ETV Bharat / city

ಗಾಂಧಿ ಹತ್ಯೆ ದಿನ ಸಿಹಿ ಹಂಚಿದ ಆರ್​ಎಸ್​ಎಸ್ ದೇಶಪ್ರೇಮಿ ಸಂಘಟನೆಯಾಗಲ್ಲ: ಕಾಂಗ್ರೆಸ್

author img

By

Published : May 29, 2022, 10:49 PM IST

congress-serial-tweet-on-rss
ಗಾಂಧಿ ಹತ್ಯೆ ದಿನ ಸಿಹಿ ಹಂಚಿದ ಆರ್​ಎಸ್​ಎಸ್ ದೇಶಪ್ರೇಮಿ ಸಂಘಟನೆಯಾಗಲ್ಲ

ಆರ್​ಎಸ್​ಎಸ್​ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್​ ಅದರ ಮೂಲವನ್ನು ಪ್ರಶ್ನಿಸಿ, ಇದೀಗ ಇದೊಂದು ದೇಶಪ್ರೇಮಿ ಸಂಘಟನೆಯಲ್ಲದೇ, ದೇಶದ್ರೋಹಿ ಎಂದು ಟೀಕಿಸಿದೆ.

ಬೆಂಗಳೂರು: ಕಾಂಗ್ರೆಸ್​ ಮತ್ತು ಬಿಜೆಪಿ ಮಧ್ಯೆ ಆರ್​ಎಸ್​ಎಸ್​ ಜಗಳ ಜೋರಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ಸಂಘಟನೆಯ ಮೂಲವನ್ನು ಕೆದಕಿದರೆ, ಇಂದು ಪಕ್ಷದ ಅಧಿಕೃತ ಟ್ವಿಟ್ಟರ್​ನಲ್ಲಿ ಸರಣಿ ಟ್ವೀಟ್​ ಮಾಡಿ ಆರ್​ಎಸ್​ಎಸ್​ ದೇಶಪ್ರೇಮಿ ಸಂಘಟನೆಯಲ್ಲ, ಅದೊಂದು ಸಪುಂಸಕ ಸಂಘಟನೆ ಎಂದು ಕಟು ಪದಗಳಲ್ಲಿ ಟೀಕಿಸಿದೆ.

ದೇಶದ ರಾಷ್ಟ್ರಧ್ವಜಕ್ಕೆ ಬೆಲೆ ಕೊಡದೆ ಅವಮಾನಿಸುವ, ಈ ದೇಶ ಕಂಡ ಮಹಾದಾರ್ಶನಿಕ ಗಾಂಧಿ ಹತ್ಯೆಯನ್ನು ಸಂಭ್ರಮಿಸುವ ಆರ್​ಎಸ್​ಎಸ್ ಈ ದೇಶದ ಸಪುಂಸಕ ಸಂಘಟನೆಯೇ ಹೊರತಾಗಿ ಯಾವುದೇ ಕಾರಣಕ್ಕೂ ದೇಶಪ್ರೇಮಿ ಸಂಘಟನೆಯಾಗಲಾರದು ಎಂಬುದಕ್ಕೆ ನಿದರ್ಶನಗಳಿವೆ ಎಂದು ವಿವಿಧ ಅಂಶಗಳಲ್ಲಿ ಮಾಹಿತಿಯನ್ನು ಕಾಂಗ್ರೆಸ್ ಪಕ್ಷ ನೀಡಿದೆ.

  • ಈ ದೇಶದ ರಾಷ್ಟ್ರಧ್ವಜಕ್ಕೆ ಬೆಲೆಕೊಡದೆ ಅವಮಾನಿಸುವ, ಈ ದೇಶ ಕಂಡ ಮಹಾ ದಾರ್ಶನಿಕ ಗಾಂಧಿ ಹತ್ಯೆಯನ್ನು ಸಂಭ್ರಮಿಸುವ RSS ಈ ದೇಶದ ಸಪುಂಸಕ ಸಂಘಟನೆಯೇ ಹೊರತಾಗಿ ಯಾವುದೇ ಕಾರಣಕ್ಕೂ ದೇಶಪ್ರೇಮಿ ಸಂಘಟನೆಯಾಗಲಾರದು.

    — Karnataka Congress (@INCKarnataka) May 29, 2022 " class="align-text-top noRightClick twitterSection" data=" ">

1929 ರ ಲಾಹೋರ್ ಅಧಿವೇಶನದಲ್ಲಿ ಅಂದಿನ ಅಧ್ಯಕ್ಷರಾದ ಜವಾಹರಲಾಲ್ ನೆಹರೂರವರು ದೇಶದ ಎಲ್ಲಾ ಸಂಸ್ಥೆಗಳ ಮೇಲೆ 1930 ಜನವರಿ 26ರಂದು ತ್ರಿವರ್ಣ ಧ್ವಜ ಹಾರಿಸಬೇಕೆಂದು ಕರೆ ಕೊಡುತ್ತಾರೆ. ಇದನ್ನು ನಿರಾಕರಿಸಿದ ಆರ್​ಎಸ್​ಎಸ್ ತನ್ನ ಸಂಘದ ಕಚೇರಿಯ ಮೇಲೆ ಭಗವಾಧ್ವಜ ಹಾರಿಸುತ್ತದೆ. ಹೆಜ್ಜೆ ಹೆಜ್ಜೆಗೂ ಈ ದೇಶದ ಸ್ವಾತಂತ್ರ್ಯ ಹೋರಾಟವನ್ನು ಹೀಗಳೆಯುತ್ತಾ ಬ್ರಿಟಿಷರ ಸೈನ್ಯ ಸೇರಲು ಆರ್​ಎಸ್​ಎಸ್ ತುದಿಗಾಲಲ್ಲಿ ನಿಂತಿರಲಿಲ್ಲವೇ? ಈ ದೇಶದ ಸ್ವಾತಂತ್ರ್ಯಕ್ಕೆ ನಯಾಪೈಸೆ ಕೊಡುಗೆ ಕೊಡದ, ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರಿಗೆ ಹಿಡಿದುಕೊಡುತ್ತಿದ್ದ ಆರ್​ಎಸ್​ಎಸ್ ಸಂಘಟನೆ ದೇಶದ್ರೋಹಿ ಸಂಘಟನೆಯಲ್ಲದೆ ಮತ್ತಿನ್ನೇನು? ಎಂದು ಪ್ರಶ್ನಿಸಿದೆ.

  • 🔹ಹೆಜ್ಜೆ ಹೆಜ್ಜೆಗೂ ಈ ದೇಶದ ಸ್ವಾತಂತ್ರ್ಯ ಹೋರಾಟವನ್ನು ಹೀಗಳೆಯುತ್ತಾ ಬ್ರಿಟೀಷರ ಸೈನ್ಯ ಸೇರಲು RSS ತುದಿಗಾಲಲ್ಲಿ ನಿಂತಿರಲಿಲ್ಲವೇ?

    ಈ ದೇಶದ ಸ್ವಾತಂತ್ರ್ಯಕ್ಕೆ ನಯಾಪೈಸೆ ಕೊಡುಗೆ ಕೊಡದ, ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟೀಷರಿಗೆ ಹಿಡಿದುಕೊಡುತ್ತಿದ್ದ RSS ಸಂಘಟನೆ ದೇಶದ್ರೋಹಿ ಸಂಘಟನೆಯಲ್ಲದೆ ಮತ್ತಿನೇನು?

    — Karnataka Congress (@INCKarnataka) May 29, 2022 " class="align-text-top noRightClick twitterSection" data=" ">

ಗಾಂಧಿ ಮರಣ ಸಿಹಿ ಹಂಚಿದ್ದ ಸಂಘಟನೆ: ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನೇ ಮುಡಿಪಿಟ್ಟ ಬಾಪೂಜಿ ಮಹಾತ್ಮ ಗಾಂಧಿಯವರು ಹತ್ಯೆಯಾದ ದಿನ ಸಿಹಿ ಹಂಚಿದ ಗುಳ್ಳೆನರಿ ಆರ್​ಎಸ್​ಎಸ್ ಹೇಗೆ ತಾನೇ ದೇಶಪ್ರೇಮಿ ಸಂಘಟನೆಯಾಗಬಲ್ಲದು? ಆರ್​ಎಸ್​ಎಸ್ ಮುಖವಾಣಿ ಆರ್ಗನೈಸರ್ 1970 ಜನವರಿ 11 ರಂದು ತನ್ನ ಸಂಪಾದಕೀಯದಲ್ಲಿ ಗಾಂಧಿಯವರ ಬಗ್ಗೆ ವಿಷಪೂರಿತ ಲೇಖನ ಪ್ರಕಟಿಸಿರಲಿಲ್ಲವೇ? ನಾವು ಮೂರು ಜನ ಸಹೋದರರು ಅಂದರೆ ನಾಥೂರಾಮ, ನಾನು, ದತ್ತಾತ್ರೇಯ. ನಾವು ಮನೆಯಲ್ಲಿ ಬೆಳೆದೆವು ಎಂಬುದಕ್ಕಿಂತ ಆರ್​ಎಸ್​ಎಸ್ ಸಂಘಟನೆಯಲ್ಲೇ ಬೆಳೆದವು ಎಂದು ಹೇಳಬಹುದು. ಇದು ಗೋಪಾಲ ಗೋಡ್ಸೆಯ ಮಾತುಗಳು ಎಂದಿದೆ.

  • 🔹 ಈ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನೇ ಮುಡಿಪಿಟ್ಟ ಬಾಪೂಜೀ ಮಹಾತ್ಮ ಗಾಂಧಿಯವರು ಸತ್ತ ದಿನ ಸಿಹಿ ಹಂಚಿದ ಗುಳ್ಳೆನರಿ RSS ಹೇಗೆ ತಾನೇ ದೇಶಪ್ರೇಮಿ ಸಂಘಟನೆಯಾಗಬಲ್ಲದು?

    🔹 RSS ಮುಖವಾಣಿ ಆರ್ಗನೈಸರ್ 1970 ಜನವರಿ 11 ರಂದು ತನ್ನ ಸಂಪಾದಕೀಯದಲ್ಲಿ ಗಾಂಧಿಯವರ ಬಗ್ಗೆ ವಿಷಪೂರಿತ ಲೇಖನ ಪ್ರಕಟಿಸಿರಲಿಲ್ಲವೇ?

    — Karnataka Congress (@INCKarnataka) May 29, 2022 " class="align-text-top noRightClick twitterSection" data=" ">

ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಕೊಂದಂಥಹ ಈ ದೇಶದ ಮೊದಲ ಭಯೋತ್ಪಾದಕ ಗೋಡ್ಸೆ ತಯಾರಾಗಿದ್ದು ಸಹ ಇದೇ ಆರ್​ಎಸ್​ಎಸ್ ಗರಡಿಯಲ್ಲೇ. ಈ ಬಗ್ಗೆ ನಾಥೂರಾಮ ಗೋಡ್ಸೆಯ ಸಹೋದರ ಗೋಪಾಲ ಗೋಡ್ಸೆ ಜನವರಿ 28, 1994ರಲ್ಲಿ ಫ್ರಂಟ್​ಲೈನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಖಚಿತಪಡಿಸಿದ್ದಾರೆ. ಅಷ್ಟೇ ಅಲ್ಲದೆ ತ್ರಿವರ್ಣ ಧ್ವಜವನ್ನು ಅವಮಾನಿಸುತ್ತಾ 3 ಬಣ್ಣಗಳುಳ್ಳ ಧ್ವಜ ಅನಿಷ್ಟದ ಸಂಕೇತ ಎಂದು ಆರ್​ಎಸ್​ಎಸ್ ತನ್ನ ಮುಖವಾಣಿ ಆರ್ಗನೈಸರ್​ನಲ್ಲಿ ಬರೆಯುತ್ತದೆ. 55 ವರ್ಷಗಳ ಕಾಲ ರಾಷ್ಟ್ರಧ್ವಜಕ್ಕೆ ಗೌರವ ನೀಡದೆ ತನ್ನ ಸಂಘದ ಕಚೇರಿಯ ಮೇಲೆ ತ್ರಿವರ್ಣ ಧ್ವಜದ ಬದಲಾಗಿ ಭಗವಾಧ್ವಜ ಹಾರಿಸುತ್ತದೆ ಎಂದು ಟೀಕಿಸಿದೆ.

ಓದಿ: ಮೀಸಲಾತಿ ವಿಚಾರದಲ್ಲಿ ಸಿಎಂ ಬೊಮ್ಮಾಯಿ ಮೂರು ಬಾರಿ ಮಾತು ಕೊಟ್ಟು, ತಪ್ಪಿದ್ದಾರೆ: ಜಯಮೃತ್ಯುಂಜಯಶ್ರೀ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.