಾದರೆ, ಎಸ್.ಶಂಕರ್ ನಿರ್ದೇಶನದ ಪೊಲಿಟಿಕಲ್​​ ಥ್ರಿಲ್ಲರ್ 'ಗೇಮ್ ಚೇಂಜರ್'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆರ್​ಆರ್​ಆರ್​ ಖ್ಯಾತಿಯ ಸೂಪರ್ ಸ್ಟಾರ್ ರಾಮ್ ಚರಣ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಅಲ್ಲದೇ ವಾರ್ 2 ಪ್ರೊಜೆಕ್ಟ್​ ಕೂಡ ನಟಿ ಬಳಿಯಿದೆ. ಇದಲ್ಲದೇ, ರಣ್​​​ವೀರ್ ಸಿಂಗ್ ಜೊತೆ 'ಡಾನ್ 3' ಸಿನಿಮಾದಲ್ಲೂ ಅಭಿನಯಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.